ಚೀನಾದ ಕಂಪನಿಗಳ ಪೈಪೋಟಿಗೆ ₹12ಸಾವಿರ ಕೋಟಿ ಕಳೆದುಕೊಂಡ ನಟಿ ಆಸಿನ್ ಪತಿ; ಮತ್ತೆ ಸಾಮ್ರಾಜ್ಯ ಕಟ್ಟಿದ್ದೇಗೆ?
ದಕ್ಷಿಣ ಭಾರತದ ನಟಿ ಆಸಿನ್ ನೆನಪಿದೆಯಾ? ಈಕೆಯನ್ನು ನೆನಪಿಸುವುದಕ್ಕೆ 'ಗಜಿನಿ' ಸಿನಿಮಾದ ಹೆಸರು ಹೇಳಿದರೆ ಸಾಕು. ಎಲ್ಲರ ಕಣ್ಮುಂದೆ ಈ ನಟಿ ಬಂದು ಬಿಡುತ್ತಾರೆ. ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಬಹುತೇಕ ಭಾರತೀಯ ಚಿರಪರಿಚಿತ. ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿರುವಾಗಲೇ ಆಸಿನ್ ನಟನೆಗೆ ಗುಡ್‌ಬೈ ಹೇಳಿದ್ದರು. ಸಾವಿರ ಕೋಟಿಯ ಒಡೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಬಹುಭಾಷಾ ನಟಿ ಆಸಿನ್ ಮದುವೆ ಆಗಿದ್ದು ಮತ್ಯಾರನ್ನೂ ಅಲ್ಲ. ಒಂದು ಕಾಲದಲ್ಲಿ ವಿದೇಶಿ ಮೊಬೈಲ್ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ಮೈಕ್ರೋಮ್ಯಾಕ್ಸ್ ಕಂಪನಿಯ ಮಾಲೀಕ ರಾಹುಲ್ ಶರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರನ್ನು ಒಟ್ಟಿಗೆ ಸೇರಿಸಿದ್ದು ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಅನ್ನೋದು ಅಷ್ಟೇ ಸತ್ಯ. ಆಸಿನ್ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿ.

ಕಮಲ್ ಹಾಸನ್, ದಳಪತಿ ವಿಜಯ್, ಸೂರ್ಯ, ವಿಕ್ರಮ್ ಅಂತಹ ದಿಗ್ಗಜರೊಂದಿಗೆ ಆಸಿನ್ ನಟಿಸಿ ಸೈ ಎನಿಸಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ ಆಸಿನ್‌ಗೆ ಅವಕಾಶಗಳು ಕಡಿಮೆಯಾದವು ಅಂದುಕೊಳ್ಳುವಾಗಲೇ ಬಾಲಿವುಡ್‌ಗೆ ಹಾರಿದ್ದರು. ಅಲ್ಲಿಯೂ ಅಕ್ಷಯ್ ಕುಮಾರ್ ಅಂತ ಸೂಪರ್‌ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದರು. ಇನ್ನೇನು ಬಾಲಿವುಡ್‌ನಲ್ಲಿ ಆಸಿನ್ ಸೆಟಲ್ ಆದರು ಅಂದುಕೊಳ್ಳುವಾಗಲೇ ಮೈಕ್ರೋಮ್ಯಾಕ್ಸ್ ಮಾಲೀಕ ರಾಹುಲ್ ಶರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ, ನಾವಿಲ್ಲಿ ಹೇಳುವುದಕ್ಕೆ ಹೊರಟಿರೋ ಆಸಿನ್ ಬಗ್ಗೆ ಅಲ್ಲ. ಅವರ ಪತಿ ಮೈಕ್ರೋಮ್ಯಾಕ್ಸ್ ಮಾಲೀಕ ರಾಹುಲ್ ಶರ್ಮಾ 12 ಸಾವಿರ ಕೋಟಿಯ ಸಾಮ್ರಾಜ್ಯವನ್ನು ಕಳೆದುಕೊಂಡು ಮತ್ತೆ ಹೊಸ ಸಾಮ್ರಾಜ್ಯ ಕಟ್ಟಿದ ರೋಚಕ ಕಥೆಯ ಬಗ್ಗೆ.
2016ರಲ್ಲಿ ಮೈಕ್ರೋಮ್ಯಾಕ್ಸ್ ಕಂಪನಿಯ ಮಾಲೀಕ ರಾಹುಲ್ ಶರ್ಮಾರನ್ನು ಆಸಿನ್ ಪ್ರೀತಿ ಮದುವೆಯಾದರು. ಇವರಿಬ್ಬರು ಮಕ್ಕಳು ಕೂಡ ಇದ್ದಾರೆ. 2000ದಲ್ಲಿ ರಾಹುಲ್ ಶರ್ಮಾ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ಮೈಕ್ರೋಮ್ಯಾಕ್ಸ್ ಇನ್‌ಫಾರ್ಮೆಟಿಕ್ಸ್ ಎಂಬ ಕಂಪನಿಯನ್ನು ಹುಟ್ಟಾಕುತ್ತಾರೆ. ಇಟಿ ನೌ ವರದಿ ಪ್ರಕಾರ, ಇವರು ಮೊದಲು ಐಟಿ ಕಂಪನಿ ಹುಟ್ಟಾಕುವುದಕ್ಕೆ ಹೊರಟಿದ್ದರು. ಆದರೆ, ಅಂದುಕೊಂಡಿದ್ದನ್ನು ದಾರಿಯನ್ನು ಬದಲಿಸಿ 2008ರಲ್ಲಿ ಮೊಬೈಲ್ ಕಂಪನಿಯನ್ನು ಹುಟ್ಟಾಕಿದ್ದರು. ಅದುವೇ ಮೈಕ್ರೋಮ್ಯಾಕ್ಸ್. ಭಾರತದ ಕಡಿಮೆ ಬೆಲೆಯ ಮೊಬೈಲ್.
ಈ ಕಂಪನಿ ಆರಂಭ ಮಾಡಿದ ಕೆಲವೇ ವರ್ಷಗಳಲ್ಲಿ ಅಂದರೆ, 2014ರಲ್ಲಿ ಅದಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ಕಂಪನಿಗೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದು ಬಿಟ್ಟಿದ್ದರು. ಸ್ಯಾಮ್‌ಸಂಗ್ ಅಂತ ದೈತ್ಯ ಕಂಪನಿಯನ್ನು ಹಿಂದಿಕ್ಕಿ, ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಮೊಬೈಲ್ ಕಂಪನಿ ಎನ್ನುವ ಪಟ್ಟಕ್ಕೇರಿದ್ದರು. 2010 ರಿಂದ 2015ರವರೆಗೆ ವರ್ಷಕ್ಕೆ ₹12 ಸಾವಿರ ಕೋಟಿಯಿಂದ ₹15ಸಾವಿರ ಕೋಟಿ ಮಾಡುವ ಆದಾಯ ಮಾಡುವ ಕಂಪನಿಯಾಗಿ ಬೆಳೆಯಿತು.

ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ಚೀನಾದ ಕಂಪನಿಗಳು ಭಾರತದಲ್ಲಿ ತಮ್ಮ ಮೊಬೈಲ್‌ಗಳನ್ನು ತೀರಾ ಕಡಿಮೆ ಬೆಲೆಗೆ ಮಾರುವುದಕ್ಕೆ ಶುರು ಮಾಡಿದ್ದವು. ಅಷ್ಟೊತ್ತಿಗಾಗಲೇ ಕೊರಿಯಾ ಹಾಗೂ ಫಿನ್‌ಲ್ಯಾಂಡ್‌ನ ಮೊಬೈಲ್ ಕಂಪನಿಗಳನ್ನು ಹಿಂದಿಕ್ಕಿದ್ದರಿಂದ ಚೀನಾ ಕಂಪನಿಗಳಿಂದ ಏನೂ ಆಗಿಲ್ಲ ಎಂದುಕೊಂಡಿದ್ದರು. ಆದರೆ, ಆ ಲೆಕ್ಕಾಚಾರ ತಲೆಕೆಳಗಾಗಿತ್ತು. ಚೀನಾದ ಮೊಬೈಲ್‌ಗಳು ಭಾರತವನ್ನು ಆವರಿಸಿಕೊಳ್ಳುವುದಕ್ಕೆ ಶುರು ಮಾಡಿತ್ತು. ಇತ್ತ ಮೈಕ್ರೊಮ್ಯಾಕ್ಸ್ ಮೊಬೈಲ್ಸ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾ ಹೋಯ್ತು. ತಮ್ಮ ಕಂಪನಿ ಉತ್ತುಂಗದಲ್ಲಿ ಇದ್ದಾಗ, ಚೀನಾದ ಅಲಿಬಾಬಾ ಕಂಪನಿಗೆ 6700 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಮುಂದೆ ಬಂದಿತ್ತು. ಆ ವೇಳೆ ರಾಹುಲ್ ಶರ್ಮಾ ಹಾಗೂ ಅವರ ತಂಡ ಈ ಆಫರ್ ಅನ್ನು ತಿರಸ್ಕರಿಸಿ, ದೊಡ್ಡ ತಪ್ಪು ಮಾಡಿತ್ತು.
ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಮೊಬೈಲ್ ಸಾಮ್ರಾಜ್ಯ ಕಟ್ಟಿದ್ದ ರಾಹುಲ್ ಶರ್ಮಾ ಕಂಪನಿ ಮಾರುಕಟ್ಟೆಯನ್ನೇ ಕಳೆದುಕೊಂಡಿತ್ತು. 12 ಸಾವಿರ ಕೋಟಿ ಮೌಲ್ಯ ಕಂಪನಿ ನೋಡ ನೋಡುತ್ತಿದ್ದಂತೆ ನೆಲಕ್ಕಚ್ಚಿತ್ತು. ಹಾಗಂತ ಸುಮ್ಮನೆ ಕೂರಲಿಲ್ಲ. ಹೊಸದೊಂದು ಉದ್ಯಮಕ್ಕೆ ಕೈ ಹಾಕಿದ್ದರು. 2017ರಲ್ಲಿ ರಿವೋಲ್ಡ್ ಇಂಟೆಲಿಕ್ರಾಪ್ ಸ್ಥಾಪಿಸಿದರು. ಇದು ಭಾರತದ ಮೊದಲ ಎಐ ಜನರೇಟೆಡ್ ಎಲೆಕ್ಟಿಕ್ ಬೈಕ್ ಕಂಪನಿ. ಇದರ ಜೊತೆ ಇನ್ನೂ ಕೆಲವು ಕಂಪನಿಗಳನ್ನು ತೆರೆದರು. ಇವರ ಮತ್ತೊಂದು ಕಂಪನಿ ಭಗವತಿ ಪ್ರಾಡಕ್ಸ್ ಲಿಮಿಟೆಡ್ (BPL) ಇಂದಿಗೆ ₹6200 ಕೋಟಿ ರೂಪಾಯಿ ಟರ್ನ್ ಓವರ್ ಮಾಡುತ್ತಿದೆ ಎಂದು ಇಟಿ ನೌ ವರದಿ ಮಾಡಿದೆ. ಸದ್ಯಕ್ಕೆ ಇವರ ಆಸ್ತಿ ಮೌಲ್ಯ 1300 ಕೋಟಿ ರೂಪಾಯಿ.


Click it and Unblock the Notifications











