ಫೈನಲ್‌ನಲ್ಲಿ RCB ವಿರುದ್ಧ ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಜಿಂಟಾ ಗಳಿಸಿದ್ದೆಷ್ಟು?

ನಿನ್ನೆಯಷ್ಟೇ (ಜೂನ್ 4) ಐಪಿಎಲ್ ಪಂದ್ಯಗಳಿಗೆ ತೆರೆ ಬಿದ್ದಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದಕ್ಕೆ ಶತಪ್ರಯತ್ನ ನಡೆಸಿದ್ದವು. ಕೊನೆಗೂ ಗೆಲುವು ಆರ್‌ಸಿಬಿಗೆ ಒಲಿಯಿತು. ವಿಶೇಷ ಅಂದರೆ, ಎರಡೂ ತಂಡಗಳೂ 18 ಸೀಸನ್‌ಗಳಿಂದ ಟ್ರೋಫಿಗಾಗಿ ಪೈಪೋಟಿ ನಡೆಸುತ್ತಲೇ ಇದ್ದವು. ನಿನ್ನೆಯ ಫೈನಲ್‌ನಲ್ಲಿ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಪಂಜಾಬ್ ಆಗಿತ್ತು. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿ ಆರ್‌ಸಿಬಿ ಕಂಟಕ ಎಂದೇ ಹೇಳಲಾಗಿತ್ತು.

ಆರ್‌ಸಿಬಿ ವಿರುದ್ಧ ಪಂಜಾಬ್ ಸೋಲುತ್ತಿದ್ದಂತೆ ನಟಿ ಪ್ರೀತಿ ಜಿಂಟಾಗೂ ಈ ಗೆಲುವು ಸಿಗಬೇಕು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭ ಆಗಿವೆ. 18ನೇ ಸೀಸನ್‌ನಲ್ಲಿ ಪ್ರಬಲ ತಂಡ ಕಟ್ಟಿದ್ದರು. ಇನ್ನೇನು ಫೈನಲ್ ಪಂದ್ಯ ಗೆಲ್ಲಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದ ತಂಡ ಕೊನೆಯ ಹಂತದಲ್ಲಿ ಮುಗ್ಗರಿಸಿದೆ. ಹಾಗಿದ್ದರೆ, ಪಂಜಾಬ್ ಸೋತ ಬಳಿಕ ಪ್ರೀತಿ ಜಿಂಟಾ ಕೋಟಿ ಲೆಕ್ಕದಲ್ಲಿ ಗಳಿಸಿದ್ದಾರೆ.

How much money Preity Zinta earned after her IPL team Punjab Kings PBKS lost against 2025 season

ಪಂಜಾಬ್ ಕಿಂಗ್ಸ್‌ನ ಪ್ರಮುಖ ಆಕರ್ಷಣೆ ಪ್ರೀತಿ ಜಿಂಟಾ ಆಗಿದ್ದರು. ತಮ್ಮ ತಂಡದ ಪ್ರತಿಯೊಂದು ಪಂದ್ಯಕ್ಕೂ ಆಗಮಿಸಿ ಬೆಂಬಲ ನೀಡಿದ್ದರು. ಒಂದು ಬಾರಿಗೂ ಕಪ್ ಗೆಲ್ಲದ ಎರಡು ತಂಡಗಳಲ್ಲಿ ಒಂದಕ್ಕೆ ಗೆಲುವು ಖಚಿತವಾಗಿತ್ತು. ಅದರಲ್ಲೂ ಶ್ರೇಯಸ್ಸ್ ಅಯ್ಯರ್ ನಾಯಕತ್ವವನ್ನು ಕಂಡ ಕ್ರಿಕೆಟ್ ದಿಗ್ಗಜರು ಈಬಾರಿ ಕಪ್ ಪಂಜಾಬ್ ಕಿಂಗ್ಸ್‌ಗೆ ಅಂತಲೇ ಭವಿಷ್ಯ ನುಡಿದಿದ್ದರು. ಆದರೆ, ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿತ್ತು. ಆದರೂ, ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಈ ಬಾರಿ ಸ್ಟಾರ್ ತಂಡವಾಗಿ ಹೊರ ಹೊಮ್ಮಿದ್ದು, ಅತ್ಯಧಿಕ ಲಾಭ ಗಳಿಸಿದೆ ಎನ್ನಲಾಗಿದೆ.

ಪಂಜಾಬ್ ತಂಡದ ಮೇಲೆ ₹35 ಕೋಟಿ ಹೂಡಿಕೆ

ಪ್ರೀತಿ ಜಿಂಟಾ ಕೇವಲ ನಟಿಯಷ್ಟೇ ಅಲ್ಲ. ಅವರೊಬ್ಬರ ಉದ್ಯಮಿ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರೂ, ಇವರು ಅತೀ ಹೂಡಕೆ ಮಾಡಿದ್ದು ಮತ್ತು ಗಳಿಸಿದ್ದು ಎರಡೂ ಪಂಜಾಬ್ ಕಿಂಗ್ಸ್‌ನಿಂದಲೇ. 2008ರಲ್ಲಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಕರಣ್ ಪೌಲ್, ಮೋಹಿತ್ ಬರ್ಮನ್ ಸೇರಿ ಪಂಜಾಬ್ ತಂಡವನ್ನು ಖರೀದಿಸಿದ್ದರು. ಈಗಾಗಲೇ ವರದಿಯಾಗಿರುವ ಪ್ರಕಾರ 18 ವರ್ಷಗಳ ಹಿಂದೆನೇ ಪ್ರೀತಿ ಜಿಂಟಾ 35 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.

