ಆರ್‌ಸಿಬಿ ವಿರುದ್ಧ ಪಂಜಾಬ್ ಗೆದ್ದರೆ, ನಟಿ ಪ್ರೀತಿ ಜಿಂಟಾ ಅಕೌಂಟ್‌ಗೆ ಬರುವ ಹಣ ಎಷ್ಟು? ಈ ಟೀಮ್ ಇಲ್ಲಿವರೆಗೂ ಗಳಿಸಿದ್ದೆಷ್ಟು?

ಬಾಲಿವುಡ್ ನಟಿ ಪ್ರೀತಿ ಜಿಂಟಾ ಈಗ ಸಿನಿಮಾಗಳಿಗಿಂತ ಹೆಚ್ಚಾಗಿ ಉದ್ಯಮದಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ತಾವು ದುಡಿದ ಹಣವನ್ನು ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಐಪಿಎಲ್‌ ತಂಡ ಪಂಜಾಬ್ ಕಿಂಗ್ಸ್ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿರೋದು ವಿಶೇಷ. ಆದರೆ, ಇಲ್ಲಿವರೆಗೂ ಇವರ ಸಹ ಮಾಲೀಕತ್ವದ ಪಂಜಾಬ್ ಟೀಮ್ ದೊಡ್ಡ ಮಟ್ಟದಲ್ಲೇನು ಸದ್ದು ಮಾಡಲಿಲ್ಲ.

ಆದರೆ, ಈ ಬಾರಿ ಪಂಬಾಜ್ ಕಿಂಗ್ಸ್ ತಂಡ ಫಿನಿಕ್ಸ್‌ನಂತೆ ಎದ್ದು ಬಂದಿದೆ. ಸುಮಾರು 11 ವರ್ಷಗಳ ಬಳಿಕ ಫೈನಲ್‌ಗೆ ಪ್ರವೇಶ ಪಡೆದಿದೆ. ಇಂದು (ಜೂನ್ 3) ಅಹ್ಮದಾಬಾದ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ನಡೆಯುವ ರೋಚಕ ಪಂದ್ಯಕ್ಕೆ ಕೋಟ್ಯಾಂತರ ಜನರು ಸಾಕ್ಷಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಇದೂವರೆಗೂ ಐಪಿಎಲ್‌ ಗೆಲ್ಲದ ಎರಡು ತಂಡಗಳು ಟ್ರೋಫಿ ಗೆಲ್ಲುವುದಕ್ಕೆ ಸೆಣೆಸಾಡಲಿವೆ.

How much money does Preity Zinta earn if her IPL team Punjab Kings PBKS wins in 2025 season

ಇದೂವರೆಗೂ ಹೀನಾಯ ಸೋಲು ಕಂಡು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಫೈನಲ್ ಪ್ರವೇಶಿಸಿದ್ದು ಪ್ರೀತಿ ಜಿಂಟಾಗೆ ಖುಷಿಯನ್ನು ದುಪ್ಪಟ್ಟು ಮಾಡಿದೆ. ಒಂದು ವೇಳೆ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದರೆ, ಪ್ರೀತಿ ಜಿಂಟಾಗೆ ಸಿಗುವ ಲಾಭ ಎಷ್ಟು? ಇವರ ತಂಡಕ್ಕೆ ಎಷ್ಟು ಕೋಟಿ ಸಿಗುತ್ತೆ? ಪ್ರೀತಿ ಜಿಂಟಾ ಹೂಡಿಕೆ ಮಾಡಿದ ಹಣವೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

ಪ್ರೀತಿ ಜಿಂಟಾ ವಿವಾಹದ ಬಳಿಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸಿನಿಮಾದಿಂದ ಬಹುತೇಕ ದೂರ ಉಳಿದಿದ್ದ ನಟಿ ಸಂಸಾರದಲ್ಲಿ ಬ್ಯುಸಿಯಾಗಿಬಿಟ್ಟರು. ಹಾಗಂತ ಸುಮ್ಮನೆ ಕೂತಿರಲಿಲ್ಲ. ಹಲವು ಉದ್ಯಮಗಳಲ್ಲಿ ಪ್ರೀತಿ ಜಿಂಟಾ ಹಣವನ್ನು ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಅತೀ ಹೆಚ್ಚು ಹಣವನ್ನು ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಮೇಲೆ ಹೂಡಿಕೆ ಮಾಡಿದ್ದರು. 2008ರಲ್ಲಿ ನೆಸ್ ವಾಡಿಯಾ, ಕರಣ್ ಪೌಲ್, ಮೋಹಿತ್ ಬರ್ಮನ್ ಜೊತೆ ಸೇರಿ ಪ್ರೀತಿ ಜಿಂಟಾ ಪಂಜಾಬ್ ತಂಡವನ್ನು ಖರೀದಿಸಿದ್ದರು. ವರದಿಗಳ ಪ್ರಕಾರ ಅಂದು ಪ್ರೀತಿ ಜಿಂಟಾ 35 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.

