ಡೇಟಿಂಗ್ ಆಪ್ ಬಳಕೆ ಮಾಡುತ್ತಾರಾ ಹೃತಿಕ್, ಆದಿತ್ಯ, ಅರ್ಜುನ್ ಕಪೂರ್? ಲೀಕ್ ಆದ ಫೋಟೊಗಳ ಕಥೆಯೇನು?

ಈಗೀಗ ಡೇಟಿಂಗ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಯುವಕರಿಂದ ವಯಸ್ಕರವರೆಗೂ ಈಗ ಡೇಟಿಂಗ್ ಆಪ್‌ಗಳನ್ನು ಬಳಸುತ್ತಾರೆ. ತಮ್ಮ ಇಷ್ಟ ಪಾರ್ಟ್ನರ್‌ಗಳನ್ನು ಅಲ್ಲಿಯೇ ಹುಡುಕಿಕೊಳ್ಳುತ್ತಾರೆ. ಈಗೀಗ ಇಂತಹ ಮನಸ್ಥಿತಿಯಲ್ಲಿ ಇರುವವರಿಗಾಗಿಯೇ ದಿನಕ್ಕೊಂದು ಡೇಟಿಂಗ್ ಆಪ್‌ಗಳು ಹುಟ್ಟಿಕೊಂಡಿವೆ.

ಈಗಾಗಲೇ ಟಿಂಡರ್, ಬಂಬಲ್ ಮತ್ತು ಹಿಂಜ್ ಅಂತಹ ಡೇಟಿಂಗ್ ಆಪ್‌ಗಳು ಚಾಲ್ತಿಯಲ್ಲಿ ಇವೆ. ಇವುಗಳ ಮೂಲಕ ಯುವಕ-ಯುವತಿಯರು ಅಥವಾ ಪಾರ್ಟ್ನರ್‌ಗಳನ್ನು ಹುಡುಕುತ್ತಿರುವವರು ಇಲ್ಲಿ ತಮ್ಮ ಪ್ರೊಫೈಲ್‌ಗಳನ್ನು ರಿಜಿಸ್ಟರ್ ಮಾಡಿಕೊಂಡಿರುತ್ತಾರೆ.

Hrithik Aditya Arjun Kapur dating profiles leaked

ಇನ್ನು ಸೆಲೆಬ್ರೆಟಿಗಳ ಕಥೆಯೇನು? ಸಿನಿಮಾ ಸ್ಟಾರ್‌ಗಳು ಡೇಟಿಂಗ್ ಆಪ್‌ ಅನ್ನು ಬಳಕೆ ಮಾಡುತ್ತಾರಾ? ಇಂತಹದ್ದೊಂದು ಅನುಮಾನ ಮಾಡಿದೆ. ಆದರೆ, ಇತ್ತೀಚೆಗೆ ಕೆಲವು ಬಾಲಿವುಡ್‌ ನಟರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಹೃತಿಕ್ ರೋಷನ್, ಆದಿತ್ಯ ರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಪ್ರೊಫೈಲ್‌ಗಳು ಇವೆ. ಅಸಲಿಗೆ ಲೀಕ್ ಆದ ಈ ಫೋಟೊಗಳ ಅಸಲಿಯತ್ತೇನು? ಮುಂದೆ ಓದಿ.

ಇತ್ತೀಚೆಗೆ ರೆಡ್ಡಿಟ್ ಬಳಕೆದಾರರೊಬ್ಬರು ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿದ್ದರು. ಇದರಲ್ಲಿ ಬಾಲಿವುಡ್‌ನ ಮೂವರು ಸ್ಟಾರ್‌ಗಳು ರಹಸ್ಯವಾಗಿ ಡೇಟಿಂಗ್ ಆಫ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿದ್ದಾರೆಂದು ಆ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದರು. ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್, ಆದಿತ್ಯ ರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಪ್ರೊಫೈಲ್ ಫೋಟೊಗಳನ್ನು ಶೇರ್ ಮಾಡಲಾಗಿದೆ.

ಹೃತಿಕ್ ರೋಷನ್ ತನ್ನ ಪ್ರೊಫೈಲ್‌ನಲ್ಲಿ ವಯಸ್ಸು 50 ವರ್ಷ. ನಟ, ನಿರ್ಮಾಪಕ, ಉದ್ಯಮಿ ಎಂದು ಬರೆದುಕೊಂಡಿದ್ದರೆ, ಆದಿತ್ಯ ರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಕೇವಲ ನಟ ಎಂದು ನಮೂದಿಸಿದ್ದಾರೆ. ಆದರೆ, ಇದು ನಿಜವಾಗಿಯೂ ಇವರದ್ದೇ ಪ್ರೊಫೈಲ್ ಇರಬಹುದಾ? ಅಥವಾ ಯಾರೋ ಫೇಕ್ ಕ್ರಿಯೇಟ್ ಮಾಡಿದ್ದಾರಾ? ಅನ್ನೋದನ್ನು ಇನ್ನು ತಿಳಿಯಬೇಕಿದೆ. ಆದರೆ, ಈ ಸುದ್ದಿಯನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Hrithik Aditya Arjun Kapur dating profiles leaked

ಸಾಮಾನ್ಯವಾಗಿ ಜನರು ಟಿಂಡರ್, ಬಂಬಲ್ ಹಾಗೂ ಹಿಂಜ್ ಡೇಟಿಂಗ್ ಆಪ್ ಅನ್ನು ಬಳಸುತ್ತಾರೆ. ಆದರೆ, ಬಾಲಿವುಡ್‌ ಮಂದಿ ಈ ಡೇಟಿಂಗ್‌ ಆಪ್‌ನಲ್ಲಿ ಇಲ್ಲ. ಬದಲಾಗಿ ಪ್ರೀಮಿಯಂ ಡೇಟಿಂಗ್ ಆಪ್ ರಾಯ (Raya)ದಲ್ಲಿ ರಹಸ್ಯವಾಗಿ ತನ್ನ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಕೇವಲ ಶೇ.ರಷ್ಟು ಅಪ್ಲಿಕೇಷನ್‌ಗಳಿಗೆ ಅನ್ನು ಮಾತ್ರ ಅನುಮತಿಯನ್ನು ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಷಯ ಸುದ್ದಿಯಾಗಿತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. "ಇಂತಹ ಶ್ರೀಮಂತ ವ್ಯಕ್ತಿಗಳಿಗೆ ಗರ್ಲ್‌ಫ್ರೆಂಡ್‌ಗಳು ಸಿಗದೆ, ಡೇಟಿಂಗ್ ಆಪ್ ಮೊರೆ ಹೋಗುತ್ತಿದ್ದಾರೆ ಎಂದಾದರೆ, ಇನ್ನು ಸಾಮಾನ್ಯ ಜನರ ಕಥೆಯೇನು?" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಹೃತಿಕ್ ರೋಷನ್ ಸದ್ಯ ಸಬಾ ಅಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅದೇ ಆದಿತ್ಯ ರಾಯ್ ಕಪೂರ್ ನಟಿ ಅನನ್ಯಾ ಪಾಂಡೆ ಜೊತೆ ಅರ್ಜುನ್ ಕಪೂರ್ ಮಲೈಕಾ ಅರೋರಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X