ಮೊದಲ ದಿನವೇ ದಾಖಲೆ ಬರೀತಾರಾ ಹೃತಿಕ್-ದೀಪಿಕಾ? ಫಸ್ಟ್ ಡೇ ಎಷ್ಟು ಕಲೆಕ್ಷನ್ ಆಗಬಹುದು?
ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೊ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯ ಸಿನಿಮಾ 'ಫೈಟರ್' ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ. ಇದು 2024ರಲ್ಲಿ ರಿಲೀಸ್ ಆಗುತ್ತಿರುವ ಮೊದಲ ಬಿಗ್ ಬಜೆಟ್ ಸಿನಿಮಾ. ಗಣರಾಜ್ಯೋತ್ಸವದ ಅಂಗವಾಗಿ ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗುತ್ತಿದೆ.
ಹೃತಿಕ್ ರೋಷನ್ ಹಾಗೂ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೋಡಿಯ ಮೂರನೇ ಸಿನಿಮಾವಿದು. ಈ ಹಿಂದೆ 'ಬ್ಯಾಂಗ್ ಬ್ಯಾಂಗ್', 'ವಾರ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ಈ ಜೋಡಿ ಕೊಟ್ಟಿದೆ. ಈಗ ದೀಪಿಕಾ ಪಡುಕೋಣೆ ಈ ತಂಡವನ್ನು ಸೇರಿಕೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು.

ಈಗಾಗಲೇ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಟ್ರೇಡ್ ಎಕ್ಸ್‌ಪರ್ಟ್ಸ್ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ಅಂದಾಜು ಲೆಕ್ಕ ಹಾಕಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಒಂದೇ ಒಂದು ಸಿನಿಮಾ ಸೋಲದೇ ಇರೋದ್ರಿಂದ 'ಫೈಟರ್' ಮೊದಲ ವಾರದಲ್ಲಿ ಆರಾಮಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಬಹುದೆಂದು ಸಿನಿಮಾ ಪಂಡಿತರು ಲೆಕ್ಕಹಾಕಿದ್ದಾರೆ.
'ಫೈಟರ್' ತಂಡ ಇದೂವರೆಗೂ ರಿಲೀಸ್ ಮಾಡಿರುವ ಹಾಡುಗಳು, ಟೀಸರ್ ಹಾಗೂ ಟ್ರೈಲರ್‌ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್ ಉತ್ತಮವಾಗಿ ಆಗಿದೆ. ಇದೂವರೆಗೂ ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 1.85 ಸಾವಿರ ಟಿಕೆಟ್‌ಗಳು ಸೇಲ್ ಆಗಿದೆ. ಮಹಾರಾಷ್ಟ್ರ, ದೆಹಲಿ ಹಾಗೂ ಕರ್ನಾಟಕದಲ್ಲಿ ಅತೀ ಹೆಚ್ಚು ಟಿಕೆಟ್‌ಗಳು ಖರೀದಿಯಾಗಿದ್ದು, 5.75 ಕೋಟಿ ರೂಪಾಯಿ ಅಡ್ವಾನ್ಸ್ ಬುಕಿಂಗ್‌ನಿಂದಲೇ ಬಂದಿದೆ ಎಂದು ವರದಿಯಾಗಿದೆ.
ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಒಂದೇ ಸಿನಿಮಾ ನಟಿಸಿದ್ದು, ಮೊದಲ ದಿನ ಭಾರತದ ಬಾಕ್ಸಾಫೀಸ್ ಕಲೆಕ್ಷನ್ 35 ಕೋಟಿ ರೂಪಾಯಿ ಎಂದು ಅಂದಾಜು ಹಾಕಲಾಗಿದೆ. ಅದೇ ಶುಕ್ರವಾರದಿಂದ ಮೂರು ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿಂದ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ. 'ಫೈಟರ್' ಮುಂದೆ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗದೇ ಇರೋದು ಸಿನಿಮಾ ಅಡ್ವಾಂಟೇಜ್ ಸಿಕ್ಕಂತಾಗಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಫೈಟರ್' ಮಹಾನಗರದಲ್ಲಿ ಹೆಚ್ಚು ಗಳಿಕೆ ಮಾಡಲಿದೆ. ಗ್ರೇಡ್ 1 ಹಾಗೂ ಗ್ರೇಡ್ 2 ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಅಲ್ಲದೆ ಮಲ್ಟಿಪ್ಲೆಕ್ಸ್ ಸಿನಿಮಾಗಳಲ್ಲಿ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಬಹುದು ಎಂದು ಅಂದಾಜು ಹಾಕಲಾಗಿದೆ. ಆದರೂ, ಇದೇ 'ಫೈಟರ್' ನಿರ್ದೇಶಕನೇ ಆಕ್ಷನ್ ಕಟ್ ಹೇಳಿದ್ದ ಶಾರುಖ್ ಖಾನ್ ನಟನೆಯ ಸಿನಿಮಾ 'ಪಠಾಣ್' ಮೀರಿಸಲು ಅಸಾಧ್ಯವೆನ್ನಲಾಗಿದೆ.
ಹೃತಿಕ್ ರೋಷನ್ ಹಾಗೂ ಸಿದ್ದಾರ್ಥ್ ಆನಂದ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ಬಂದಿದ್ದ ಸಿನಿಮಾ 'ಬ್ಯಾಂಗ್ ಬ್ಯಾಂಗ್' 181 ಕೋಟಿ ರೂಪಾಯಿ ಕಲೆ ಹಾಕಿತ್ತು. ಹಾಗೇ 'ವಾರ್' ಸಿನಿಮಾ 318 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಇದು ಹೃತಿಕ್ ರೋಷನ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿತ್ತು. ಈಗ ಕಾಲ ಬದಲಾಗಿದೆ. ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿವೆ. ಹೀಗಾಗಿ 'ಫೈಟರ್' ಕೂಡ ಅಂತಹದ್ದೇ ಇತಿಹಾಸ ಬರೆಯುತ್ತಾ? ಅನ್ನೋ ಪ್ರಶ್ನೆಯಂತೂ ಎದುರಾಗಿದೆ.


Click it and Unblock the Notifications











