'ನಾನು ಶರಣಾದೆ': ಇರ್ಫಾನ್ ಖಾನ್ ಕುರಿತಾದ ಭಾವುಕ ಪತ್ರ
ನಟ ಇರ್ಫಾನ್ ಖಾನ್ ನಿಧನ ಚಿತ್ರರಂಗದಲ್ಲಿ ಶೋಕದ ಛಾಯೆ ಮೂಡಿಸಿದೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದು ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ ಖುಷಿಯನ್ನು ತಿಂಗಳ ಹಿಂದಷ್ಟೇ ಹಂಚಿಕೊಂಡಿದ್ದ ಅವರು, ಈಗಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆ.
Recommended Video
ಇರ್ಫಾನ್ ಖಾನ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆಯೇ ಹರಡಿತ್ತು. ಅದನ್ನು ಇರ್ಫಾನ್ ಖಾನ್ ಅವರ ತಂಡ ಸುಳ್ಳು ವದಂತಿ ಎಂದು ನಿರಾಕರಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಇರ್ಫಾನ್ ಅವರ ತಂಡವೇ ಅವರ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿತು.
ಭಾವುಕ ಸಾಲುಗಳನ್ನು ಒಳಗೊಂಡ ಪತ್ರದಲ್ಲಿ ಇರ್ಫಾನ್ ಅವರ ಅಗಲುವಿಕೆಯ ಕಹಿ ಸತ್ಯವನ್ನು ಹಂಚಿಕೊಳ್ಳಲಾಗಿದೆ. ಇರ್ಫಾನ್ ಖಾನ್ ವಕ್ತಾರರು ನೀಡಿದ ಆ ಹೇಳಿಕೆಯಲ್ಲಿ ಏನಿದೆ? ಮುಂದೆ ಓದಿ...

ಕಣ್ಣುಗಳಿಂದ ಮಾತನಾಡುವವರು
'ನಾನು ನಂಬಿದೆ, ನಾನು ಶರಣಾದೆ' - ಕ್ಯಾನ್ಸರ್ ಜತೆಗಿನ ತಮ್ಮ ಹೋರಾಟದ ಕುರಿತು 2018ರಲ್ಲಿ ಮುಕ್ತವಾಗಿ ಹೇಳಿದ ಹೃದಯಸ್ಪರ್ಶಿ ಪತ್ರದಲ್ಲಿ ಇರ್ಫಾನ್ ಹೇಳಿದ ಅನೇಕ ಪದಗಳಲ್ಲಿ ಒಂದು. ಕೆಲವೇ ಪದಗಳಲ್ಲಿ ಮಾತನಾಡುವ ಮತ್ತು ತಮ್ಮ ಆಳವಾದ ಕಣ್ಣುಗಳ ಮೂಲಕ ಮೌನವಾಗಿ ಭಾವನೆ ಹೊರಹಾಕುವ ಹಾಗೂ ಪರದೆಯ ಮೇಲೆ ಸ್ಮರಣೀಯ ನಟನೆಯನ್ನು ನೀಡುವ ನಟ.

ಶಕ್ತಿಶಾಲಿ ಚೇತನ
ಅವರು ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ತಿಳಿಸುವುದಕ್ಕೆ ಈ ದಿನ ದುಃಖಿಸುತ್ತೇವೆ. ಇರ್ಫಾನ್ ಒಬ್ಬ ಶಕ್ತಿಶಾಲಿ ಚೇತನವಾಗಿದ್ದರು. ಕೊನೆಯವರೆಗೂ ಹೋರಾಡಿದವರು, ತಮಗೆ ಹತ್ತಿರವಾದ ಪ್ರತಿಯೊಬ್ಬರಿಗೂ ಯಾವಾಗಲೂ ಸ್ಫೂರ್ತಿಯಾಗುತ್ತಿದ್ದವರು.

ಸ್ವರ್ಗದತ್ತ ಪ್ರಯಾಣಿಸಿದ್ದಾರೆ
ಅಪರೂಪದ ಕ್ಯಾನ್ಸರ್ ಕುರಿತಾದ ಸುದ್ದಿ 2018ರಂದು ಮಿಂಚಿನಂತೆ ಹರಡಿತು. ಅದು ಬಂದ ಬಳಿಕ ಅವರು ಸಾಕಷ್ಟು ಹೋರಾಟಗಳನ್ನು ನಡೆಸಿದ ಬಳಿಕ ತಮ್ಮ ಬದುಕಿನಿಂದ ನಿರ್ಗಮಿಸಿದ್ದಾರೆ. ತಮ್ಮ ಪ್ರೀತಿ, ಅವರು ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದ ಕುಟುಂಬದಿಂದ ಸುತ್ತವರಿದಿದ್ದ ಅವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿ ಒಂಟಿಯಾಗಿ ಸ್ವರ್ಗದತ್ತ ಪಯಣಿಸಿದ್ದಾರೆ.

ಜೀವನದ ಸವಿ
ಅವರ ಶಾಂತಿಯಿಂದ ಇರುತ್ತಾರೆ ಎಂಬ ಭರವಸೆಯೊಂದಿಗೆ ಪ್ರಾರ್ಥಿಸುತ್ತೇವೆ. ಅವರ ಮಾತುಗಳಲ್ಲಿನ ಅಚ್ಚುಮೆಚ್ಚಿನ ಪದಗಳನ್ನು ನೆನಪಿಸಿಕೊಳ್ಳೋಣ, 'ನಾನು ಮೊದಲ ಬಾರಿಗೆ ಜೀವನದ ಸವಿಯನ್ನು ಅದರ ಮ್ಯಾಜಿಕಲ್ ಭಾಗವನ್ನು ಅನುಭವಿಸುತ್ತಿರುವಂತಿದೆ' ಎಂದು ಇರ್ಫಾನ್ ಖಾನ್ ಅವರ ಸಾವಿನ ಕುರಿತು ಬಿಡುಗಡೆ ಮಾಡಲಾದ ಕೊನೆಯ ಅಧಿಕೃತ ಹೇಳಿಕೆ ತಿಳಿಸಿದೆ.


Click it and Unblock the Notifications











