ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಹೃತಿಕ್ ರೋಷನ್: ಹೊಸ ಗರ್ಲ್‌ಫ್ರೆಂಡ್ ಹಿನ್ನೆಲೆಯೇನು?

ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಕ್ಕೆ ಹೃತಿಕ್ ಶುಕ್ರವಾರ( ಜನವರಿ 28) ರಾತ್ರಿ ಬಾಲಿವುಡ್ ನಟಿ ಜೊತೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಬರುವಾಗ, ಇಬ್ಬರೂ ಕೈ ಕೈ ಹಿಡಿದುಕೊಂಡು ಹೊರಬಂದಿದ್ದರು. ಇದು ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಇಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.

ಹೌದು.. ಹೃತಿಕ್ ರೋಷನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಮಾತು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ತನ್ನ ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುವ ಫೋಟೊಗಳಯ ಹರಿದಾಡಿದ್ದು ಬಿಟ್ಟರೆ, ಹೃತಿಕ್ ರೋಷನ್ ರೂಮರ್‌ಗಳ ಸುಳಿಗೆ ಸಿಕ್ಕಿಕೊಂಡಿರಲಿಲ್ಲ. ಈಗ ಬಾಲಿವುಡ್ ನಟಿ ಹಾಗೂ ಮ್ಯೂಸಿಷಿಯಲ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ.

ಕೈ ಕೈ ಹಿಡಿದು ಹೊರಬಂದ ಹೃತಿಕ್-ಸಬಾ ಆಜಾದ್

ಕೈ ಕೈ ಹಿಡಿದು ಹೊರಬಂದ ಹೃತಿಕ್-ಸಬಾ ಆಜಾದ್

ಶುಕ್ರವಾರ(ಜನವರಿ 28) ದಂದು ಹೃತಿಕ್ ರೋಷನ್ ಮುಂಬೈನ ಬಾಂದ್ರಾದ ಜಪಾನೀಸ್ ರೆಸ್ಟೋರೆಂಟ್‌ನಿಂದ ಹೊರಬಂದ ದೃಶ್ಯ ನೆಟ್ಟಿಗರ ನಿದ್ದೆ ಕೆಡಿಸಿದೆ. ಯಾಕಂದ್ರೆ, ಹೃತಿಕ್ ರೋಷನ್ ಸಿನಿಮಾ ಹಾಗೂ ರಂಗಭೂಮಿ ನಟಿ ಸಬಾ ಆಜಾದ್ ಅವರೊಂದಿಗೆ ಹೊಟೇಲ್‌ನಿಂದ ಹೊರಬಂದಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಹಬ್ಬಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೃತಿಕ್ ಪ್ರೀತಿಯಲ್ಲಿ ಬಿದ್ದಿರೋ ಆ ನಟಿ ಯಾರು ಅನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಸಬಾ ಆಜಾದ್ ಯಾರು?

ಸಬಾ ಆಜಾದ್ ಯಾರು?

1989ರಲ್ಲಿ ಜನವರಿ 1ರಂದು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ JANAM ಎನ್ನುವ ಗುಂಪು 'ಹಲ್ಲಾ ಬೋಲ್' ಹೆಸರಿನಲ್ಲಿ ಬೀದಿ ನಾಟಕ ಮಾಡುತ್ತಿತ್ತು. ಈ ವೇಳೆ ಗುಂಪೊಂದು ನಾಟಕಗಾರರ ಮೇಲೆ ಹಲ್ಲೆ ಮಾಡಿತ್ತು. ಇದರಲ್ಲಿ ಪ್ರಸಿದ್ಧ ನಾಟಕಗಾರ, ಅಂಕಣಗಾರರಾಗಿ ಖ್ಯಾತಿ ಪಡೆದಿದ್ದ ಸಫ್ದರ್ ಹಾಶ್ಮಿಗೆ ಗಂಭೀರ ಗಾಯವಾಗಿತ್ತು. ಮರು ದಿನ ಚಿಕಿತ್ಸೆ ಫಲಿಸದೆ ಸಫ್ದರ್ ಹಾಶ್ಮಿ ಸಾವನ್ನಪ್ಪಿದ್ದರು. ಘಾಜಿಯಾಬಾದ್ ಕೋರ್ಟ್ ಘಟನೆ ನಡೆದ 14 ವರ್ಷಗಳ ಬಳಿಕ 10 ಮಂದಿಗೆ ಶಿಕ್ಷೆ ನೀಡಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮುಕೇಶ್ ಶರ್ಮಾ ಕೂಡ ಇದ್ದರು. ಈ ಇವರ ಸಂಬಂಧಿಯೇ ಸಬಾ ಅಜಾದ್. ಈಕೆ ಕೂಡ ರಂಗಭೂಮಿಯಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಬಾ ಆಜಾದ್‌ಗೆ ಬಾಲಿವುಡ್ ನಂಟು ಹೇಗೆ?

