IIFA Awards 2023: ಅಬುಧಾಬಿಯಲ್ಲಿ ಐಫಾ ಸಂಭ್ರಮ.. ಪ್ರಶಸ್ತಿ ಗೆದ್ದವರ ಲಿಸ್ಟ್ ಇಲ್ಲಿದೆ
ಬಾಲಿವುಡ್‌ನಲ್ಲಿ ಅವಾರ್ಡ್ ಸೀಸನ್ ಆರಂಭ ಆಗಿದೆ. 23ನೇ ಐಫಾ ಪ್ರಶಸ್ತಿ ಪ್ರಧಾನ ಸಮಾರಂಭವು ಅಬು ಧಾಬಿಯಲ್ಲಿ ನಡೆದಿದೆ. ಈಗಾಗಲೇ ಬಾಲಿವುಡ್ ಮಂದಿ ಅಬು ಧಾಬಿಗೆ ಹಾರಿದ್ದಾರೆ. ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಕಮಲ್ ಹಾಸನ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವರು ಅಬು ಧಾಬಿಯಲ್ಲಿ ಬೀಡು ಬಿಟ್ಟಿದ್ದಾರೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಲ್ಮಾನ್ ಖಾನ್, ವರುಣ್ ಧವನ್, ವಿಕ್ಕಿ ಕೌಶಲ್ ಸೇರಿದಂತೆ ಬಾಲಿವುಡ್‌ನ ಸೆಲೆಬ್ರೆಟಿಗಳು ಪರ್ಫಾಮೆನ್ಸ್ ನೀಡಿದ್ದಾರೆ. ಹಾಗೇ ಈ ಪ್ರಶಸ್ತಿ ಸಮಾರಂಭವನ್ನು ಸಲ್ಮಾನ್ ಖಾನ್ ಹಾಗೂ ನೂರಾ ಫತೇಹಿ ನಿರೂಪಣೆ ಮಾಡುತ್ತಿದ್ದಾರೆ.

ಈ ಬಾರಿ ಆಲಿಯಾ ಭಟ್ ಐಫಾ ಪ್ರಶಸ್ತಿ ಸಮಾರಂಭವನ್ನು ಮಿಸ್ ಮಾಡಿಕೊಂಡಿದ್ದಾರೆ. ಆಲಿಯಾ ಭಟ್ ಅಜ್ಜನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಐಫಾ ಅವಾರ್ಡ್ ಅನ್ನು ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಕ್ಷಿಣ ಭಾರತದಿಂದ ಕಮಲ್ ಹಾಸನ್ ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಐಫಾದಲ್ಲಿ ಉಳಗನಾಯಗನ್‌ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. 'ಗಂಗೂಬಾಯಿ ಕಾಠಿಯಾವಾಡಿ', 'ಭೂಲ್ ಭುಲಯ್ಯ', 'ದೃಶ್ಯಂ2' ಸಿನಿಮಾಗಳು ಪ್ರಶಸ್ತಿಯನ್ನು ಗೆದ್ದಿವೆ.
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಮೂರು ತಾಂತ್ರಿಕ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಅತ್ಯುತ್ತಮ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಉತ್ಕರ್ಷಿನಿ ವಸಿಷ್ಠ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಹಾಗೇ ಛಾಯಾಗ್ರಹಣ ಹಾಗೂ ಡೈಲಾಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ' ಸಿನಿಮಾ ಕೂಡ ಪ್ರಶಸ್ತಿ ಗೆದ್ದಿದೆ. ಅನೀಜ್ ಬಾಜ್ಮಿ ನಿರ್ದೇಶಿಸಿದ ಕಾಮಿಡಿ ಹಾರರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅತ್ಯುತ್ತಮ ಗಳಿಕೆ ಕಂಡಿತ್ತು. ಬಾಸ್ಕೋ ಮಾರ್ಟಿಸ್ ಹಾಗೂ ಸೀಸರ್ ಗೋನ್ಸಾಲ್ವಿಸ್‌ಗೆ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಸೌಂಡ್ ಡಿಸೈನ್ ವಿಭಾಗದಲ್ಲಿ ಮಂದಾರ್ ಕುಲ್ಕರ್ಣಿಗೆ ಸಿಕ್ಕಿದೆ.
ಮಲಯಾಳಂ ಸಿನಿಮಾದ ಬಾಲಿವುಡ್ ರಿಮೇಕ್ 'ದೃಶ್ಯಂ 2' ಎಡಿಟಿಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಸಂದೀಪ್ ಫ್ರಾನ್ಸಿಸ್‌ಗೆ ಎಡಿಟಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಅಜಯ್ ದೇವಗನ್ ಹಾಗೂ ಟಬು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿಮೇಕ್ ಸಿನಿಮಾ ಆಗಿದ್ದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.
IIFA ಪ್ರಶಸ್ತಿ 2023 ಗೆದ್ದವರ ಪಟ್ಟಿ ಇಲ್ಲಿದೆ:
ಸಂಜಯ್ ಲೀಲಾ ಬನ್ಸಾಲಿ, ಉತ್ಕರ್ಷಿನಿ ವಸಿಷ್ಠ - ಚಿತ್ರಕತೆ (ಗಂಗೂಬಾಯಿ ಕಾಠಿಯಾವಾಡಿ)
ಸಂದೀಪ್ ಚಟರ್ಜಿ - ಛಾಯಾಗ್ರಹಣ (ಗಂಗೂಬಾಯಿ ಕಾಠಿಯಾವಾಡಿ)
ಉತ್ಕರ್ಷಿನಿ ವಸಿಷ್ಠ, ಪ್ರಕಾಶ ಕಪಾಡಿಯಾ ಸಂಭಾಷಣೆ (ಗಂಗೂಬಾಯಿ ಕಾಠಿಯಾವಾಡಿ)
ಬಾಸ್ಕೋ ಸೀಸರ್ ನೃತ್ಯ ನಿರ್ದೇಶನ (ಭೂಲ್ ಭುಲಯ್ಯ 2)
ಮಧುರ್ ಕುಲಕರ್ಣಿ ಸೌಂಡ್ ಡಿಸೈನ್ (ಭೂಲ್ ಭುಲಯ್ಯ 2)
ಸಂದೀಪ್ ಫ್ರಾನ್ಸಿಸ್ ಸಂಕಲನ (ದೃಶ್ಯಂ 2)
ರಿಡಿಫೈನ್ ಸ್ಪೆಷಲ್ ಎಫೆಕ್ಟ್ಸ್ (ಬ್ರಹ್ಮಾಸ್ತ್ರ )
ಸ್ಯಾಮ್ ಸಿಎಸ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ (ವಿಕ್ರಂ ವೇದ)
ಸೌಂಡ್ ಮಿಕ್ಸಿಂಗ್ ಗುಂಜನ್ ಶಾ, ರಾಹುಲ್ ಕರ್ಪೆ (ಓ ಮೈ ಡಾರ್ಲಿಂಗ್)


Click it and Unblock the Notifications











