Ramayana:ಯಶ್-ರಾವಣ, ರಣ್‌ಬೀರ್-ಶ್ರೀರಾಮ, ಸಾಯಿ ಪಲ್ಲವಿ-ಸೀತೆ; ಹೃತಿಕ್ ರೋಷನ್-ಶಿವ?

ಪೌರಾಣಿಕ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ರೆಗ್ಯೂಲರ್ ಸಿನಿಮಾಗಿಂತ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತೆ. ಒಂದೊಂದು ಪಾತ್ರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗುತ್ತೆ. ಇಲ್ಲದೇ ಹೋದಲ್ಲಿ 'ಆದಿಪುರುಷ್' ಸಿನಿಮಾದಂತೆ ಟೀಕೆಗೆ ಗುರಿಯಾಗಬೇಕಾಗುತ್ತೆ. ಅದಕ್ಕಂತಲೇ ಇಂತಹ ಪೌರಾಣಿಕ ಸಿನಿಮಾಗೆ ಕೈ ಹಾಕುವುದಕ್ಕೆ ನಿರ್ದೇಶಕರು ಹಿಂದೇಟು ಹಾಕುತ್ತಾರೆ.

'ರಾಮಾಯಣ'ದಂತಹ ಮಹಾಕಾವ್ಯಕ್ಕೆ ಸಿನಿಮಾ ರೂಪ ಕೊಡುವುದಕ್ಕೆ ಅಷ್ಟು ಸುಲಭ ಅಲ್ಲ. ಅದಕ್ಕೆ ಸರಿಯಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಾಲಿವುಡ್‌ನಲ್ಲಿ ಶುರುವಾಗಿರುವ 'ರಾಮಾಯಣ' ಸಿನಿಮಾಗೂ ಪಾತ್ರ ಆಯ್ಕೆಯೇ ದೊಡ್ಡ ಸವಾಲಾಗಿತ್ತು. ಸದ್ಯ ಸಿನಿಮಾ ಚಿತ್ರೀಕರಣ ಆರಂಭ ಆಗಿದ್ದರೂ, ನಿರ್ದೇಶಕ ನಿತೇಶ್ ತಿವಾರಿ ಇನ್ನೂ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನೋ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

Hrithik Roshan to play Lord shiva in Yash Ranbir Sai Pallavi starrer Ramayan Movie

ಆದರೂ, ಈಗಾಗಲೇ ಪ್ರಮುಖ ಪಾತ್ರಗಳಲ್ಲಿ ನಟಿಸುವ ನಟರ ಮೇಲೆ ಚರ್ಚೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆಂಬ ಸುದ್ದಿಯಂತೂ ಇದೆ. ಇವರೊಂದಿಗೆ ಮತ್ತೊಬ್ಬ ಬಾಲಿವುಡ್ ನಟನ ಹೆಸರು ಸೇರ್ಪಡೆಯಾಗಿದೆ. ಅವರೇ ಹೃತಿಕ್ ರೋಷನ್.

'ರಾಮಾಯಣ'ದಲ್ಲಿ ಹೃತಿಕ್ ರೋಷನ್ ಶಿವ

'ರಾಮಾಯಣ' ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ನಟಿಸುತ್ತಿದ್ದಾರೆ ಅನ್ನೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಂದ್ಹಾಗೆ, ಹೃತಿಕ್ ರೋಷನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿದೆ.

Hrithik Roshan to play Lord shiva in Yash Ranbir Sai Pallavi starrer Ramayan Movie

ರಾಮಾಯಣದಲ್ಲಿ ಶಿವ ಅವತಾರದಲ್ಲಿ ಹೃತಿಕ್ ರೋಷನ್‌ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದಾಗುತ್ತಿದೆ. ಶಿವನ ಪಾತ್ರಕ್ಕೆ ಹೃತಿಕ್ ರೋಷನ್ ಸೂಕ್ತ ನಟ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಇನ್ನೂ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.

ಈ ಹಿಂದೆನೂ ಇತ್ತು ಆಫರ್

ಹೃತಿಕ್ ರೋಷನ್‌ಗೆ 'ರಾಮಾಯಣ' ಸಿನಿಮಾಗೆ ಆಫರ್ ಬರುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹೃತಿಕ್ ರೋಷನ್‌ಗೆ ಶ್ರೀರಾಮನಾಗಿ ನಟಿಸುವಂತೆ ಆಫರ್ ನೀಡಲಾಗಿತ್ತು. ಅದು ಮತ್ಯಾರೂ ಅಲ್ಲ ಹೃತಿಕ್ ಮಾಜಿ ಪತ್ನಿಯ ತಂದೆ ಸಂಜಯ್ ಖಾನ್. ಕೆಲವು ವರ್ಷಗಳ ಹಿಂದೆ 'ದಿ ಲೆಜೆಂಡ್ ಆಫ್ ರಾಮ' ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಅದರಲ್ಲಿ ಶ್ರೀರಾಮನಾಗಿ ನಟಿಸುವಂತೆ ಹೃತಿಕ್ ರೋಷನ್‌ಗೆ ಆಫರ್ ಕೊಟ್ಟಿದ್ದರು. ಆದರೆ, ಹೃತಿಕ್ ರೋಷನ್ ಆಫರ್ ಅನ್ನು ತಿರಸ್ಕರಿಸಿದ್ದರು.

ಸಂಜಯ್ ಖಾನ್ ಈ ಸಿನಿಮಾವನ್ನು 'ಗೇಮ್ ಆಫ್ ಥ್ರೋನ್ಸ್ ' ಶೈಲಿಯಲ್ಲಿ ಮಾಡರ್ನ್ 'ರಾಮಾಯಣ' ತೋರಿಸುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಈಗ 'ರಾಮಾಯಣ' ಸಿನಿಮಾ ನಿರ್ದೇಶಿಸುತ್ತಿರುವ ನಿತೇಶ್ ತಿವಾರಿ ಕಳೆದ ವರ್ಷವಷ್ಟೇ ಹೃತಿಕ್‌ಗೆ ರಾವಣ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರಂತೆ. ಆದರೆ, ಹೃತಿಕ್ ರೋಷನ್ ತಿರಸ್ಕರಿಸಿದ್ದರು ಎಂಬ ಸುದ್ದಿಯಿದೆ. ಸದ್ಯಕ್ಕೀಗ ಹೃತಿಕ್ ರೋಷನ್ ಲಾರ್ಡ್ ಶಿವನಾಗಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿದೆ.

More from Filmibeat

English summary
Rumour is that Hrithik Roshan to Play Lord Shiva in the movie Ramayan:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X