ಪ್ರೀತಿ ಜಿಂಟಾ 2008ರಿಂದ ಪಂಜಾಬ್ ತಂಡದ ಸಹಮಾಲೀಕರು.
ಪಂಜಾಬ್ ತಂಡಕ್ಕಾಗಿ ಪ್ರೀತಿ ಜಿಂಟಾ ₹35 ಕೋಟಿ ಹೂಡಿಕೆ
2025 ಐಪಿಎಲ್ ರನ್ನರ್ ಅಪ್ ಪಂಜಾಬ್ ತಂಡಕ್ಕೆ ₹12.5ಕೋಟಿ

ಈ ಬಾರಿ ಪ್ರೀತಿ ಜಿಂಟಾ ಕೈ ಸೇರುವುದೆಷ್ಟು?

ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ತಂಡ ಪಂಜಾಬ್ ಕಿಂಗ್ಸ್ ಒಂದ್ವೇಳೆ ಐಪಿಲ್ ಟ್ರೋಫಿ ಗೆದ್ದಿದ್ದರೆ, ₹20 ಕೋಟಿ ಸಿಗುತ್ತಿತ್ತು. ಆದರೆ, ರನ್ನರ್‌ ಅಪ್ ಆಗಿದ್ದರಿಂದ 12.5 ಕೋಟಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಇದರಲ್ಲಿ ಪ್ರೀತಿ ಜಿಂಟಾ ಪಾಲು ಶೇ. 23ರಷ್ಟು. ಅಂದರೆ, 2.8 ಕೋಟಿ ರೂಪಾಯಿ ಸೇರಲಿದೆ. ಆದರೆ, ಪಂದ್ಯದಲ್ಲಿ ಗೆದ್ದ ಹಣವನ್ನು ಆಟಗಾರರಿಗೂ ಶೇ.50ರಷ್ಟು ನೀಡಬೇಕು ಎಂಬ ನಿಯಮವಿದ್ದು, ಪ್ರೀತಿ ಜಿಂಟಾಗೆ 1.4 ಕೋಟಿ ರೂಪಾಯಿ ಶೇರ್ ಬರಲಿದೆ ಎಂದು ಅಂದಾಜಿಸಲಾಗಿದೆ.

How much money Preity Zinta earned after her IPL team Punjab Kings PBKS lost against 2025 season

ಹೆಚ್ಚಿದ ಪಂಜಾಬ್ ಮೌಲ್ಯ

ಪಂಜಾಬ್ ಕಿಂಗ್ಸ್ ಫೈನಲ್‌ಗೆ ಲಗ್ಗೆ ಇಡುತ್ತಿದ್ದಂತೆ ತಂಡ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಇಲ್ಲಿವರೆಗೂ ಪಂಜಾಬ್ ತಂಡವನ್ನು ಐಪಿಎಲ್‌ನ ಒಂದು ತಂಡವಾಗಿತ್ತಷ್ಟೇ. ಆದ್ರೀಗ ಜನಪ್ರಿಯ ತಂಡಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. 18ನೇ ಸೀಸನ್ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಮೌಲ್ಯ ಕೂಡ ಹೆಚ್ಚಾಗಿದೆ ಎಂದು ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಪಂಜಾಬ್ ಬ್ರ್ಯಾಂಡ್ ವಾಲ್ಯೂ 68 ಮಿಲಿಯನ್ ಡಾಲರ್ ಇತ್ತು ಎಂದು ಮೈಖೇಲ್ ವರದಿ ಮಾಡಿತ್ತು. ಆದ್ರೀಗ ಅದರ ವ್ಯಾಲ್ಯೂ ಏರಿಕೆಯಾಗಿದೆ.

ಪ್ರೀತಿ ಜಿಂಟಾ ಆಸ್ತಿ ಮೌಲ್ಯ ಎಷ್ಟು?

ಪ್ರೀತಿ ಜಿಂಟಾ ನಟಿಯಾಗಿ ಹಾಗೂ ಉದ್ಯಮಿಯಾಗಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಇವರ ಆಸ್ತಿ ಮೌಲ್ಯ ಕೂಡ ಏರಿಕೆಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಪ್ರೀತಿ ಜಿಂಟಾ ಆಸ್ತಿ ಮೌಲ್ಯ 183 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದುಬಾರಿ ಕಾರುಗಳು, ಬಂಗಲೆಯನ್ನು ಖರೀದಿಸಿದ್ದಾರೆ. ಅಲ್ಲದೆ ಪಂಜಾಬ್ ಕಿಂಗ್ಸ್ ಬ್ರ್ಯಾಂಡ್‌ನಿಂದ ಕೋಟಿ ಲೆಕ್ಕದಲ್ಲಿ ಹಣವನ್ನು ಗಳಿಸುತ್ತಿದ್ದಾರೆ.

ಹೈಲೈಟ್ಸ್

ಪಂಜಾಬ್ ಕಿಂಗ್ಸ್ ಮೌಲ್ಯ $76 ಮಿಲಿಯನ್‌ ನಿಂದ $925 ಮಿಲಿಯನ್‌ಗೆ ಏರಿಕೆ
18ನೇ ಸೀಸನ್ ಬಳಿಕ ಪಂಜಾಬ್ ಮೌಲ್ಯ ಏರಿಕೆ ಸಾಧ್ಯತೆ
ಪ್ರೀತಿ ಜಿಂಟಾ ಆಸ್ತಿ ಮೌಲ್ಯ ₹183 ಕೋಟಿ
ಜಾಹೀರಾತಿಗೆ 1.5 ಕೋಟಿ ಸಂಭಾವನೆ
ಒಂದು ಸಿನಿಮಾ ಪಡೆಯುವ ಸಂಭಾವನೆ ₹10 ಕೋಟಿ

More from Filmibeat

Read more about: preity zinta actress ipl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X