ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್

ಕೊರೊನಾ ವೈರಸ್ ವಿಚಾರದಲ್ಲಿ ಮೂರ್ಖತನದಿಂದ ವರ್ತಿಸಿ ಟೀಕೆಗೆ ಒಳಗಾಗಿರುವ ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ತಪರಾಕಿ ನೀಡಿದೆ. ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ತಾವು ಪಾರ್ಟಿಗಳಲ್ಲಿ ಭಾಗವಹಿಸಿಲ್ಲ, ತಮಗೆ ಯಾರೂ ಪಾರ್ಟಿಗಳಲ್ಲಿ ಭಾಗವಹಿಬಾರದು ಎಂದು ಸಲಹೆ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದ್ದ ಕನಿಕಾ, ಈಗ ಆಸ್ಪತ್ರೆ ವಿರುದ್ಧ ವರಾತ ಆರಂಭಿಸಿದ್ದಾರೆ.

ಆಸ್ಪತ್ರೆಯಲ್ಲಿ ದೂಳು ಇದೆ, ಇಲ್ಲಿ ಸೌಲಭ್ಯ ಇಲ್ಲ, ಜ್ವರ ಇದೆ ಎಂದರೆ ವೈದ್ಯರು ನೋಡುತ್ತಿಲ್ಲ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ಆಸ್ಪತ್ರೆ, ಕನಿಕಾ ಅವರಿಗೆ ಆಸ್ಪತ್ರೆಯಲ್ಲಿನ ಅತ್ಯುತ್ತಮ ಸೌಲಭ್ಯವನ್ನು ಒದಗಿಸಲಾಗಿದೆ. ಅವರು ರೋಗಿಯಂತೆ ವರ್ತಿಸಬೇಕೇ ವಿನಾ ಸ್ಟಾರ್‌ ರೀತಿ ಅಲ್ಲ ಎಂದು ಹೇಳಿದೆ.

ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ನಿರ್ದೇಶಕರು, ಕನಿಕಾ ಕಪೂರ್ ವಿರುದ್ಧ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಅವರು ರೋಗಿಯಂತೆ ಇರಲಿ

ಅವರು ರೋಗಿಯಂತೆ ಇರಲಿ

'ಆಸ್ಪತ್ರೆಯಲ್ಲಿ ಸಾಧ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಕನಿಕಾ ಕಪೂರ್ ಅವರಿಗೆ ಒದಗಿಸಲಾಗಿದೆ. ಅವರು ಒಬ್ಬ ರೋಗಿಯಾಗಿ ಸಹಕರಿಸಬೇಕೇ ಹೊರತು ತಮ್ಮ ಸ್ಟಾರ್‌ಗಿರಿಯನ್ನು ಪ್ರದರ್ಶಿಸಬಾರದು' ಎಂದು ನಿರ್ದೇಶಕ ಆರ್‌ಕೆ ಧಿಮಾನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತಮ ಸೌಲಭ್ಯ ನೀಡಲಾಗಿದೆ

ಉತ್ತಮ ಸೌಲಭ್ಯ ನೀಡಲಾಗಿದೆ

'ಆಸ್ಪತ್ರೆಯ ಕಿಚನ್‌ನಿಂದ ಗ್ಲುಟೆನ್ ಫ್ರೀ ಡಯೆಟ್ ಅನ್ನು ಅವರಿಗೆ ಒದಗಿಸಲಾಗುತ್ತಿದೆ. ಅವರಿಗೆ ಪ್ರತ್ಯೇಕ ಹಾಸಿಗೆ, ಟಿವಿ, ಪ್ರತ್ಯೇಕ ಬಾತ್‌ರೂಮ್ ಹೊಂದಿರುವ ಕೊಠಡಿಯನ್ನೇ ಒದಗಿಸಲಾಗಿದೆ. ಅಷ್ಟೇ ಅಲ್ಲ, ಅವರ ಕೊಠಡಿಗೆ ಪ್ರತ್ಯೇಕ ಹವಾನಿಯಂತ್ರಣ ನಿರ್ವಹಣಾ ಘಟಕದಿಂದ (ಎಎಚ್‌ಯು) ಕೋವಿಡ್-19 ಘಟಕಕ್ಕಾಗಿಯೇ ಇರುವ ಎಸಿಯನ್ನು ಸಂಪರ್ಕಿಸಲಾಗಿದೆ' ಎಂದು ತಿಳಿಸಿದ್ದಾರೆ.

ಅವರು ಸ್ಟಾರ್ ರೀತಿ ವರ್ತಿಸಬಾರದು

ಅವರು ಸ್ಟಾರ್ ರೀತಿ ವರ್ತಿಸಬಾರದು

'ಅವರಿಗೆ ಅತಿ ಹೆಚ್ಚಿನ ಕಾಳಜಿ ತೋರಿಸಲಾಗುತ್ತಿದೆ. ಆದರೆ ಅವರು ಮೊದಲು ರೋಗಿಯಂತೆ ವರ್ತಿಸಬೇಕೇ ಹೊರತು ಸ್ಟಾರ್‌ ರೀತಿ ಅಲ್ಲ. ಅವರು ತಮಗೆ ತಾವು ಸಹಾಯ ಮಾಡಿಕೊಳ್ಳಲು ಆಸ್ಪತ್ರೆ ಜತೆ ಸಹಕರಿಸಬೇಕು' ಎಂದಿದ್ದಾರೆ.

ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ ಕನಿಕಾ

ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ ಕನಿಕಾ

ಕನಿಕಾ ಕಪೂರ್ ಕೊರೊನಾ ವೈರಸ್ ಪಾಸಿಟಿವ್ ಬಂದ ಮೊದಲ ಬಾಲಿವುಡ್ ಸ್ಟಾರ್ ಆಗಿದ್ದಾರೆ. ಅವರು ಲಂಡನ್‌ನಿಂದ ಬಂದ ಬಳಿಕ ಅಗತ್ಯ ಆರೋಗ್ಯ ಸಲಹೆಗಳನ್ನು ಪಾಲಿಸಿರಲಿಲ್ಲ. ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅವರು ನಾನೂರಕ್ಕೂ ಅಧಿಕ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಇದು ತೀವ್ರ ಆತಂಕ ಸೃಷ್ಟಿಸಿದೆ.

ಕನಿಕಾ ವಿರುದ್ಧ ನಾಲ್ಕು

ಕನಿಕಾ ವಿರುದ್ಧ ನಾಲ್ಕು

ಕನಿಕಾ ವಿರುದ್ಧ ಒಟ್ಟು ನಾಲ್ಕು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಕನಿಕಾ, ಈಗ ಆಸ್ಪತ್ರೆಯಲ್ಲಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಬಪ್ಪಿ ಲಹರಿ, ಸೋನಂ ಮೊಹಾಪಾತ್ರ ಸೇರಿದಂತೆ ಬಾಲಿವುಡ್‌ನ ಅನೇಕರು ಕನಿಕಾ ವರ್ತನೆಯನ್ನು ಟೀಕಿಸಿದ್ದಾರೆ.

More from Filmibeat

English summary
Lucknow hospital slams Bollywood singer Kanika Kapoor who is admitted after found coronavirus positive, she should behave like a patient, not a star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X