ನಿಶ್ಚಿತಾರ್ಥಕ್ಕೆ ₹6 ಕೋಟಿ ಉಂಗುರ ತೊಡಿಸಿದ್ದ ಆಸಿನ್ ಪತಿ ಯಾರು? ₹8273 ಕೋಟಿ ಆಸ್ತಿ ಒಡೆಯನ ಹಿನ್ನೆಲೆ ಏನು?

ಆಸಿನ್.. ಒಂದು ಕಾಲದಲ್ಲಿ ಹುಡುಗರ ಕನಸಿನ ಹುಡುಗಿ. ಈಕೆಯ ಸಿನಿಮಾಗಳನ್ನು ನೋಡಿ ಫಿದಾ ಆದವರು ಅದೆಷ್ಟೋ ಮಂದಿ. ಆದರೆ, ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಆಸಿನ್ ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಈ ನಟಿಗೆ ಬಗ್ಗೆ ಸುದ್ದಿನೇ ಇರಲಿಲ್ಲ.

2016ರಲ್ಲಿ ಆಸಿನ್ ವಿವಾಹವಾಗಿದ್ದರು. ಅಲ್ಲಿಂದ ಈ ಬಹುಭಾಷಾ ನಟಿ ಆಸಿನ್ ಸುದ್ದಿಯಲ್ಲಿ ಇರಲಿಲ್ಲ. ಸಿನಿಮಾದಲ್ಲೂ ನಟಿಸಲಿಲ್ಲ. ಆದರೆ, ಕೆಲವು ದಿನಗಳ ಹಿಂದಷ್ಟೇ ಆಸಿನ್ ಮತ್ತೆ ಚರ್ಚೆಯಲ್ಲಿದ್ದರು. ಏಳು ವರ್ಷಗಳ ಬಳಿಕ ಪತಿಯಿಂದ ದೂರವಾಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು.

Actress Asin-Rahul Sharma

ಡಿವೋರ್ಸ್ ಸುದ್ದಿ ಹಬ್ಬುತ್ತಿದ್ದಂತೆ ಆಸಿನ್ ಸೋಶಿಯಲ್ ಮೀಡಿಯಾದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ಅಂತ ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ ಆಸಿನ್ ಪತಿ ಯಾರು? ಅವರ ಆಸ್ತಿಯೆಷ್ಟು? ಅನ್ನೋ ಬಗ್ಗೆ ಚರ್ಚೆಯಾಗುತ್ತಿದೆ.

'ಘಜನಿ' ನಟಿ ಆಸಿನ್ ಪತಿ ಯಾರು?

ಬಹುಭಾಷಾ ನಟಿ ಆಸಿನ್ ವಿವಾಹಕ್ಕೂ ಮುನ್ನ ಬಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಬಾಲಿವುಡ್‌ನಲ್ಲಿ ಒಂದರ ಹಿಂದೊಂದು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಮದುವೆ ಆಗಿದ್ದು, ಅಚ್ಚರಿಗೆ ಕಾರಣವಾಗಿತ್ತು. ಆಗಲೇ ಆಸಿನ್ ಅಂತಹ ಸುಂದರಿಯ ಕೈ ಹಿಡಿದವರು ಯಾರು? ಅನ್ನೋ ಬಗ್ಗೆ ಚರ್ಚೆಯಾಗಿತ್ತು.

Actress Asin-Rahul Sharma

ಆಸಿನ್ ಮದುವೆಯಾಗಿದ್ದು, ಸಣ್ಣ ಉದ್ಯಮಿಯನ್ನಲ್ಲ. ಭಾರತದಲ್ಲಿ ಮೊಬೈಲ್ ಕ್ರಾಂತಿ ಶುರುವಾಗಿದ್ದಾಗ, ಆಸಿನ್ ಪತಿಯ ಕಂಪನಿ ಉತ್ತುಂಗದಲ್ಲಿತ್ತು. ಹೌದು.. ಆಸಿನ್ ಪತಿ ಒಂದು ಕಾಲದಲ್ಲಿ ಚೈನಾ ಸೆಟ್‌ಗಳಿಗೆ ಪೈಪೋಟಿ ನೀಡಿದ್ದ ಮೊಬೈಲ್ ಸಂಸ್ಥೆ ಮೈಕ್ರೊಮ್ಯಾಕ್ಸ್‌ನ ಸಹ ಸಂಸ್ಥಾಪಕ ರಾಹುಲ್ ಶರ್ಮಾ. ಈತನ ಒಟ್ಟು ಆಸ್ತಿ ಸುಮಾರು ₹8273 ಕೋಟಿ ಎಂದು 'ಮ್ಯಾಶಬಲ್' ವರದಿ ಮಾಡಿದೆ.

