Hrithik Roshan-Saba: ಗರ್ಲ್‌ಫ್ರೆಂಡ್ ಜೊತೆ ಅರ್ಜೇಂಟಿನಾದಲ್ಲಿ ಕಾಣಿಸಿಕೊಂಡ ಹೃತಿಕ್ ರೋಷನ್.. ಫೋಟೊ ವೈರಲ್!
ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಇಷ್ಟ ಪಡುವವರು ಅದೆಷ್ಟು ಮಂದಿ ಇಲ್ಲ. ಆದರೆ, ಹೃತಿಕ್ ರೋಷನ್ ಅಷ್ಟು ಸುಲಭಕ್ಕೆ ಸಿಗುವ ನಟನೇ? ಬಾಲಿವುಡ್‌ನ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿ. ಹಿಟ್ ಹಾಗೂ ಫ್ಲಾಪ್ ಸಿನಿಮಾಗಳನ್ನು ಕೊಟ್ಟರೂ ಅಭಿಮಾನಿಗಳು ಮಾತ್ರ ಕಡಿಮೆ ಆಗೋದಿಲ್ಲ. ಹೃತಿಕ್ ವೃತ್ತಿ ಬದುಕು ಸಕ್ಸಸ್‌ಫುಲ್ ಆಗಿದ್ದರೂ, ವೈಯಕ್ತಿಕ ಬದುಕಿನಲ್ಲಿ ಹಿನ್ನೆಡೆ ಅನುಭವಿಸಿದ್ದರು.
ವಿಚ್ಛೇದನದ ಬಳಿಕ ಸಿಂಗಲ್ ಆಗಿದ್ದ ಹೃತಿಕ್ ರೋಷನ್‌ಗೀಗ ಸಂಗಾತಿ ಸಿಕ್ಕಿದ್ದಾಗಿದೆ. ಗರ್ಲ್ ಫ್ರೆಂಡ್ ಸಬಾ ಆಜಾದ್ ಜೊತೆ ಹೃತಿಕ್ ಆರಾಮಾಗಿ ಟೂರು, ಟ್ರಿಪ್ ಅಂತ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾದಿಂದ ಬಿಡುವು ಸಿಕ್ಕರೆ ಸಾಕು ಹೃತಿಕ್ ರೋಷನ್ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಈಗ ಸಬಾ ಆಜಾದ್ ಜೊತೆ ಅರ್ಜೇಂಟಿನಾ ಟೂರ್ ಮಾಡುತ್ತಿದ್ದಾರೆ.

ಸ್ವತ: ಸಬಾ ಆಜಾದ್ ತನ್ನ ಸೂಪರ್‌ಸ್ಟಾರ್ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಜೊತೆಗಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅರ್ಜೇಂಟಿನಾದಲ್ಲಿ ಲವ್ ಬರ್ಡ್ಸ್
ಬಾಲಿವುಡ್‌ನಲ್ಲಿರೋ ಜೋಡಿ ಹಕ್ಕಿಗಳಲ್ಲಿ ಸಬಾ ಆಜಾದ್ ಹಾಗೂ ಹೃತಿಕ್ ರೋಷನ್ ಪೇರ್ ಕೂಡ ಒಂದು. ಈ ಜೋಡಿ ಸೋಶಿಯಲ್ ಮೀಡಿಯಾ ಅಥವಾ ಕ್ಯಾಮರಾ ಮುಂದೆ ಬರೋದು ತೀರಾ ವಿರಳ. ಹೀಗಾಗಿ ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ. ಸದ್ಯ ಸಬಾ ಆಜಾದ್ ತನ್ನ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹೃತಿಕ್ ರೋಷನ್ ಜೊತೆ ಅರ್ಜೇಂಟಿನಾ ಪ್ರವಾಸ ಕೈಕೊಂಡಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
"ನನ್ನ ಹಿಪ್ಪೋ ಹಾರ್ಟ್" ಎಂದ ಸಬಾ
ಹೃತಿಕ್ ರೋಷನ್ ಅರ್ಜೇಂಟಿನಾದ ಕೆಫೆಯೊಂದರಲ್ಲಿ ಕೂತು ಸಿಹಿ ತಿನಿಸುಗಳನ್ನು ಸವಿಯುತ್ತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಪ್ಪು ಬಣ್ಣ ಡ್ರೆಸ್ ತೊಟ್ಟು ಕ್ಯಾಪ್ ಧರಿಸಿ, ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ ಅನ್ನೋ ಚಿಂತನೇ ಇಲ್ಲದೆ ಹೃತಿಕ್ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಫೋಟೊವನ್ನು ಗರ್ಲ್‌ಫ್ರೆಂಡ್ ಸಬಾ ಆಜಾದ್ ಶೇರ್ ಮಾಡಿದ್ದು "ನನ್ನ ಹಿಪ್ಪೋ ಹಾರ್ಡ್" ಎಂದು ಬರೆದುಕೊಂಡಿದ್ದಾರೆ.

ಗರ್ಲ್‌ಫ್ರೆಂಡ್ ಜೊತೆ ಹೃತಿಕ್ ಸೆಲ್ಫಿ
ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಆಜಾದ್ ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಇಬ್ಬರೂ ಸೆಲ್ಫಿ ತೆಗೆದುಕೊಂಡಿದ್ದಾರೆ. ಜೋಡಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಬರ್ತ್‌ಡೇ ಪಾರ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕೆಲವೇ ದಿನಗಳ ಹಿಂದಷ್ಟೇ ಮಧು ಮಾಂಟೇನಾ ಮತ್ತು ಇರಾ ತ್ರಿವೇದಿ ಮದುವೆಯಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.
ಸಿನಿಮಾಗಳಲ್ಲಿ ಫುಲ್ ಬ್ಯುಸಿ
ಹೃತಿಕ್ ರೋಷನ್ ಸದ್ಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಹೃತಿಕ್ ರೋಷನ್ ಜೊತೆ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಸಿನಿಮಾ ಜನವರಿ 26, 2024ಕ್ಕೆ ರಿಲೀಸ್ ಆಗಲಿದೆ. ಅಲ್ಲದೆ 'ವಾರ್ 2' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಆಯನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಹೃತಿಕ್ ಜೊತೆ ಜೂ.ಎನ್‌ಟಿಆರ್ ಹಾಗೂ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಹಾಗೇ ಸಬಾ ಮ್ಯೂಸಿಕ್ ಶೋಗಳನ್ನು ನೀಡುವುದರಲ್ಲಿ ಬ್ಯುಸಿ.


Click it and Unblock the Notifications











