'ಮೊದಲ ಗುರು' ರಜನಿಯ 50 ವರ್ಷಗಳ ಜರ್ನಿಗೆ ಶುಭ ಕೋರಿ, ಗುರುವಿನ ಮುಂದೆ ಬಾಕ್ಸಾಫೀಸ್ 'ವಾರ್‌'ಗಿಳಿದ ಹೃತಿಕ್

ನಾಳೆಯಿಂದ (ಆಗಸ್ಟ್ 13) ಎರಡು ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಾದಾಡಲಿವೆ. ಹೃತಿಕ್ ರೋಷನ್- ಜೂ.ಎನ್‌ಟಿಆರ್ ಕಾಂಬಿನೇಷನ್‌ನ 'ವಾರ್ 2' ಹಾಗೂ ರಜನಿಕಾಂತ್ ಸಿನಿಮಾ 'ಕೂಲಿ'. ಈ ಎರಡೂ ಸಿನಿಮಾಗಳಲ್ಲಿ ಯಾವುದು ಗಲ್ಲಾಪೆಟ್ಟಿಗೆ ದೋಚುತ್ತೆ? ಬಾಕ್ಸಾಫೀಸ್‌ನಲ್ಲಿ ಯಾವ ಸಿನಿಮಾ ದಾಖಲೆ ಬರೆಯುತ್ತೆ? ಅನ್ನೋದು ಕುತೂಹಲವಂತೂ ಇದ್ದೇ ಇದೆ. ಸದ್ಯದ ಪರಿಸ್ಥಿತಿಯಲ್ಲಿ ರಜನಿಕಾಂತ್ 'ಕೂಲಿ' ಸಿನಿಮಾ 'ವಾರ್‌ 2'ಗಿಂತಲೂ ಬಹಳ ಮುಂದಿದೆ.

ಸೂಪರ್‌ಸ್ಟಾರ್ ರಜನಿಕಾಂತ್‌ಗೆ 'ಕೂಲಿ' ಸಿನಿಮಾ ತುಂಬಾನೆ ಸ್ಪೆಷಲ್. ಯಾಕಂದ್ರೆ, ಈ ವರ್ಷ ರಜನಿಕಾಂತ್ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳನ್ನು ಪೂರೈಸಿದೆ. ಹೀಗಾಗಿ ಸೂಪರ್‌ಸ್ಟಾರ್‌ಗೂ ಅವರ ಅಭಿಮಾನಿಗಳಿಗೂ ಡಬಲ್ ಧಮಾಕ ಎಂದೇ ಹೇಳಬಹುದು. ಈ ಖುಷಿಯನ್ನು ಅಭಿಮಾನಿಗಳು ಚಿತ್ರಮಂದಿರದಲ್ಲಿ ಸೆಲೆಬ್ರೆಟ್ ಮಾಡುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಇತ್ತ ಸೆಲೆಬ್ರೆಟಿಗಳು ರಜನಿಗೆ 'ಕೂಲಿ' ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ 50 ವರ್ಷದ ಜರ್ನಿಯ ಶುಭಾಶಯವನ್ನೂ ತಿಳಿಸುತ್ತಿದ್ದಾರೆ.

Hrithik Roshan Congratulates Rajinikanth on 50 Years in Acting ahead of War 2 and Coolie clash

ಈಗ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ತಮ್ಮ ನೆಚ್ಚಿನ ನಟನ 50 ವರ್ಷಗಳ ಜರ್ನಿಗೆ ಶುಭ ಕೋರಿದ್ದಾರೆ. ಬಾಕ್ಸಾಫೀಸ್‌ನಲ್ಲಿ ರಜನಿ ಸಿನಿಮಾ ಜೊತೆ ಕಾಂಪಿಟೇಷನ್‌ಗೆ ಇಳಿದಿದ್ದರೂ, ಅದು ಕೇವಲ ವೃತ್ತಿಪರ ಪೈಪೋಟಿ ಅಷ್ಟೇ ಅನ್ನೋದನ್ನು ಸಾಬೀತು ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ರಜನಿಕಾಂತ್ ಜೊತೆಗಿನ ತಮ್ಮ ಮೊದಲ ನಟನೆಯ ಅನುಭವವನ್ನು ಹಂಚಿಕೊಂಡಿರೋದು ವಿಶೇಷ.

ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ಬೆನ್ನಲ್ಲಿ ನಟ ಹೃತಿಕ್ ರೋಷನ್ ಅಭಿನಂದನೆ ಸಲ್ಲಿಸಿದ್ದಾರೆ. 'ವಾರ್ 2' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹೃತಿಕ್ ತಮ್ಮ ಎಕ್ಸ್ ಖಾತೆಯ ಮೂಲಕ ಶುಭಾಶಯ ಹೇಳಿದ್ದಾರೆ. ರಜನಿಕಾಂತ್ ವೃತ್ತಿ ಬದುಕಿನ ಈ ಮೈಲಿಗಲ್ಲಿಗೆ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಬಾಕ್ಸಾಫೀಸ್‌ನಲ್ಲಿ 'ಕೂಲಿ' ಜೊತೆ ತಮ್ಮ ಸಿನಿಮಾ 'ವಾರ್ 2' ಸೆಣೆಸಾಟಕ್ಕೆ ಇಳಿಯುವುದಕ್ಕೂ ಮುನ್ನ ರಜನಿಕಾಂತ್ ಸಾಧನೆಗೆ ತಲೆದೂಗಿದ್ದಾರೆ.

