Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇವಲ ಹಣಕ್ಕಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದೆ: ಅನಿಲ್ ಕಪೂರ್
ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಸಾಕಷ್ಟು ನೆನಪುಳಿಯುವ ಸಿನಿಮಾದಲ್ಲಿ ನಟಿಸಿದ್ದಾರೆ. ಆಸ್ಕರ್ ವಿಜೇತ 'ಸ್ಲಂ ಡಾಗ್ ಮಿಲೇನಿಯರ್' ಸಿನಿಮಾದಲ್ಲಿನ ಅವರ ಪಾತ್ರ, ರಾಮ್-ಲಖನ್, ಮಿಸ್ಟರ್ ಇಂಡಿಯಾ ಹೀಗೆ ಹಲವು ಸಿನಿಮಾಗಳು ಇಂದಿಗೂ ಸಿನಿ ಅಭಿಮಾನಿಗಳು ಮರೆಯುವಂತಿಲ್ಲ.
ನಟನೊಬ್ಬನಿಗೆ ತಾನು, ಬಹುಕಾಲ ನೆನಪುಳಿಯುವ ಇತಿಹಾಸ ಸೃಷ್ಟಿಸುವ ಪಾತ್ರಗಳಲ್ಲಿ ನಟಿಸಬೇಕೆಂಬ ತುಡಿತ ಸಾಕಷ್ಟಿರುತ್ತದೆ. ಅನಿಲ್ ಕಪೂರ್ ಸಹ ಇದಕ್ಕೆ ಹೊರತಲ್ಲ. ಆದರೆ ತಮ್ಮ ಇಷ್ಟು ವರ್ಷ ಸುಧೀರ್ಘ ಸಿನಿಪಯಣದಲ್ಲಿ ಹಲವು ಸಿನಿಮಾಗಳನ್ನು ಕೇವಲ ಹಣಕ್ಕಾಗಿ ಒಪ್ಪಿಕೊಂಡಿದ್ದಾಗಿ ಅನಿಲ್ ಕಪೂರ್ ಹೇಳಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅನಿಲ್ ಕಪೂರ್, 'ನನ್ನ ಕುಟುಂಬ ಕಷ್ಟದಲ್ಲಿದ್ದಾಗ ಕೆಲವು ಸಿನಿಮಾಗಳನ್ನು ಕೇವಲ ಹಣಕ್ಕಾಗಿ ಒಪ್ಪಿಕೊಂಡು ನಟಿಸಿದೆ. ಆದರೆ ಆ ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ಬೇಸರವೇನು ಇಲ್ಲ, ಏಕೆಂದರೆ ಆ ಸಮಯದಲ್ಲಿ ನನ್ನ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಬೇಕಿತ್ತು. ಹಾಗಾಗಿಯೇ ಆ ಸಿನಿಮಾಗಳಲ್ಲಿ ನಾನು ನಟಿಸಿದೆ. ಅದರ ಬಗ್ಗೆ ಚಿಂತೆಗಿಂತಲೂ ಹೆಚ್ಚಾಗಿ ಸಂತೋಶವೇ ಇದೆ' ಎಂದಿದ್ದಾರೆ.
'ಅಂದಾಜ್, ಹೀರ್ ರಾಂಜಾ ಇನ್ನೂ ಕೆಲವು ಸಿನಿಮಾಗಳನ್ನು ಇಷ್ಟವಿಲ್ಲದಿದ್ದರೂ ಹಣಕ್ಕಾಗಿ ನಾನು ಮಾಡಿದೆ. 'ರೂಪ್ ಕಿ ರಾಣಿ, ಚೋರೋಂಕಾ ರಾಜಾ' ಸಿನಿಮಾದ ಬಳಿಕ ನಮ್ಮ ಕುಟುಂಬ ಬಹಳ ಕಷ್ಟದಲ್ಲಿ ಸಿಲುಕಿತ್ತು. ಕುಟುಂಬ ಸದಸ್ಯನಾಗಿ ನಾನು ನನ್ನ ಜವಾಬ್ದಾರಿ ನಿಭಾಯಿಸಬೇಕಿತ್ತು. ಹಾಗಾಗಿ ಹಣಕ್ಕಾಗಿ ಸಿನಿಮಾದಲ್ಲಿ ನಟಿಸುವುದು ನನಗೆ ಅವಶ್ಯಕವಾಗಿತ್ತು' ಎಂದಿದ್ದಾರೆ ನಟ ಅನಿಲ್ ಕಪೂರ್.
'ನಾನು ಮತ್ತು ನನ್ನ ಕುಟುಂಬ ಅದೃಷ್ಟವಶಾತ್ ಹೆಚ್ಚು ಕಾಲ ಸಂಕಷ್ಟದಲ್ಲಿ ಇರಲಿಲ್ಲ. ಕೆಲವು ಒಳ್ಳೆಯ ನಿರ್ಧಾರಗಳು ನಮ್ಮನ್ನು ಸಂಕಷ್ಟದಿಂದ ಹೊರಗೆ ಹಾಕಿದವು. ಆದರೆ ಕಷ್ಟದ ಪರಿಸ್ಥಿತಿ ಬಂದಾಗ ನಾನು ನನ್ನ ಕುಟುಂಬಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಿರುತ್ತೇನೆ' ಎಂದಿದ್ದಾರೆ ಅನಿಲ್ ಕಪೂರ್.
ಅನಿಲ್ ಕಪೂರ್ ಇತ್ತೀಚೆಗಷ್ಟೆ ಎಕೆ vs ಎಕೆ ಸಿನಿಮಾದಲ್ಲಿ ನಟಿಸಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದೀಗ ಜುಗ್ ಜುಗ್ ಜಿಯೊ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.