'ಸಲಾರ್' Vs 'ಡಂಕಿ'; ಪಿವಿಆರ್, ಐನಾಕ್ಸ್ ಬಾಯ್‌ಕಾಟ್‌ಗೆ ಮುಂದಾದ ಹೊಂಬಾಳೆ

'ಕೆಜಿಎಫ್ 2' ಬಳಿಕ ಹೊಂಬಾಳೆ ಫಿಲ್ಮ್ಸ್ ರಿಲೀಸ್ ಮಾಡುತ್ತಿರುವ ಮೆಗಾ ಬಜೆಟ್ ಸಿನಿಮಾ 'ಸಲಾರ್'. ಇದು ಡಿಸೆಂಬರ್ 22ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಆದರೆ, ಬಿಡುಗಡೆಗೆ ಇನ್ನೇನು ಎರಡು ದಿನ ಇದೆ ಅನ್ನುವಾಗಲೇ ಭಾರತದ ಅತೀ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್‌ಗಳಾದ ಪಿವಿಆರ್, ಐನಾಕ್ಸ್ ಹಾಗೂ ಮೀರಜ್ ವಿರುದ್ದ ಹೊಂಬಾಳೆ ಫಿಲ್ಮ್ಸ್ ತಿರುಗಿಬಿದ್ದಿದೆ.

ಭಾರತದ ಎರಡು ಅತೀ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್ ಪಿವಿಆರ್, ಮಲ್ಟಿಪ್ಲೆಕ್ಸ್ ಎರಡರಲ್ಲೂ 'ಸಲಾರ್' ಸಿನಿಮಾ ರಿಲೀಸ್ ಮಾಡದೇ ಇರಲು ಹೊಂಬಾಳೆ ನಿರ್ಧರಿಸಿದೆ. ಅದಕ್ಕೆ ಕಾರಣ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸಿನಿಮಾ 'ಡಂಕಿ' ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

Hombale films boycott PVR, Inox, Miraj multiplex due to more theaters for Dunki than Salaar

'ಸಲಾರ್' ಹಾಗೂ 'ಡಂಕಿ' ಸ್ಕ್ರೀನ್ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಸಿನಿಮಾ 'ಡಂಕಿ'ಗೆ ಹೆಚ್ಚು ಸ್ಕ್ರೀನ್‌ಗಳನ್ನು ನೀಡಿದ್ದು, 'ಸಲಾರ್'ಗೆ ಕಡಿಮೆ ಸ್ಕೀನ್‌ಗಳನ್ನು ನೀಡಿದ್ದಾರೆಂಬ ಆರೋಪವನ್ನು ಹೊಂಬಾಳೆ ಫಿಲ್ಮ್ಸ್ ಮಾಡಿದೆ. ಹೀಗಾಗಿ ದಕ್ಷಿಣ ಭಾರತದ ಈ ಎರಡೂ ಚೈನ್‌ಗಳಲ್ಲಿ 'ಸಲಾರ್' ಬಿಡುಗಡೆ ಮಾಡದೆ ಇರುವುದಕ್ಕೆ ಹೊಂಬಾಳೆ ನಿರ್ಧರಿಸಿದೆ.

