Hurun India Rich List 2024: ಶಾರುಖ್ ಆಸ್ತಿ ₹7300 ಕೋಟಿ; ಟಾಪ್ 5 ಶ್ರೀಮಂತ ಸ್ಟಾರ್‌ಗಳ್ಯಾರು?

2024ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ ರಿಲೀಸ್ ಆಗಿದೆ. ಈ ಪಟ್ಟಿಯಲ್ಲಿ ಭಾರತದ ಅತೀ ಶ್ರೀಮಂತರ ಹೆಸರನ್ನು ಪಟ್ಟಿ ಮಾಡಲಾಗಿದೆ. ಒಂದ್ಕಡೆ ಭಾರತದ ಶ್ರೀಮಂತ ಉದ್ಯಮಿಗಳ ನಡುವೆ ಪೈಪೋಟಿ ಬೆಳೆದಿದ್ದು, ಮುಕೇಶ್ ಅಂಬಾನಿಯನ್ನು ಗೌತಮ್ ಅದಾಮಿ ಹಿಂದಿಕ್ಕಿದ್ದಾರೆಂದು ಹೇಳಿದೆ. ಈ ಮೂಲಕ ಗೌತಮ್ ಅದಾನಿ ಹಾಗೂ ಫ್ಯಾಮಿಲಿ ಭಾರತದ ಅತೀ ಶ್ರೀಮಂತರೆನಿಸಿಕೊಂಡಿದ್ದಾರೆ.

ಇನ್ನು ಉದ್ಯಮಿಗಳ ಹೊರತಾಗಿ ಸಿನಿಮಾ ಮಂದಿ ಕೂಡ ಹುರುನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಆಸ್ತಿಯ ವಿವರವನ್ನು ಹುರುನ್ ಇಂಡಿಯಾ ಸಂಸ್ಥೆ ರಿವೀಲ್ ಮಾಡಿದೆ. ಈ ಮೂಲಕ ಭಾರತದ ಶ್ರೀಮಂತ ನಟನಾಗಿ ಹೊರಹೊಮ್ಮಿದ್ದಾರೆ.

Hurun India Rich List 2024 Shah Rukh Khan enters here is the top 5 stars in the list

ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024ರಲ್ಲಿ ಸಿನಿಮಾ ಕ್ಷೇತ್ರದಿಂದ ಟಾಪ್ ಸ್ಥಾನದಲ್ಲಿರುವ ಐದು ಮಂದಿಯ ಆಸ್ತಿಯ ವಿವರ ಹೊರ ಬಿದ್ದಿದೆ. ಇದರಲ್ಲಿ ಶಾರುಖ್ ಖಾನ್ ಮೊದಲಿಗರು. ಇವರ ಆಸ್ತಿ ಬರೋಬ್ಬರಿ ₹7,300 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಹಾಗಿದ್ದರೆ, ಶಾರುಖ್ ಖಾನ್‌ಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಅನ್ನೋದನ್ನು ಹೇಳಲಾಗಿದೆ.

58 ವರ್ಷದ ನಟ ಶಾರುಖ್ ಖಾನ್ ಇಂದಿಗೂ ಬ್ಯುಸಿಯಾಗಿರುವ ನಟ. ಸಿನಿಮಾ ಅಷ್ಟೇ ಅಲ್ಲದೆ, ಅದರ ಹೊರತಾಗಿಯೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ. ಶಾರುಖ್ ಖಾನ್‌ಗೆ ನಟನೆ ಬಿಟ್ಟು ಬೇರೆ ಬೇರೆ ಆದಾಯ ಮೂಲಗಳಿವೆ. ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್‌ನಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಹಾಗೇ ಐಪಿಎಲ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರು ಕೂಡ ಹೌದು. ಇದೇ ತಂಡ 2024ರ ಎಪಿಎಲ್ ಕಿರೀಟವನ್ನು ಗೆದ್ದಿದೆ.

Hurun India Rich List 2024 Shah Rukh Khan enters here is the top 5 stars in the list

ಶಾರುಖ್ ಖಾನ್ ಆತ್ಮೀಯ ಗೆಳತಿ ಹಾಗೂ ಬಾಲಿವುಡ್‌ ನಟಿ ಜೂಹಿ ಚಾವ್ಲಾ ಆಸ್ತಿ ₹4,600 ಕೋಟಿ ಎಂದು ಹುರುನ್ ಇಂಡಿಯಾ ಹೇಳಿದೆ. ಸಿನಿಮಾ ಅಷ್ಟೇ ಅಲ್ಲದೆ, ಉದ್ಯಮದಲ್ಲಿಯೂ ಈ ನಟಿ ತೊಡಗಿಸಿಕೊಂಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡದ ಮಾಲೀಕತ್ವದಲ್ಲಿ ಪಾರ್ಟ್ನರ್ ಕೂಡ ಆಗಿದ್ದಾರೆ. ಹೀಗಾಗಿ ನಟನೆ ಜೊತೆ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ನಟಿ ಆಸ್ತಿ ಮೌಲ್ಯ ಹೆಚ್ಚಾಗುತ್ತಲೇ ಇದೆ.

ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಆಸ್ತಿಯಲ್ಲೂ ಏರಿಕೆಯಾಗಿದೆ. ಬಾಲಿವುಡ್‌ನ ಈ ನಟನ ಆಸ್ತಿ ಬರೋಬ್ಬರಿ ₹2,000 ಕೋಟಿ ಎಂದು ಹುರುನ್ ಇಂಡಿಯಾ ಹೇಳಿದೆ. ಹೃತಿಕ್ ರೋಷನ್ ಸಿನಿಮಾ ಜೊತೆಗೆ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಎಚ್‌ಆರ್‌ಎಕ್ಸ್ (HRX) ಮೂಲಕವೂ ಸಂಪಾದನೆ ಮಾಡುತ್ತಿದ್ದಾರೆ.

ಬಾಲಿವುಡ್‌ನ ಲೆಜೆಂಡರಿ ಆಕ್ಟರ್ ಅಮಿತಾಭ್ ಬಚ್ಚನ್ ಕುಟುಂಬ ಒಟ್ಟು ಆಸ್ತಿ 2024ರಲ್ಲಿ ₹1,600 ಕೋಟಿ ದಾಟಿದೆ. ಅಮಿತಾಭ್ ಬಚ್ಚನ್ ಆಸ್ತಿ ಹೂಡಿಕೆಯಿಂದ ಹೆಚ್ಚಾಗಿದೆ ಎಂದು ಹುರುನ್ ಇಂಡಿಯಾ ಹೇಳಿದೆ. ಇವರೊಂದಿಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಐದನೇ ಸ್ಥಾನದಲ್ಲಿದ್ದು, ₹1,400 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

More from Filmibeat

English summary
Hurun India Rich List 2024: Shah Rukh Khan estimated wealth is ₹7,300crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X