ಹಠಕ್ಕೆ ಬಿದ್ದು ಧರ್ಮೇಂದ್ರರನ್ನು ಮದುವೆಯಾಗಿದ್ದ ಹೇಮಾ ಮಾಲಿನಿ, ಪ್ರತ್ಯೇಕವಾಗಿ ವಾಸ ಮಾಡಿದ್ದೇಕೆ?
ಬಾಲಿವುಡ್‌ನಲ್ಲಿ ಹೀ-ಮ್ಯಾನ್ ಎಂದೇ ಜನಪ್ರಿಯವಾಗಿದ್ದ ನಟ ಧರ್ಮೇಂದ್ರ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಇಂದು (ನವೆಂಬರ್ 24) ಮುಂಬೈನ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದಿಗ್ಗಜನನ್ನು ಕಳೆದುಕೊಂಡು ಬಾಲಿವುಡ್ ಮಂದಿ ಶೋಕಸಾಗರದಲ್ಲಿ ಇದ್ದಾರೆ. ಧರ್ಮೇಂದ್ರ ಲೈಫ್ ಸ್ಟೋರಿ ಅವರ ಸಿನಿಮಾಗಳಷ್ಟೇ ರೋಚಕ. ಅದರಲ್ಲೂ ಎರಡನೇ ಮದುವೆ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು.
ಧರ್ಮೇಂದ್ರ ಅಂದಿನ ಕಾಲದ ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ಎರಡನೇ ಮದುವೆಯಾಗಿದ್ದರು. ಆದರೆ, ಈ ಮದುವೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೊದಲ ಪತ್ನಿಗೆ ವಿಚ್ಚೇದನ ಕೊಡುವುದಕ್ಕೆ ಮುಂದಾಗಿದ್ದರು. ಆದರೆ, ಮೊದಲ ಪತ್ನಿ ಒಪ್ಪಲಿಲ್ಲ. ಆ ವೇಳೆಗಾಗಲೇ ಹೇಮಾ ಮಾಲಿನಿಯ ಪ್ರೀತಿಯ ಬಲೆಗೆ ಧರ್ಮೇಂದ್ರ ಸಿಕ್ಕಿಕೊಂಡಿದ್ದರು. ಡ್ರೀಮ್ ಗರ್ಲ್ ಮನಸ್ಸು ಕೊಟ್ಟಾಗಿತ್ತು.

ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ, ಹೇಮಾ ಮಾಲಿನಿಯನ್ನು ಎರಡನೇ ಪತ್ನಿಯಾಗಿ ಸ್ವೀಕರಿಸುವಂತಿರಲಿಲ್ಲ. ಅದಕ್ಕಾಗಿ ಧರ್ಮೇಂದ್ರ ತನ್ನ ವೃತ್ತಿ ಬದುಕನ್ನೇ ರಿಸ್ಕ್‌ಗೆ ಸಿಲುಕಿಸಿದ್ದರು. ಹೇಮಾ ಮಾಲಿನಿ ಮದುವೆ ಆಗುವುದಕ್ಕಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಹೇಮಾ ಮಾಲಿನಿ ಕೂಡ ಮತಾಂತರಗೊಂಡ ಬಳಿಕ ಇಬ್ಬರೂ ದಾಂಪತ್ಯ ಶುರು ಮಾಡಿದ್ದರು. ಇಷ್ಟೆಲ್ಲ ಕಷ್ಟ ಪಟ್ಟು ಮದುವೆ ಆಗಿದ್ದರೂ, ಹೇಮಾ ಮಾಲಿನಿ ಮದುವೆ ಬಳಿಕ ಪ್ರತ್ಯೇಕವಾಗಿ ವಾಸವಿರುವಿದ್ದರು. ಇದು ಕೇವಲ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ, ಅವರೇ ಬರೆದ 'Hema Malini: Beyond the Dream Girl' ಆತ್ಮಚರಿತ್ರೆಯಲ್ಲಿ ಈ ಗುಟ್ಟನ್ನು ರಿವೀಲ್ ಮಾಡಿದ್ದರು.
ಹೇಮಾ ಮಾಲಿನಿ ಅಮ್ಮ ಜಯಾ ಚಕ್ರವರ್ತಿಗೆ ತನ್ನ ಮಗಳು ಧರ್ಮೇಂದ್ರ ಅವರನ್ನು ಮದುವೆ ಆಗುವುದು ಇಷ್ಟವಿರಲಿಲ್ಲ. ಅದಕ್ಕೆ ಜೀತೇಂದ್ರ ಜೊತೆ ನಿಶ್ವಿತಾರ್ಥ ಮಾಡುವುದಕ್ಕೆ ಹೊರಟಿದ್ದರು. ಇದು ತಿಳಿಯುತ್ತಿದ್ದಂತೆ ಧರ್ಮೇಂದ್ರ ನೇರವಾಗಿ ಚೆನ್ನೈಗೆ ಬಂದು ಇಳಿದಿದ್ದರು. ಹೇಮಾ ಮಾಲಿನಿಗೆ ಮದುವೆ ಆಗುವಂತೆ ಮನವಿ ಮಾಡಿದ್ದರು. ಅಷ್ಟೇ ಜೀತೇಂದ್ರ ಅವರೊಂದಿಗೆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.
ಇಷ್ಟೆಲ್ಲ ಪ್ರೀತಿ ಇಟ್ಟುಕೊಂಡಿದ್ದ ಹೇಮಾ ಮಾಲಿನಿ ಮದುವೆ ಬಳಿಕ ಪ್ರತ್ಯೇಕವಾಗಿ ವಾಸ ಮಾಡುವುದಕ್ಕೆ ಮುಂದಾಗಿದ್ದೇಕೆ? ಅನ್ನೋದನ್ನು ಅವರೇ ತನ್ನ ಆತ್ಮ ಚರಿತ್ರೆಯಲ್ಲಿ ರಿವೀಲ್ ಮಾಡಿದ್ದಾರೆ."ನಾನು ಬೇರೊಬ್ಬರ ಜೀವನವನ್ನೂ ಹಾಳು ಮಾಡುವುದಕ್ಕೆ ಇಷ್ಟ ಪಡಲಿಲ್ಲ. ಧರ್ಮೇಂದ್ರರವರ ಮೊದಲ ಪತ್ನಿ ಹಾಗೂ ಕುಟುಂಬ ಅವರೊಂದಿಗೆ ಇದೆ. ಅವರಿಗೆ ನಾಲ್ವರು ಮಕ್ಕಳು ಇದ್ದಾರೆ. ನಾನು ಅವರ ಜಾಗಕ್ಕೆ ಹೋಗಿ ತೊಂದರೆ ಕೊಡಲು ಇಷ್ಟವಾಗಲಿಲ್ಲ." ಎಂದು ಹೇಮಾ ಮಾಲಿನಿ ಹೇಳಿಕೊಂಡಿದ್ದಾರೆ.