ಅಷ್ಟಕ್ಕೂ ಆಗಿದ್ದು ಇಷ್ಟು, ಪಿವಿಆರ್, ಐನಾಕ್ಸ್ ಮಲ್ಟಿಪ್ಲೆಕ್ಸ್‌ ಮಾಲೀಕರು 'ಸಲಾರ್' ಹಾಗೂ 'ಡಂಕಿ'ಗೆ 50:50 ಅನುಪಾತದಲ್ಲಿ ಸ್ಕ್ರೀನ್‌ಗಳನ್ನು ಶೇರ್ ಮಾಡುವುದಕ್ಕೆ ಒಪ್ಪಿಕೊಂಡಿದ್ದರು. ಇತ್ತೀಚೆಗೆ ಪಿವಿಆರ್ ಮಾಲೀಕ ಹಾಗೂ ಶಾರುಖ್ ಖಾನ್ ಭೇಟಿಯ ಈ ನಿರ್ಧಾರ ದಿಢೀರನೇ ಬದಲಾಗಿದೆ. ಪಿವಿಆರ್ ಹಾಗೂ ಐನಾಕ್ಸ್‌ನ ಸಿಂಗಲ್ ಸ್ಕ್ರೀನ್ ಅನ್ನು ಶೇ.100ರಷ್ಟು 'ಡಂಕಿ'ಗೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಭೇಟಿಯ ಬಳಿಕ ತಮ್ಮ ಒಡಂಬಡಿಕೆಯನ್ನು ಬದಲಿಸಿದ ಪಿವಿಆರ್ ಐನಾಕ್ಸ್ ಮಾಲೀಕರ ನಿರ್ಧಾರ ಹೊಂಬಾಳೆ ತಂಡಕ್ಕೆ ಶಾಕ್ ಕೊಟ್ಟಿದೆ. ಅಲ್ಲದೆ ಹಿಂದೆ ಬೆಲ್ಟ್‌ನಲ್ಲಿ ವಿತರಣೆ ಮಾಡುತ್ತಿರುವ ಅನಿಲ್ ತಡಾನಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಅನ್ನೋ ಬಗ್ಗೆನೂ ವರದಿಯಾಗಿದೆ.

Hombale films boycott PVR, Inox, Miraj multiplex due to more theaters for Dunki than Salaar

ಪಿವಿಆರ್ ಐನಾಕ್ಸ್ ಮಾಲೀಕರ ಈ ನಿರ್ಧಾರವನ್ನು ಪ್ರದರ್ಶಕರು ವಿರೋಧಿಸುತ್ತಿದ್ದಾರೆ. "ಇಂತಹ ಕ್ಲ್ಯಾಶ್‌ಗಳು ಈ ಹಿಂದೆ ಕೂಡ ಆಗಿದೆ. ಯಾವ ಸಿನಿಮಾವನ್ನು ರಿಲೀಸ್ ಮಾಡಬೇಕು ಅನ್ನೋದು ಪ್ರದರ್ಶಕರ ನಿರ್ಧಾರ. ಡಂಕಿ ಎದುರು ರಿಲೀಸ್ ಆಗುತ್ತಿರುವ ಸಿನಿಮಾ ಕೂಡ ಮಾಸ್ ಆಗಿರುವುದರಿಂದ ಅದ್ಹೇಗೆ ನಿರ್ಧಾರ ಮಾಡುತ್ತಾರೆ? ನಾವು 'ಡಂಕಿ' ಪರವಾಗಿ ನಿಲ್ಲಲು ಸಿದ್ಧರಿದ್ದೇವೆ. ಮೂರು ಶೋ 'ಡಂಕಿ'ಗೆ ಕೊಟ್ಟರೆ, ಎರಡು ಶೋ 'ಸಲಾರ್'ಗೆ ಕೊಡಬೇಕು. ಎಲ್ಲಾ ಶೋಗಳು ಡಂಕಿಗೆ ಬೇಕು ಅನ್ನೋದು ಸರಿಯಿಲ್ಲ" ಎಂದು ಬಾಲಿವುಡ್ ಹಂಗಾಮಗೆ ಹೇಳಿದ್ದಾರೆ.

ಸದ್ಯ ಪಿವಿಆರ್, ಐನಾಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಕಿತ್ತಾಟ ಶುರುವಾಗಿದೆ. ಹೊಂಬಾಳೆ ಫಿಲ್ಮ್ಸ್ ಮಲ್ಟಿಪ್ಲೆಕ್ಸ್‌ ಚೈನ್‌ಗೆ ಅಸಹಕಾರ ನೀಡುವ ಮೂಲಕ ತಿರುಗೇಟು ನೀಡುವುದಕ್ಕೆ ಮುಂದಾಗಿದೆ. ಇನ್ನು ಎರಡು ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥ ಆದರೆ, ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ 'ಸಲಾರ್' ಬಿಡುಗಡೆಯಾಗಲಿದೆ.

More from Filmibeat

English summary
Salaar Vs Dunki: Hombale films Boycotting PVR,Inox and Miraj;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X