For Quick Alerts
  ALLOW NOTIFICATIONS  
  For Daily Alerts

  ಸೈಲೆಂಟ್ ಆಗಿ ಸೈಡಿಗೆ ಹೋಗಿದ್ದ ಇಲಿಯಾನಾ ಲವ್ಲಿಯಾಗಿ ಗೋವಾದಲ್ಲಿ ಪ್ರತ್ಯಕ್ಷ!

  |

  ಒಂದು ಕಾಲದಲ್ಲಿ ಇದ್ದರೆ ಇಲಿಯಾನಾ ಹಾಗೆ ಇರಬೇಕು ಅಂತ ಹುಡುಗರು ಕನಸು ಕಾಣುತ್ತಿದ್ದರು. ದಕ್ಷಿಣ ಭಾರತದಲ್ಲಿ ಇಲಿಯಾನಾ ಡಿ ಕ್ರೂಸ್ ಆ ಮಟ್ಟಿಗೆ ಫೇಮಸ್ ಆಗಿದ್ದ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು. ಒಂದರ ಹಿಂದೊಂದು ಸಕ್ಸಸ್. ಬಿಡುವಿಲ್ಲದ ದುಡಿದ ಅದೆಷ್ಟೇ ದಿನಗಳಿದ್ದವು.

  ಆದರೆ, ಕೆಲವು ದಿನಗಳಿಂದ ಇಲಿಯಾನಾ ಸುದ್ದಿಯಲ್ಲಿ ಇರಲಿಲ್ಲ. ಆದ್ರೀಗ ಇದ್ದಕ್ಕಿದ್ದಂತೆ ಅವರೇ ನಟಿಸಿದ ಒಂದು ಸಿನಿಮಾದಿಂದ ಟಾಲಿವುಡ್ ಮೀಡಿಯಾಗಳಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಅದುವೇ 'ತೇರ ಕ್ಯಾ ಹೋಗಾ ಲವ್ಲಿ'.

  ಅಂದ್ಹಾಗೆ, ಈ ಸಿನಿಮಾ 2020ರಲ್ಲಿಯೇ ಅನೌನ್ಸ್ ಆಗಿತ್ತು. ಆದರೆ, ಎರಡು ವರ್ಷಗಳಿಂದ ಸಿನಿಮಾ ಸುದ್ದಿಯಲ್ಲೇ ಇರಲಿಲ್ಲ. ಈಗ ಇದೇ ಸಿನಿಮಾ ಗೋವಾದ ಅಂತರಾಷ್ಟ್ರೀಯ ಫಿಲ್ಮ್‌ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಮತ್ತೆ ಸಿಲ್ವರ್‌ ಸ್ಕ್ರೀನ್‌ನಲ್ಲಿ ಇಲಿಯಾನಾ ನೋಡಿ ಕಣ್ತುಂಬಿ ಕೊಂಡಿದ್ದಾರೆ.

  ಇಲಿಯಾನಾ ಬಿಕಿನಿ ತೊಟ್ಟು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಹುತೇಕ ಗ್ಲಾಮರ್ ರೋಲ್‌ನಲ್ಲಿಯೇ ಹೆಚ್ಚಾಗಿ ನಟಿಸಿರೋ ನಟಿ 'ತೇರ ಕ್ಯಾ ಹೋಗಾ ಲವ್ಲಿ' ಡಿಗ್ಲಾಮರ್ ಲುಕ್ ಕೊಟ್ಟಿದ್ದಾರೆ. ಭಾರತದಲ್ಲಿ ವ್ಯಕ್ತಿಯ ಚರ್ಮದ ಬಣ್ಣದ ಮೇಲಿರುವ ವ್ಯಾಮೋಹವನ್ನು ಈ ಸಿನಿಮಾದ ಮೂಲಕ ತೋರಿಸಲಾಗಿದೆ. ಅಂದ್ಹಾಗೆ ಇಲಿಯಾನ ಈ ಸಿನಿಮಾದಲ್ಲಿ ಹರಿಯಾಣದ ಹುಡುಗಿಯಾಗಿ ನಟಿಸಿದ್ದು, ಈಕೆ ಹೆಸರು ಲವ್ಲಿ.

  ಲವ್ಲಿ ಅನ್ನೋ ಹೆಸರಿಗೂ ಈ ಸಿನಿಮಾಗೂ ಹಾಗೂ ಇಲಿಯಾನಾಗೂ ಬಿಡಿಸಲಾರದ ನಂಟಿದೆ. ಇಲಿಯಾನಾ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಈ ವೇಳೆ 'ಫೇರ್ & ಲವ್ಲಿ' ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಈಗ ಮತ್ತೆ ಅವರ ಸಿನಿಮಾ ಹೆಸರಿನಲ್ಲಿ ಲವ್ಲಿ ಅನ್ನೋ ಹೆಸರು ತಳುಕು ಹಾಕಿಕೊಂಡಿದೆ.

  Ileana DCruz New Movie Tera Kya Hoga Lovely Premiered At IFFI Goa

  'ತೇರ ಕ್ಯಾ ಹೋಗಾ ಲವ್ಲಿ' ಸಿನಿಮಾದಲ್ಲಿ ಇಲಿಯಾನಾ ಜೊತೆ ಬಾಲಿವುಡ್‌ ನಟ ರಣ್‌ದೀಪ್ ಹೂಡಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಸಿನಿಮಾವನ್ನುಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಿನಿಮಾವನ್ನು ಥಿಯೇಟರ್‌ಗೆ ರಿಲೀಸ್ ಮಾಡಬೇಕಾ? ಅಥವಾ ನೇರವಾಗಿ ಓಟಿಟಿಗೆ ರಿಲೀಸ್ ಮಾಡಬೇಕಾ ಅನ್ನೋ ನಿರ್ಧಾರ ಮಾಡಲಿದ್ದಾರೆ.

  ಎಲ್ಲೇ ತೆರೆಕಂಡರೂ ಇಲಿಯಾನಾ ಡಿ ಕ್ರೂಸ್ ಈ ಸಿನಿಮಾ ಮೂಲಕ ಮತ್ತೆ ಗೆದ್ದರೆ. ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದು ಪಕ್ಕಾ. ಅಲ್ಲದೆ ಕಂಟೆಂಟ್ ಬೇಸ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.

  English summary
  Ileana D'Cruz New Movie Tera Kya Hoga Lovely Premiered At IFFI Goa, Know More.
  Saturday, November 26, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X