ಹಾಗೇ ಧರ್ಮೇಂದ್ರ ಎರಡನೇ ಪತ್ನಿ ಜೊತೆಗೆ ಇದ್ದಾಗ ಹೇಗಿರುತ್ತಾರೆಂದು ಹೇಳಿಕೊಂಡಿದ್ದಾರೆ. "ಧರ್ಮೇಂದ್ರ ಅವರು ನನ್ನನ್ನು ಹಾಗೂ ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ನೋಡಲು ಪ್ರೀತಿಯನ್ನು ಹೊತ್ತುಕೊಂಡೇ ಬರುತ್ತಾರೆ. ನಮಗೆ ಅಷ್ಟು ಸಾಕು. ನಾವು ಸಂತೋಷವಾಗಿ ಇದ್ದೇವೆ. ಕೆಲವರು ಒಟ್ಟಿಗೆ ಯಾಕೆ ವಾಸ ಮಾಡುತ್ತಿಲ್ಲವೆಂದು ಕೇಳುತ್ತಾರೆ. ಅದಕ್ಕೆ ನಾನು ಹೇಳೋದು ಏನಂದರೆ, ಈ ವ್ಯವಸ್ಥೆ ಆರಾಮಾಗಿದೆ. ನೆಮ್ಮದಿಯಿಂದ ಕೂಡಿದೆ" ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
"ನನ್ನ ಬದುಕಿನಲ್ಲಿ ನಾನು ತೆಗೆದುಕೊಂಡ ಅತೀ ದೊಡ್ಡ ಹಾಗೂ ಧೈರ್ಯಶಾಲಿ ನಿರ್ಧಾರವಿದು. ಈ ನಿರ್ಧಾರದ ಬಗ್ಗೆ ನನಗೆ ಈಗಲೂ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಬಳಿ ಸುಂದರವಾದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆ ಇಬ್ಬರು ಹೆಣ್ಣು ಮಕ್ಕಳನ್ನು ಹೆಮ್ಮೆಪಡುವ ತಂದೆ.. ನನ್ನನ್ನು ಸದಾ ರೀತಿಸುವ ಗಂಡ.. ಇದಕ್ಕಿಂತ ಇನ್ನೇನು ಬೇಕು" ಎಂದು ಹೇಮಾ ಮಾಲಿನಿ ಆತ್ಮಚರಿತ್ರೆಯಲ್ಲಿ ಕಾರಣವನ್ನು ರಿವೀಲ್ ಮಾಡಿದ್ದಾರೆ.


Click it and Unblock the Notifications











