11 ವರ್ಷಗಳ ವೈವಾಹಿಕ ಜೀವನದ ಅಂತ್ಯ ಹಾಡಿದ ಹೇಮಾ ಮಾಲಿನಿ ಪುತ್ರಿ;
ಬಾಲಿವುಡ್‌ನಲ್ಲಿ ಲವ್ ಹಾಗೂ ಬ್ರೇಕ್ ಎರಡೂ ಬೇಗೆ ಬೇಗನೇ ನಡೆದು ಬಿಡುತ್ತಿತ್ತು. ಅದನ್ನೇ ದೊಡ್ಡ ವಿಷಯ ಅಂದುಕೊಂಡಿದ್ದು ಇದೆ. ಆದ್ರೀಗ ಲವ್-ಬ್ರೇಕಪ್ ಅಷ್ಟೇ ವಿಚ್ಛೇದನ ಸುದ್ದಿಗಳು ಆಗಾಗ ಕೇಳಿಸುತ್ತಲೇ ಇವೆ. ಈಗ ಇದೇ ಚಿತ್ರರಂಗದಿಂದ ಮತ್ತೊಂದು ಕಹಿ ಸುದ್ದಿ ಬಂದಿದೆ.
ಬಾಲಿವುಡ್‌ನ ಡ್ರೀಲ್ ಗರ್ಲ್ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಈ ವಿಷಯವನ್ನು ಸ್ವತ: ಇಶಾ ಡಿಯೋಲ್ ಅವರೇ ಅಧಿಕೃತವಾಗಿ ಸ್ಪಷ್ಟ ಪಡಿಸಿದ್ದಾರೆ. ಇದು ಇಶಾ ಡಿಯೋಲ್ ಹಾಗೂ ಹೇಮಾ ಮಾಲಿನಿ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ವಿಚ್ಛೇದನದ ವಿಷಯವನ್ನು ಅನೌನ್ಸ್ ಮಾಡುತ್ತಿದ್ದಂತೆ ಬಾಲಿವುಡ್‌ನಲ್ಲಿ ಈ ಸುದ್ದಿ ಹಲ್‌ಚಲ್ ಎಬ್ಬಿಸಿದೆ.

ಇಶಾ ಡಿಯೋಲ್ ಬಾಲಿವುಡ್ ಸ್ಟಾರ್ ದಂಪತಿಯ ಕುಡಿ. ಲೆಜೆಂಡ್ ಧರ್ಮೇಂದ್ರ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿಯ ಹಿರಿಯ ಪುತ್ರಿ. ತಂದೆ ತಾಯಿಯಂತೆಯೇ ಇಶಾ ಡಿಯೋಲ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ, ಬಾಲಿವುಡ್‌ನಲ್ಲಿ ತಂದೆ ತಾಯಿಯಂತೆ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಯಶ್ ರಾಜ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದ್ದ 'ಧೂಮ್' ಸೀರಿಸ್‌ನಲ್ಲಿ ನಟಿಸಿದ್ದರು. ಅದು ಬಿಟ್ಟರೆ, ನೆನಪಿನಲ್ಲಿ ಉಳಿಯುವಂತಹ ಬೇರೆ ಯಾವುದೇ ಸಿನಿಮಾ ಬರಲಿಲ್ಲ.
ಹೀಗಾಗಿ 2012ರಲ್ಲಿ ಭರತ್ ತಖ್ತಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ಮೂರು ವರ್ಷಗಳ ಕಾಲ ಸಿನಿಮಾದಿಂದ ದೂರವೇ ಉಳಿದಿದ್ದರು. ಈ ವೇಳೆ ಇಶಾ ಡಿಯೋಲ್ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿಯೊಂದಿಗೆ ಅನ್ಯೋನ್ಯವಾಗಿದ್ದ ಇಶಾ ಡಿಯೋಲ್ ದಿಢೀರನೇ ವಿಚ್ಚೇದನ ಘೋಷಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಕಳೆದ ವರ್ಷವಷ್ಟೇ ಇಬ್ಬರ ಫೋಟೊಗಳನ್ನು ಶೇರ್ ಮಾಡಿಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದರು. ಅಲ್ಲದೆ ಕೊನೆಯ ಪೋಸ್ಟ್ ಕೂಡ ಪತಿಯೊಂದಿಗೆ ಹಂಚಿಕೊಂಡಿದ್ದಾರೆ. 2020ರಲ್ಲಿ 'ಮಾಮ ಮಿಯಾ' ಪ್ರೆಗ್ನೆನ್ಸಿ ಬಗ್ಗೆ ಪುಸ್ತಕ ಬರೆದಿದ್ದರು. ಅದರಲ್ಲಿ ಎರಡನೇ ಮಗುವಿನ ವೇಳೆ ಪತಿ ಭರತ್ ತಖ್ತಾನಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸಿತ್ತು ಎಂದು ಬರೆದುಕೊಂಡಿದ್ದರು.
ಸದಾ ಮಕ್ಕಳು ಪತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಇಶಾ ಡಿಯೋಲ್ ಕೆಲವು ದಿನಗಳಿಂದ ಒಂಟಿಯಾಗಿರುತ್ತಿದ್ದರು. ಅವರ ಜೊತೆ ಮಕ್ಕಳು ಮಾತ್ರ ಕಾಣಿಸುತ್ತಿದ್ದರು. ಪಾರ್ಟಿಗಳಲ್ಲಿ ಸ್ನೇಹಿತರೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇಶಾ ಹಾಗೂ ಭರತ್ ನಡುವೆ ವೈಮನಸ್ಸು ಉಂಟಾಗಿದೆ ಎಂದು ಗುಲ್ಲೆದ್ದಿತ್ತು. ಆದರೆ, ಈ ಬಗ್ಗೆ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಅಧಿಕೃತವಾಗಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ.
ಈಗ ಇಶಾ ಡಿಯೋಲ್ ವಿಚ್ಛೇದನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ಮತ್ತು ಭರತ್ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದೇವೆ. ಆದರೆ ನಮಗೆ ಮಕ್ಕಳು ತುಂಬಾ ಮುಖ್ಯ. ನಾವು ಪತಿ-ಪತ್ನಿಯಾಗಿ ಬೇರ್ಪಟ್ಟರೂ, ಪೋಷಕರಾಗಿ ಅವರಿಗೆ ಯಾವುದೇ ಸಮಸ್ಯೆ ಎದುರಿಸಲು ಬಿಡುವುದಿಲ್ಲ," ಎಂದು ಅವರು ಹೇಳಿಕೊಂಡಿದ್ದಾರೆಹ ಸದ್ಯ ಇಶಾ ವಿಚ್ಛೇದನವೇ ಬಾಲಿವುಡ್ ನಲ್ಲಿ ಚರ್ಚೆಯ ವಿಷಯವಾಗಿದೆ.


Click it and Unblock the Notifications