ಮೈಕ್ರೊಮ್ಯಾಕ್ಸ್ ಒಂದೇ ಅಲ್ಲ

ಆಸಿನ್ ಪತಿ, ಮೈಕ್ರೊಮ್ಯಾಕ್ಸ್ ಸಂಸ್ಥೆಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ದೆಹಲಿ ಮೂಲದವರು. ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ರಾಹುಲ್ ಸ್ನೇಹಿತರೊಟ್ಟಿಗೆ ಸೇರಿ ಮೈಕ್ರೊಮ್ಯಾಕ್ಸ್ ಸಂಸ್ಥೆಯನ್ನು ಆರಂಭಿಸಿದ್ದರು. ಸದ್ಯ ಮೈಕ್ರೊಮ್ಯಾಕ್ಸ್ ಜೊತೆ ರಿವೋಲ್ಟ್ ಇಂಟೆಲಿಕ್ರಾಪ್ ಸಂಸ್ಥೆಯನ್ನು ಆರಂಭಿಸಿದ್ದಾರೆ.

ರಿವೋಲ್ಟ್ ಇಂಟೆಲಿಕ್ರಾಪ್ ಸಂಸ್ಥೆ ಭಾರತದ ಮೊಟ್ಟ ಮೊದಲ AI ಆಧಾರಿತ ಎಲೆಕ್ಟ್ರಿಕ್ ಬೈಕ್ ಅನ್ನು ಲಾಂಚ್ ಮಾಡಿದೆ. ಟ್ರೆಂಡಿಂಗ್‌ನಲ್ಲಿರುವ ಉದ್ಯಮದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದೇ ಬೆನ್ನಲ್ಲೇ ಆಸಿನ್ ಹಾಗೂ ರಾಹುಲ್ ಶರ್ಮಾ ವಿಚ್ಛೇದನದ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಆ ಸುದ್ದಿಯನ್ನು ಆಸಿನ್ ತಳ್ಳಿ ಹಾಕಿದ್ದಾರೆ.

ನಿಶ್ಚಿತಾರ್ಥಕ್ಕೆ ₹6 ಕೋಟಿ ರಿಂಗ್ ಕೊಟ್ಟಿದ್ದ ರಾಹುಲ್

ರಾಹುಲ್ ಶರ್ಮಾ 2016ರಲ್ಲಿ ಆಸಿನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇವರಿಬ್ಬರಿಗೂ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಟ್ಟಿದ್ದರು ಎಂದು ಸುದ್ದಿಯಾಗಿತ್ತು. ಮದುವೆಗೂ ಮುನ್ನ ನಟಿ ಆಸಿನ್‌ಗೆ ರಾಹುಲ್ ಶರ್ಮಾ ₹6 ಕೋಟಿ ಉಂಗುರವನ್ನು ಗಿಫ್ಟ್ ಮಾಡಿದ್ದರು.

ಹಾಗೇ ರಾಹುಲ್ ಶರ್ಮಾ ಐಶಾರಾಮಿ ವಸ್ತುಗಳ ಮೇಲೆ ವ್ಯಾಮೋಹವಿದೆ. ಬಿಎಂಡಬ್ಲ್ಯೂ ಎಕ್ಸ್‌6, ಬೆಟ್ಲಿ ಸೂಪರ್‌ಸ್ಪೋಟ್, ಮರ್ಸಿಡೀಸ್ ಜಿಎಲ್‌450, ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ 2 ಅಂತಹ ದುಬಾರಿ ಕಾರುಗಳು ಇವೆ. ದಕ್ಷಿಣ ದೆಹಲಿಯ ಐಶಾರಾಮಿ ಏರಿಯಾದಲ್ಲಿ ಐಶಾರಾಮಿ ಬಂಗಲೆಯಲ್ಲಿ ಆಸಿನ್ ಜೊತೆ ರಾಹುಲ್ ಶರ್ಮಾ ವಾಸವಿದ್ದಾರೆ.

More from Filmibeat

English summary
Here is the net worth of Actress Asin husband and Micromax co-founder Rahul Sharma, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X