ಸಬಾ ಆಜಾದ್‌ಗೆ ಬಾಲಿವುಡ್ ನಂಟು ಹೇಗೆ?

ಸಫ್ದರ್ ಹಾಶ್ಮಿಯವರ ನಾಟಕ ತಂಡ 'ಜನ ನಾಟ್ಯ ಮಂಚ್'ನಿಂದ ಸಬ ಆಜಾದ್‌ ಮೊದಲು ನಟನೆ ಆರಂಭಿಸಿದ್ದರು. ಹಬೀಬ್ ತನ್ವೀರ್ ಅನ್ನು ಸುಪ್ರಸಿದ್ಧ ಉರ್ದು ರಂಗಕರ್ಮಿ ಜೊತೆನೂ ಕೆಲಸ ಮಾಡಿದ್ದಾರೆ. ಒಡಿಸ್ಸಿ ನೃತ್ಯವನ್ನೂ ಕಲಿತು, ಇಂಗ್ಲೆಂಡ್, ಕೆನಾಡಗಳಲ್ಲಿ ಶೋಗಳನ್ನು ಕೊಟ್ಟಿದ್ದಾರೆ. 2008ರಲ್ಲಿ ಸಬಾ ಆಜಾದ್ 'ದಿಲ್ ಕಬಡ್ಡಿ' ಅನ್ನುವ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಬಳಿಕ 2011ರಲ್ಲಿ ತೆರೆಕಂಡ 'ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ' ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಶಾರ್ಟ್ ಫಿಲ್ಮ್, ವೆಬ್ ಸಿರೀಸ್‌ಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತದ ಕಡೆ ಸಬಾ ಆಜಾದ್ ವಾಲಿದ್ದರು.

ಲಿವ್ ಇನ್‌ನಲ್ಲಿ ಇದ್ದರು ಸಬಾ ಆಜಾದ್?

ಲಿವ್ ಇನ್‌ನಲ್ಲಿ ಇದ್ದರು ಸಬಾ ಆಜಾದ್?

2012ರಲ್ಲಿ ಸಬಾ ಆಜಾದ್ ಇಂಡಿಯನ್ ಇಂಡಿ ಮ್ಯೂಸಿಕ್‌ ಕಡೆ ಒಲವು ಬೆಳೆಸಿಕೊಂಡಿದ್ದರು. ಮ್ಯೂಸಿಷಿಯಲ್ ಕಮ್ ನಟ ಇಮಾದ್ ಷಾ ಅವರೊಂದಿಗೆ ಸೇರಿ ಮ್ಯಾಡ್‌ಬಾಯ್/ಮಿಂಕ್ ಎನ್ನುವ ಬ್ರ್ಯಾಂಡ್ ಕಟ್ಟಿದ್ದರು. ಇದೇ ಇಮಾದ್ ಷಾ 2013ರಲ್ಲಿ ಸಬಾ ಆಜಾದ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿದ್ದರು. ಈಗ ಹೃತಿಕ್ ರೋಷನ್‌ ಜತೆ ಸಬಾ ಆಜಾದ್ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಮಾತು ಹೇಳಿ ಬರುತ್ತಿದೆ. ಅದೇ ಮತ್ತೊಂದು ಕಡೆ ಹೃತಿಕ್ ಮ್ಯೂಸಿಕ್ ಪ್ರಾಜೆಕ್ಟ್‌ಗಾಗಿ ಸಬಾ ಜೊತೆ ಕೈ ಜೋಡಿಸಿದ್ದಾರೆ ಎಂದೂ ಮಾತಾಡಿಕೊಳ್ಳುತ್ತಿವೆ.

More from Filmibeat

English summary
Hrithik has been single ever since he announced his divorce with ex-wife Sussanne Khan. Know speculation is that Hrithik found love again with actress Saba Azad and they were in a live-in-relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X