'ಫೈಟರ್' ಸೋಲಿನ ಬಳಿಕ ಯುದ್ಧಕ್ಕಿಳಿದ ಹೃತಿಕ್; 'ವಾರ್ 2' ತಂಡದಿಂದ ಕ್ರೇಜಿ ಅಪ್‌ಡೇಟ್

ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಹಾಗೂ ಟಾಲಿವುಡ್ ಸ್ಟಾರ್ ಹೀರೋ ಜೂ.ಎನ್‌ಟಿಆರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. 'ಫೈಟರ್' ನಿರೀಕ್ಷೆ ಹುಟ್ಟಿಸಿದ್ದರೂ ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಮೋಡಿ ಮಾಡಲಿಲ್ಲ. ಹೀಗಾಗಿ ಈ ಕಾಂಬಿನೇಷನ್ ಸಿನಿಮಾ ಬಗ್ಗೆ ಬಾಲಿವುಡ್‌ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

'ಫೈಟರ್' ಸಿನಿಮಾ ಪ್ರಚಾರದ ವೇಳೆ 'ವಾರ್ 2' ಸಿನಿಮಾವನ್ನು ಕೈಗೆತ್ತಿಗೊಳ್ಳುವುದಾಗಿ ಖುದ್ದು ಹೃತಿಕ್ ರೋಷನ್ ಹೇಳಿಕೊಂಡಿದ್ದರು. ಅದರಂತೆಯೇ ಈಗ ಬಾಲಿವುಡ್‌ನಲ್ಲಿ 'ವಾರ್ 2' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವೊಂದು ಹರಿದಾಡುತ್ತಿದೆ. ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಆಯನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಸಿನಿಮಾ ಶೀಘ್ರದಲ್ಲೇ ಆರಂಭ ಆಗುತ್ತಿದೆ.

Hrithik Roshan movie war 2 update about Jr.ntr shooting entry

ಅಂದ್ಹಾಗೆ 'ವಾರ್ 2' 2019ರಲ್ಲಿ ತೆರೆಕಂಡಿದ್ದ ಬ್ಲಾಕ್ ಬಸ್ಟರ್ ಸಿನಿಮಾ 'ವಾರ್' ಸೀಕ್ವೆಲ್. ಈಗಾಗಲೇ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದೆ. ಉತ್ತರ ಭಾರತದಿಂದ ಹೃತಿಕ್ ರೋಷನ್ ಹಾಗೂ ದಕ್ಷಿಣ ಭಾರತದಿಂದ ಜೂ.ಎನ್‌ಟಿಆರ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದ್ರಿಂದ ಈ ಕ್ರೇಜಿ ಕಾಂಬಿನೇಷನ್‌ ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಥ್ರಿಲ್ ಆಗಿರೋದಂತೂ ನಿಜ. ಅದಕ್ಕೆ ತಕ್ಕಂತೆ ಚಿತ್ರತಂಡದಿಂದ ಕ್ರೇಜಿ ಅಪ್‌ಡೇಟ್ ಒಂದು ಹೊರಬಿದ್ದಿದೆ.

ಫೆಬ್ರವರಿಯಲ್ಲೇ ಶೂಟಿಂಗ್ ಶುರು

'ವಾರ್ 2' ಸಿನಿಮಾ ಬಗ್ಗೆ ಕ್ರೇಜಿ ಅಪ್‌ಡೇಟ್ ಒಂದು ಸಿಕ್ಕಿದೆ. ಇದೇ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ. ಸಿಕ್ಕಿರೋ ಮಾಹಿತಿ ಪ್ರಕಾರ, ಫೆಬ್ರವರಿ 23ರಿಂದ 'ವಾರ್ 2' ಶೂಟಿಂಗ್ ಆರಂಭ ಆಗಲಿದೆ. ಮೊದಲು ಹೃತಿಕ್ ರೋಷನ್‌ಗೆ ಸಂಬಂಧಿಸಿದ ಸೀನ್‌ಗಳ ಚಿತ್ರೀಕರಣ ನಡೆಯಲಿದೆ. ಆ ಬಳಿಕ ಏಪ್ರಿಲ್ ತಿಂಗಳಲ್ಲಿ ಜೂ.ಎನ್‌ಟಿಆರ್ 'ವಾರ್ 2' ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜೂ.ಎನ್‌ಟಿಆರ್ ಸದ್ಯಕ್ಕೀಗ 'ದೇವರ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಮೊದಲು ಕೊರಟಾಲ ಶಿವ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿ, ಬಳಿಕ 'ವಾರ್ 2' ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಪ್ರಿಲ್ ವೇಳೆ 'ದೇವರ' ಸಿನಿಮಾ ಶೂಟಿಂಗ್ ಮುಗಿಸುವಂತೆ ಕೊರಟಾಲ ಶಿವಗೆ ಹೇಳಿದ್ದಾರೆಂದು ಸುದ್ದಿ ಹರಿದಾಡುತ್ತಿದೆ.

Hrithik Roshan movie war 2 update about Jr.ntr shooting entry

ಮೊದಲ ಹೃತಿಕ್ ದೃಶ್ಯಗಳ ಚಿತ್ರೀಕರಣ

'ಬ್ರಹ್ಮಾಸ್ತ್ರ' ಸಿನಿಮಾ ಬಳಿಕ ಆಯನ್ ಮುಖರ್ಜಿ ಆಕ್ಷನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್‌ಗೆ ಬೇಕಿರೋ ಎಲ್ಲಾ ಸಿದ್ಧತೆಗಳು ನಡೆದಿವೆ. ಹೀಗಾಗಿ ಹೃತಿಕ್ ರೋಷನ್ ನಿರ್ದೇಶಕ ಸಮಯ ವ್ಯರ್ಥ ಮಾಡದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ತಮ್ಮ ಭಾಗದ ದೃಶ್ಯಗಳನ್ನು ಚಿತ್ರೀಕರಣ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಫೆಬ್ರವರಿ 23ರಿಂದ 'ವಾರ್ 2' ಚಿತ್ರೀಕರಣ ಅಧಿಕೃತವಾಗಿ ಆರಂಭ ಆಗುತ್ತಿದೆ.

'ವಾರ್ 2' ಸಿನಿಮಾದಲ್ಲಿ ಹೃತಿಕ್ ರೋಷನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಜೂ.ಎನ್‌ಟಿಆರ್ ವಿಲನ್ ಲುಕ್ ಕೊಡಲಿದ್ದಾರೆ. ಇವರಿಬ್ಬರ ಕಾದಾಟವನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಹಾಗೇ ಜಾನ್ ಅಬ್ರಾಹಂ ಹಾಗೂ ಕಿಯಾರಾ ಅಡ್ವಾಣಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಯಶ್‌ ರಾಜ್‌ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮೆಗಾ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ 2025ರ ಸ್ವಾತಂತ್ರ್ಯ ದಿನೋತ್ಸವದಂದು ರಿಲೀಸ್ ಆಗುತ್ತಿದೆ.

More from Filmibeat

English summary
Hrithik Roshan movie War 2 Jr NTR entry Update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X