Hrithik Roshan Congratulates Rajinikanth on 50 Years in Acting ahead of War 2 and Coolie clash

ತಲೈವಾ ರಜನಿಕಾಂತ್‌ರನ್ನು ಬಾಲಿವುಡ್‌ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ತಮ್ಮ 'ಮೊದಲ ಗುರು' ಎಂದು ಬಣ್ಣಿಸಿದ್ದಾರೆ. ಜೊತೆ ಇಬ್ಬರೂ ನಟಿಸಿದ ವಿಶೇಷವಾದ ಒಂದು ಫೋಟೊಗಳು ವೈರಲ್ ಆಗುತ್ತಿವೆ. ರಜನಿಯೊಂದಿಗೆ ನಟನಾ ಪಯಣ ಆರಂಭಿಸಿದ್ದನ್ನು ಹೃತಿಕ್ ಸ್ಮರಿಸಿಕೊಂಡಿದ್ದಾರೆ. "ನಿಮ್ಮ ಪಕ್ಕದಲ್ಲಿಯೇ ನಾನೊಬ್ಬ ನಟನಾಗಿ ನನ್ನ ಮೊದಲ ಹೆಜ್ಜೆ ಇಟ್ಟೆ. ರಜನಿಕಾಂತ್ ಸರ್, ನೀವು ನನ್ನ ಮೊದಲ ಗುರುಗಳಲ್ಲಿ ಒಬ್ಬರಾಗಿದ್ದೀರಿ. ನೀವು ನನಗೆ ನಿರಂತರ ಸ್ಪೂರ್ತಿ. ತೆರೆಮೇಲೆ ನೀವು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ನಿಮಗೆ ಅಭಿನಂದನೆಗಳು" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಹೃತಿಕ್ ರೋಷನ್ 1986ರಲ್ಲಿ ರಜನಿಕಾಂತ್ ಜೊತೆ 'ಭಗವಾನ್ ದಾದಾ' ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ಅದೇ ಸಿನಿಮಾದ ಫೋಟೋವನ್ನು ಹೃತಿಕ್ ರೋಷನ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ತನ್ನ ಗುರುವಿನ ಮುಂದೆ ಬಾಕ್ಸಾಫೀಸ್‌ನಲ್ಲಿ ಯುದ್ಧಕ್ಕೆ ಇಳಿದಿದ್ದಾರೆ. 'ವಾರ್ 2' ಹಾಗೂ 'ಕೂಲಿ' ಸಿನಿಮಾ ಬಿಗ್ ಕ್ಲ್ಯಾಶ್ ಹೊರತಾಗಿಯೂ ಹೃತಿಕ್ ರೋಷನ್ ಸೂಪರ್‌ಸ್ಟಾರ್ ರಜನಿಕಾಂತ್ ಸಂದೇಶ ಕಳುಹಿಸಿದ್ದಕ್ಕೆ ನೆಟ್ಟಿಗರು ಮೆಚ್ಚು ವ್ಯಕ್ತಪಡಿಸಿದ್ದಾರೆ.

'ವಾರ್' ಸೂಪರ್‌ ಸಕ್ಸಸ್ ಬಳಿಕ ಹೃತಿಕ್ ರೋಷನ್ ಮತ್ತೆ ಮೇಜರ್ ಕಬೀರ್ ಪಾತ್ರದಲ್ಲಿ 'ವಾರ್ 2' ಕಾಣಿಸಿಕೊಳ್ಳುತ್ತಿದ್ದಾರೆ. ಯಶ್‌ ರಾಜ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, ಆಯನ್ ಮುಖರ್ಜಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಇಬ್ಬರೂ ಜುಗಲ್‌ಬಂಧಿ ಈ ಸಿನಿಮಾ ಹೈಲೈಟ್ ಆಗಿದ್ದು, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹಾಗೇ ರಜನಿ ನಟಿಸಿದ 'ಕೂಲಿ' ಕೂಡ ಆಗಸ್ಟ್ 14ರಂದೇ ರಿಲೀಸ್ ಆಗುತ್ತಿದ್ದು, ಇಬ್ಬರಲ್ಲಿ ಬಾಕ್ಸಾಫೀಸ್ ಗೆಲ್ಲೋದ್ಯಾರು ಅನ್ನೋದನ್ನು ಸಿನಿಮಾ ಮಂದಿ ಟೆನ್ಷನ್‌ನಲ್ಲಿ ಎದುರು ನೋಡುತ್ತಿದ್ದಾರೆ.

More from Filmibeat

English summary
Hrithik Roshan Congratulates Rajinikanth on 50 Years in Acting ahead of War 2 and Coolie clash.
Read more about: hrithik roshan rajinikanth wish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X