76 ಮಿಲಿಯನ್ ಡಾಲರ್‌ಗೆ ಪಂಜಾಬ್ ತಂಡವನ್ನು ಪ್ರೀತಿ ಜಿಂಟಾ ಖರೀದಿಸಿದ್ದರು. ಅದರಲ್ಲಿ ಕರಣ್ ಪೌಲ್ ಶೇ.48, ನೆಸ್ ವಾಡಿಯಾ ಶೇ.23, ಕರಣ್ ಪೌಲ್ ಶೇ.6 ಹಾಗೂ ಪ್ರೀತಿ ಜಿಂಟಾ ಶೇ.23ರಷ್ಟು (₹35 ಕೋಟಿ) ಹಣವನ್ನು ಹೂಡಿಕೆ ಮಾಡಿದ್ದರು. ಮನಿ ಕಂಟ್ರೋಲ್ ವರದಿ ಪ್ರಕಾರ, 2023ರಲ್ಲಿ ಪ್ರೀಜಿ ಜಿಂಟಾ ಸಹ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡ ಸುಮಾರು 664 ಕೋಟಿ ರೂಪಾಯಿ ಹಣವನ್ನು ಜನರೇಟ್ ಮಾಡಿತ್ತು. ಅದೇ ವರ್ಷ ಈ ಸಿನಿಮಾ 224 ಕೋಟಿ ರೂಪಾಯಿ ಪ್ರಾಫಿಟ್ ಮಾಡಿತ್ತು ಎಂದು ವರದಿಯಾಗಿದೆ.

How much money does Preity Zinta earn if her IPL team Punjab Kings PBKS wins in 2025 season

ಆದರೆ, ಇಲ್ಲಿವರೆಗೂ ಹೆಚ್ಚೆನೂ ಮೋಡಿ ಮಾಡದ ತಂಡ ಈ ಬಾರಿ ಫೈನಲ್‌ಗೆ ಪ್ರವೇಶ ಪಡೆದಿದೆ. ಒಂದು ವೇಳೆ 2025ರ ಟ್ರೋಫಿಯನ್ನು ಪಂಜಾಬ್ ಕಿಂಗ್ಸ್ ಗೆದ್ದರೆ, ತಂಡಕ್ಕೆ 21 ಕೋಟಿ ರೂಪಾಯಿ ಹಣ ಸಿಗಲಿದೆ. ಇವರ ಶೇರುಗಳ ಆಧಾರದ ಮೇಲೆ ನಟಿ ಪ್ರೀತಿ ಜಿಂಟಾಗೆ ಲಾಭದಲ್ಲಿ ಎಷ್ಟು ಹಣ ಬರಲಿದೆ ಎನ್ನುವುದು ಗೊತ್ತಾಗಲಿದೆ. ಶೇ.23ರಷ್ಟು ಅನುಪಾತದ ಆಧಾರದ ಮೇಲೆ ಲಾಭ ಸಿಗಲಿದೆ.

21 ಕೋಟಿ ರೂಪಾಯಿಯಲ್ಲಿ ಶೇ. 23ರಂತೆ ಪ್ರೀತಿ ಜಿಂಟಾ ಪಾಲಿಗೆ 4.83 ಕೋಟಿ ರೂಪಾಯಿ ಬರಲಿದೆ. ಆದರೆ, ಐಪಿಎಲ್ ರೂಲ್ಸ್‌ ಪ್ರಕಾರ ಐಪಿಎಲ್ ಗೆದ್ದ ತಂಡದ ಆಟಗಾರರಿಗೆ ಶೇ. 50 ರಷ್ಟು ಹಣವನ್ನು ನೀಡಬೇಕು ಎಂಬ ರೂಲ್ಸ್ ಇರುವುದರಿಂದ 2.42 ಕೋಟಿ ರೂಪಾಯಿ ಪ್ರೀತಿ ಜಿಂಟಾಗೆ ಜೇಬು ಸೇರಲಿದೆ ಎನ್ನಲಾಗಿದೆ. ಹಾಗಂತ ಇದಷ್ಟೇ ಹಣ ಅಲ್ಲ. ಪ್ರೀತಿ ಜಿಂಟಾ ತಂಡ ಪಂಜಾಬ್‌ ಕಿಂಗ್ಸ್‌ ಪ್ರಾಯೋಜಕರು, ಜಾಹೀರಾತು ಸೇರಿದಂತೆ ಹಲವು ಕಡೆಗಳಿಂದ ಕೋಟಿಗಳ ಲೆಕ್ಕದಲ್ಲಿ ಹಣ ಹರಿದು ಬರುತ್ತೆ. ಹೀಗಾಗಿ ಪಂದ್ಯ ಗೆಲ್ಲುವುದರಿಂದ ಸಿಗುವ ಹಣಕ್ಕಿಂದ ಪ್ರಾಯೋಕತ್ವದಿಂದ ಬರುವ ಲಾಭ ಹೆಚ್ಚಿದೆ. ಅದನ್ನು ತಂಡ ಇನ್ನೂ ರಿವೀಲ್ ಮಾಡಿಲ್ಲ.

More from Filmibeat

English summary
How much money does Preity Zinta earn if her IPL team Punjab Kings PBKS wins in 2025 season?
Read more about: preity zinta ipl profit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X