Hrithik-Saba Azad: ಮುಂಬೈ ಏರ್‌ಪೋರ್ಟ್‌ನಲ್ಲಿ ಗೆಳತಿ ಜೊತೆ ಕಂಡ ಹೃತಿಕ್ ರೋಷನ್.. ಏನ್ ಸಮಾಚಾರ?

ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಈಗೀಗ ಸಿನಿಮಾಗಿಂತ ಹೆಚ್ಚಾಗಿ ತನ್ನ ಗೆಳತಿ ವಿಷಯಕ್ಕೆ ಹೆಚ್ಚು ಚರ್ಚೆಯಲ್ಲಿದ್ದಾರೆ. ಇಬ್ಬರೂ ಆಗಾಗ ಸಾರ್ವಜನಿಕವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೃತಿಕ್ ಹಾಗೂ ಗೆಳತಿ ಸಬಾ ಅಜಾದ್ ಇಬ್ಬರೂ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿನ ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು.

ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಇಬ್ಬರೂ ವಿದೇಶಿ ಪ್ರವಾಸದಲ್ಲಿರೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಈಗ ಈ ಜೋಡಿ ಮತ್ತೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೆಳತಿಯ ಕೈ ಹಿಡಿದು ಪಾಪರಾಜಿಗಳ ಮುಂದೆ ರಾಜಾರೋಷವಾಗಿ ಬಂದಿಳಿದ ಹೃತಿಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಸದ್ದು ಮಾಡುತ್ತಿದೆ.

Hrithik Roshan and girlfriend Saba Azad seen in Mumbai airport Watch video

ಹೃತಿಕ್ ರೋಷನ್ ಮೊದಲ ಪತ್ನಿ ಜೊತೆ ವಿಚ್ಛೇದನ ಪಡೆದ ಬಳಿಕ ಕೆಲವು ವರ್ಷ ಒಂಟಿಯಾಗಿಯೇ ಇದ್ದರು. ಬಳಿಕ ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ರೆಸ್ಟೋರೆಂಟ್ ಒಂದರಿಂದ ಊಟ ಮುಗಿಸಿ ಹೊರಬರುವಾಗ ಕ್ಯಾಮರಾ ಕಣ್ಣುಗಳಿಗೆ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಈ ಜೋಡಿ ಮೇಲೆ ಪಾಪರಾಜಿಗಳು ಕಣ್ಣಿಟ್ಟಿದ್ದಾರೆ.

ಪ್ರವಾಸದಿಂದ ಮರಳಿದ ಹೃತಿಕ್-ಸಬಾ

ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಇಬ್ಬರೂ ಬಹಳ ದಿನಗಳ ಕಾಲ ಪ್ರವಾಸಕ್ಕೆ ಹೋಗಿದ್ದರು. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದು ಬಿಟ್ಟರೆ, ಮತ್ತೆ ಇಬ್ಬರ ಬಗ್ಗೆ ಸುದ್ದಿನೇ ಇರಲಿಲ್ಲ. ಈಗ ಪ್ರವಾಸ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ. ಈ ವೇಳೆ ಏರ್‌ಪೋರ್ಟ್‌ನಲ್ಲೇ ಗಂಭೀರ ಚರ್ಚೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅರ್ಜೇಂಟಿನಾಗೆ ತೆರಳಿದ್ದ ಲವ್ ಬರ್ಡ್ಸ್

ಬಾಲಿವುಡ್ ಮಂದಿನೇ ಹಾಗೆ ಸಿನಿಮಾದಿಂದ ಕೊಂಚ ಮಟ್ಟಿಗೆ ಬಿಡುವು ಸಿಕ್ತು ಅಂದ್ರೆ ಸಾಕು ಪ್ರವಾಸಕ್ಕೆ ಹೊರಟು ಬಿಡುತ್ತಾರೆ. ಹೃತಿಕ್ ರೋಷನ್ ಹಾಗೂ ಸಬಾ ಕೂಡ ಅಷ್ಟೇ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಅರ್ಜೇಂಟಿನಾಗೆ ಹೋಗಿದ್ದರು. ಕೆಲವು ದಿನಗಳ ಹಿಂದಷ್ಟೇ ಹೃತಿಕ್ ಗೆಳತಿ ಸಬಾ ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಬರ್ತ್‌ಡೇ ಪಾರ್ಟಿಯಲ್ಲಿ ಪ್ರತ್ಯಕ್ಷ

ಹೃತಿಕ್ ರೋಷನ್ ಹಾಗೂ ಗರ್ಲ್‌ಫ್ರೆಂಡ್ ಸಬಾ ಆಜಾದ್ ವಿದೇಶಿ ಪ್ರವಾಸದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳಿಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಅಂದ್ಹಾಗೆ ಈ ಜೋಡಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಬರ್ತ್‌ಡೇ ಪಾರ್ಟಿಯಲ್ಲಿ ಮೊದಲ ಬಾರಿಗೆ ಪ್ರತ್ಯಕ್ಷ ಆಗಿತ್ತು. ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಮಧು ಮಾಂಟೇನಾ ಹಾಗೂ ಇರಾ ತ್ರಿವೇದಿ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಹೃತಿಕ್ ಈಗ 'ಫೈಟರ್'

ಹೃತಿಕ್ ರೋಷನ್ ಬಿಗ್ ಪ್ರಾಜೆಕ್ಟ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದುವೇ 'ಫೈಟರ್'. ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಈ ಸಿನಿಮಾ ಹೃತಿಕ್ ರೋಷನ್ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬರದಿಂದ ಸಾಗಿದ್ದು, ಜನವರಿ 25, 2024ರಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

More from Filmibeat

English summary
Hrithik Roshan and girlfriend Saba Azad seen in Mumbai airport Watch video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X