ಮೊದಲ ಬಾರಿಗೆ ಬೇಬಿ ಬಂಪ್ ವಿಡಿಯೋ ಶೇರ್: "ಇತ್ತೀಚೆಗಿನ ಜೀವನ" ಎಂದ ಇಲಿಯಾನಾ!
ಗೋವಾ ಬ್ಯೂಟಿ ಇಲಿಯಾನಾ ಡಿಕ್ರೂಸ್ ಬೋಲ್ಡ್ ಅಂಡ್ ಬ್ಯೂಟಿಫುಲ್. ತನಗೆ ಹೇಗೆ ಬೇಕೋ ಹಾಗೆ ಬಿಂದಾಸ್ ಆಗಿ ಇರೋಕೆ ಇಷ್ಟ ಪಡುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಯಾವುದೇ ಅಂಜಿಕೆ ಇಲ್ಲದೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಾರೆ.
ಯಾವ ಕಮೆಂಟ್‌ಗಳಿಗೂ ಇಲಿಯಾನಾ ತಲೆ ಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಕತ್ರಿಕಾ ಕೈಫ್ ಹಾಗೂ ಅವರ ಗ್ಯಾಂಗ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅವರೊಂದಿಗೆ ಮಾಲ್ಡೀವ್ಸ್ ಟ್ರಿಪ್ ಮಾಡಿದ್ದರು. ಆ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದರು.

ಇದೇ ಇನ್‌ಸ್ಟಾಗ್ರಾಂನಲ್ಲಿ ಕೆಲವು ದಿನಗಳ ಹಿಂದಷ್ಟೇ ತಾಯಿಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಈ ಮೂಲಕ ದಿಢೀರನೇ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈಗ ಒಂದು ವಾರಗಳ ಬಳಿಕ ಬೇಬಿ ಬಂಪ್ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇಲಿಯಾನಾ ಬೇಬಿ ಬಂಪ್ ವಿಡಿಯೋ
ಇಲಿಯಾನಾ ತಾನು ಗರ್ಭಿಣಿ ಅನ್ನೋದನ್ನು ಸಾಂಕೇತಿಕವಾಗಿ ಬಹಿರಂಗ ಪಡಿಸಿದ್ದರು. ಆ ವೇಳೆ ಇದು ನಿಜವೋ? ಅಥವಾ ಹೊಸ ಸಿನಿಮಾದ ಪ್ರಚಾರವೋ? ಅನ್ನೋ ಗೊಂದಲದಲ್ಲಿ ಇದ್ದರು. ಅಷ್ಟೆಲ್ಲ ಚರ್ಚೆಯಾಗುತ್ತಿದ್ದರೂ ಇಲಿಯಾನಾ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ.

ಹೆಚ್ಚು ಕಡಿಮೆ ಒಂದು ವಾರಗಳ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ತಾನು ಗರ್ಭಿಣಿ ಅನ್ನೋದನ್ನು ಮತ್ತೊಮ್ಮೆ ಬಹಿರಂಗ ಪಡಿಸಿದ್ದಾರೆ. ಈ ವಿಡಿಯೋದಲ್ಲಿ ಉದ್ದದ ಗೌನ್ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗೇ ತನ್ನ ಬೇಬಿ ಬಂಪ್ ಅನ್ನು ತೋರಿಸಿದ್ದಾರೆ. ಇದೇ ವಿಡಿಯೋದಲ್ಲಿ ಮುದ್ದಿನ ಸಾಕು ನಾಯಿ ಹಾಗೂ ಕಾಫಿ ಕಪ್ ಕೂಡ ಇದೆ. ಈ ವಿಡಿಯೋ ನೋಡುತ್ತಿದ್ದಂತೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ತಂದೆ ಯಾರು ಅಂತ ಬಹಿರಂಗ ಪಡಿಸಿಲ್ಲ
ಗೋವಾ ಬ್ಯೂಟಿ ಇಲಿಯಾನಾ ಗರ್ಭಿಣಿ ಅಂತ ಹೇಳಿದ್ದೇನೋ ನಿಜ. ಆದರೆ, ಇದೂವರೆಗೂ ಮಗುವಿನ ತಂದೆ ಯಾರೋ ಅನ್ನೋ ರಹಸ್ಯವನ್ನು ಬಿಟ್ಟು ಕೊಟ್ಟಿಲ್ಲ. ಮೊದಲ ಬಾರಿಗೆ ಗರ್ಭಿಣಿ ಎಂದು ಘೋಷಣೆ ಮಾಡಿದಾಗಲೇ ನೆಟ್ಟಿಗರು ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದರು. ಮತ್ತೆ ಕೆಲವರು ಅದು ಅವರ ವೈಯಕ್ತಿಕ ವಿಚಾರ ಎಂದು ಬೆಂಬಲ ನೀಡಿದ್ದರು.
ಇಲಿಯಾನಾ ಈ ಹಿಂದೆ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, 2019ರಲ್ಲಿ ಅವರೊಂದಿಗಿನ ಸಂಬಂಧ ಮುರಿದುಬಿದ್ದಿತ್ತು. ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಓಡಾಡುತ್ತಿತ್ತು.
ಭಾರತದ ಜನಪ್ರಿಯ ನಟಿ ಇಲಿಯಾನಾ
ಇಲಿಯಾನಾ ದಕ್ಷಿಣ ಭಾರತದ ಜನಪ್ರಿಯ ನಟಿ. ತೆಲುಗು, ತಮಿಳಿನ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 2006ರಲ್ಲಿ 'ದೇವದಾಸು' ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮಹೇಶ್ ಬಾಬು ಜೊತೆ ನಟಿಸಿದ 'ಪೊಕಿರಿ' ಸ್ಟಾರ್ ಪಟ್ಟಕ್ಕೆ ಕರೆದುಕೊಂಡು ಹೋಯ್ತು. ಇಲ್ಲಿಂದ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಇಲಿಯಾನಾ ನಟಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಇವರನ್ನು ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬಂದಿದ್ದರು. 'ಹುಡುಗ ಹುಡುಗಿ' ಸಿನಿಮಾದಲ್ಲಿ ಸ್ವತ: ಇಲಿಯಾನಾ ಆಗಿಯೇ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ಅನ್‌ಫೇರ್ ಅಂಡ್ ಲವ್‌ಲೀ' ಸಿನಿಮಾ ಬಿಡುಗಡೆಗೆ ಬಾಕಿ ಇದೆ.


Click it and Unblock the Notifications











