ಸ್ಟಾರ್ಟ್‌ಅಪ್‌ಗಳಲ್ಲಿ ದೀಪಿಕಾ ಬಾರಿ ಹೂಡಿಕೆ; ಡಿಂಪಲ್ ಕ್ವೀನ್ ಆಸ್ತಿಯಲ್ಲಿ ಏರಿಕೆ ಆಗಿದೆ ಗೊತ್ತೇ?
ಬಾಲಿವುಡ್‌ನ ಅತೀ ದುಬಾರಿ ನಟಿ ದೀಪಿಕಾ ಪಡುಕೋಣೆ ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ನಡೆದ 'ಕಲ್ಕಿ 2898 AD' ಸಿನಿಮಾ ಸಮಾರಂಭದಲ್ಲಿ ಬೇಬಿ ಬಂಪ್ ಜೊತೆ ಪ್ರತ್ಯಕ್ಷ ಆಗಿದ್ದರು. ಭಾರತದ ದುಬಾರಿ ಸಿನಿಮಾದಲ್ಲಿ ದುಬಾರಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಪ್ಲಸ್ ಪಾಯಿಂಟ್ ಎನಿಸಿಕೊಂಡಿದೆ.
ಇತ್ತೀಚೆಗಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ವರದಿಯಾಗಿದೆ. ಇದೇ 'ಕಲ್ಕಿ 2898 AD'ಸಿನಿಮಾಗಾಗಿ ಬಾಲಿವುಡ್‌ನ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಮಧ್ಯೆ ದೀಪಿಕಾ ಬಾಲಿವುಡ್‌ನ ಅತ್ಯಂತ ಸುಂದರ ಉದ್ಯಮಿ ಎಂಬ ಅಂತ ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ದುಡಿದ ಹಣವನ್ನು ಭಾರತ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹಾಗಂತ ದೀಪಿಕಾ ಹೂಡಿಕೆ ಮಾಡಿದ್ದು ಒಂದೆರಡು ಸ್ಟಾರ್ಟ್‌ಅಪ್ ಅಲ್ಲ. ಅದರ ದೊಡ್ಡ ಪಟ್ಟಿನೇ ಇದೆ. ಆ ಸ್ಟಾರ್ಟ್‌ಅಪ್‌ಗಳು ಯಾವುವು? ಎಷ್ಟೆಷ್ಟು ಹೂಡಿಕೆ ಮಾಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ದೀಪಿಕಾ ಪಡುಕೋಣೆ ಇದೂವರೆಗೂ ಪ್ರಮುಖವಾಗಿ ಒಂಬತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದೂ ಲಕ್ಷ ಲೆಕ್ಕದಲ್ಲಿ ಅಲ್ಲ. ಕೋಟಿಗಳ ಲೆಕ್ಕದಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. ವಿಶೇಷ ಅಂದರೆ, ದೀಪಿಕಾ ಹಣ ಹೂಡಿಕೆ ಮಾಡಿದ ಬಳಿಕ ಆ ಕಂಪನಿಗಳು ಕೋಟಿ ಲೆಕ್ಕದಲ್ಲಿ ಲಾಭವನ್ನು ಮಾಡಿವೆ. ಅಂತಹ ಕಂಪನಿಗಳ ಪಟ್ಟಿ ಹಾಗೂ ಹೂಡಿಕೆಯ ವಿವರ ಇಲ್ಲಿದೆ.
ಎಪಿಗಾಮಿಯಾ
ದೀಪಿಕಾ ಪಡುಕೋಣೆ 'ಎಪಿಗಾಮಿಯಾ' ಅನ್ನುವ ಗ್ರೀಕ್ ಯೊಗಾರ್ಟ್ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ. 2019ರಲ್ಲಿ ದೀಪಿಕಾ ಹೂಡಿಕೆ ಮಾಡಿದ 'ಎಪಿಗಾಮಿಯಾ'ದಲ್ಲಿ ಸ್ಮೂಥಿ, ಪ್ರೋಟೀನ್ ಡ್ರಿಂಕ್ಸ್ ಅನ್ನು ಉತ್ಪಾದನೆ ಮಾಡುತ್ತೆ. 2023ರಲ್ಲಿ 150 ಕೋಟಿ ರೂಪಾಯಿ ಲಾಭ ಪಡೆದಿದೆ. ಒಟ್ಟು ಈ ಕಂಪನಿಯ ಮೌಲ್ಯ 1250 ಕೋಟಿ ರೂಪಾಯಿ ಎನ್ನಲಾಗಿದೆ.
ಬ್ಯೂ ಸ್ಮಾರ್ಟ್
ದೀಪಿಕಾ 2019ರಲ್ಲಿಯೇ ಬ್ಯೂ ಸ್ಮಾರ್ಟ್ ಎಲೆಕ್ಟ್ರಿಕ್ ಟ್ಯಾಕ್ಸಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. 1200 ಕೋಟಿ ರೂಪಾಯಿ ಮೌಲ್ಯದ ಕಂಪನಿಯು 2024ರಲ್ಲಿ 390 ಕೋಟಿ ರೂಪಾಯಿ ಲಾಭ ಮಾಡಿದೆ.
ಫರ್ಲೆಂಕೋ
ಪೀಠೋಪಕರಣವನ್ನು ಬಾಡಿಗೆಗೆ ಬಿಡುವ ಕಂಪನಿ ಫರ್ಲೆಂಕೋದಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕಂಪನಿ 2022ನಲ್ಲಿ 129.24 ಕೋಟಿ ರೂಪಾಯಿ ಲಾಭವನ್ನು ಮಾಡಿತ್ತು. ಇದು 250 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ.
ಪರ್ಪಲ್
ಆನ್‌ಲೈನ್ ಬ್ಯೂಟಿ ಪ್ರಾಡಕ್ಟ್ ಮಾಡುವ ಕಂಪನಿ 'ಪರ್ಪಲ್'. ಇದರಲ್ಲೂ ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದಾರೆ.

ಯುನಿಕಾರ್ನ್
ದೀಪಿಕಾ ಪಡುಕೋಣೆ ಮತ್ತೊಂದು ಸ್ಟಾರ್ಟ್‌ಅಪ್ ಕಂಪನಿ ಯೂನಿಕಾರ್ನ್‌ನಲ್ಲಿ ಹೂಡಿಕೆ ಮಾಡಿದ್ದಾರೆ. 1.1 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. 2022- 2023ನೇ ಸಾಲಿನಲ್ಲಿ ಈ ಕಂಪನಿ 474 ಕೋಟಿ ರೂಪಾಯಿ ಲಾಭ ಮಾಡಿತ್ತು.
ಬೆಲ್ಲಟ್ರಿಕ್ಸ್ ಏರೋಸ್ಪೇಸ್
ಬಾಹ್ಯಕಾಶ ತಂತ್ರಜ್ಞಾನ ಕಂಪನಿ 'ಬೆಲ್ಲಟ್ರಿಕ್ಸ್ ಏರೋಸ್ಪೇಸ್' 2019ರಲ್ಲಿ 21 ಕೋಟಿ ರೂಪಾಯಿ ಹೂಡಿಕೆ ತೆಗೆದುಕೊಂಡು ಬಂದಿತ್ತು. ಈ ಕಂಪನಿಯಲ್ಲಿ ದೀಪಿಕಾ ಪಡುಕೋಣೆ ಪ್ರಾಥಮಿಕ ಹೂಡಿಕೆದಾರರಾಗಿದ್ದರು. ಈ ಕಂಪನಿ ಮೂರು ಸುತ್ತುಗಳಲ್ಲಿ 11.3 ಮಿಲಿಯನ್ ಡಾಲರ್ ಹೂಡಿಕೆಯನ್ನು ತಂದಿತ್ತು.
ಸೂಪರ್‌ಟೈಲ್ಸ್
2021ರಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪನಿ 'ಸೂಪರ್‌ಟೈಲ್ಸ್'ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವ ಪ್ಲಾಟ್‌ಫಾರ್ಮ್ ಆಗಿದೆ. ಈ ಕಂಪನಿ 2023ರಲ್ಲಿ 33 ಕೋಟಿ ರೂಪಾಯಿ ಲಾಭ ಮಾಡಿತ್ತು. ಈ ಕಂಪನಿಯ ಒಟ್ಟು ಮೌಲ್ಯ 250 ಕೋಟಿ ರೂಪಾಯಿ.
ಆಟಂಬರ್ಗ್ ಟೆಕ್
ದೀಪಿಕಾ ಪಡುಕೋಣೆ ಆಟಂಬರ್ಗ್ ಟೆಕ್ನಾಲಜಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. 2021ರಲ್ಲಿ ಈ ವಿನೂತನ ಸ್ಟಾರ್ಟ್‌ಅಪ್ ಕಂಪನಿಯಲ್ಲಿ ದೀಪಿಕಾ ಹೂಡಿಕೆ ಮಾಡಿದ್ದರು. 650 ಕೋಟಿ ರೂಪಾಯಿ ಮೌಲ್ಯದ ಈ ಕಂಪನಿಯಲ್ಲಿ 2020ರಲ್ಲಿ 69 ಕೋಟಿ ರೂಪಾಯಿ ಲಾಭ ಮಾಡಿತ್ತು.
ಮೊಕಬಾರಾ
ಟ್ರಾವೆಲ್ ಬ್ಯಾಗ್, ಪರ್ಸ್, ಸ್ಲಿಂಗ್ ಬ್ಯಾಗ್‌ಗಳನ್ನು ಉತ್ಪಾದನೆ ಮಾಡುವ ಮೊಕಬಾರಾ ಕಂಪನಿಯಲ್ಲೂ ದೀಪಿಕಾ ಪಡುಕೋಣೆ ಹೂಡಿಕೆಯಿದೆ. 2020ರಲ್ಲಿ ದೀಪಿಕಾ ಈ ಕಂಪನಿಗೆ ಹೂಡಿಕೆ ಮಾಡಿದ್ದರು. 650 ಕೋಟಿ ಮೌಲ್ಯದ ಈ ಕಂಪನಿ 2023ಯಲ್ಲಿ 53.27 ಕೋಟಿ ರೂಪಾಯಿ ಲಾಭ ಮಾಡಿತ್ತು.
ಬ್ಲ್ಯೂ ಟೊಕಾಯ್ ಕಾಫಿ
ಗುರುಗ್ರಾಮ ಮೂಲದ ಕಾಫಿ ಕಂಪನಿ 'ಬ್ಲ್ಯೂ ಟೊಕಾಯ್ ಕಾಫಿ'ನಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. 2023ರಲ್ಲಿ ಹೂಡಿಕೆ ಮಾಡಿದ್ದ ಈ ಕಂಪನಿಯ ಮೌಲ್ಯ 650 ಕೋಟಿ. 2023ರಲ್ಲಿ 129 ಕೋಟಿ ರೂಪಾಯಿ ಲಾಭ ಮಾಡಿತ್ತು. ದೀಪಿಕಾ ಪಡುಕೋಣೆ 9ಕ್ಕೂ ಅಧಿಕ ಸ್ಟಾರ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದು, ಒಟ್ಟು ಆಸ್ತಿ 550 ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











