2023ರ ಟಾಪ್ 10 ಸಿನಿಮಾ ಸ್ಟಾರ್‌ಗಳ ಲಿಸ್ಟ್ ಔಟ್: ಕನ್ನಡದ ಸ್ಟಾರ್ ಇದ್ದಾರಾ? ಇಲ್ವಾ? ಯಾರು ನಂ 1?

ಇನ್ನೇನು 2023 ಮುಗೀತಾ ಬಂತು. ಇನ್ನೊಂದು 40 ದಿನ ಕಳೆದರೆ, ಹೊಸ ವರ್ಷಕ್ಕೆ ಕಾಲಿಡುತ್ತೇವೆ. 2024 ಅನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳುತ್ತೇವೆ. ಆದರೆ, ಈ ವರ್ಷ ಕನ್ನಡ ಸಿನಿಮಾಗಳಿಗೆ ನಿರಾಸೆ ಮೂಡಿಸಿದ ವರ್ಷ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಂದೇ ಒಂದು ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ.

ಕಳೆದ ವರ್ಷ ಹೀನಾಯ ಸ್ಥಿತಿಯಲ್ಲಿ ಬಾಲಿವುಡ್ ಮಂದಿಗೆ 2023 ಲಕ್ಕಿ ಅಂತ ಸಾಬೀತಾಗಿದೆ. ಆದರೆ, ದಕ್ಷಿಣ ಭಾರತದ ಯಾವುದೇ ಭಾಷೆಯ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡಲೇ ಇಲ್ಲ. ತೆಲುಗು, ತಮಿಳು ಒಂದೆರಡು ಸಿನಿಮಾಗಳು ಬಿಟ್ಟರೆ, ಕನ್ನಡ ಚಿತ್ರರಂಗದ ಈ ವರ್ಷ ಸಾಧನೆ ಜೀರೊ ಅಂತಲೇ ಹೇಳಬೇಕು.

Imdb announced the 2023 top 10 famous Indian movie stars here is the list

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ನೀಡುವ ವಿಶ್ವದ ಸುಪ್ರಸಿದ್ಧ ಜಾಲತಾಣ IMdb 2023ರ ಭಾರತದ ಅತ್ಯಂತ ಜನಪ್ರಿಯ ಟಾಪ್ 10 ತಾರೆಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ದಕ್ಷಿಣ ಭಾರತದವರು ಎಷ್ಟು ಮಂದಿ? ಆಯ್ಕೆ ಪ್ರಕ್ರಿಯೆ ಹೇಗಾಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಶಾರುಖ್ ಖಾನ್ IMdb ನಂ 1 ಸ್ಟಾರ್

ವಿಶ್ವದಾದ್ಯಂತ ಇರುವ ಲಕ್ಷಾಂತರ ಐಎಂಡಿಬಿ ವೀಕ್ಷಕರ ಸಂಖ್ಯೆಯನ್ನು ಆಧರಿಸಿ ಅತ್ಯಂತ ಜನಪ್ರಿಯ ನಟ ನಟಿಯರು ಯಾರು? ಅನ್ನೋದನ್ನು ಪಟ್ಟಿ ಮಾಡಲಾಗಿದೆ. 2023ರ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾ ತಾರೆಯರು ಈಗಾಗಲೇ ರಿವೀಲ್ ಆಗಿದೆ. ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ವೆಬ್‌ಸೈಟ್‌ಗೆ ಭೇಟಿ ನೀಡುವ ವೀಕ್ಷಕರ ಹುಡುಕಾಟವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಶಾರುಖ್‌ಖಾನ್‌, ಐಎಂಡಿಬಿಯ 2023ರ ನಂಬರ್‍‌ 1 ರ ಸ್ಥಾನದಲ್ಲಿದ್ದಾರೆ.

Imdb announced the 2023 top 10 famous Indian movie stars here is the list

ಶಾರುಖ್ ಖಾನ್ ನಂ 1 ಯಾಕೆ?

2023ಯಲ್ಲಿ ಶಾರುಖ್ ಖಾನ್ ಕಮ್ ಬ್ಯಾಕ್ ಮಾಡಿದ್ದರು. ವರ್ಷದ ಆರಂಭದಲ್ಲಿ ತೆರೆಕಂಡಿದ್ದ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 'ಕೆಜಿಎಫ್ 2' ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗಿತ್ತು. 2023 ಸೆಪ್ಟೆಂಬರ್‌ನಲ್ಲಿ 'ಜವಾನ್' ರಿಲೀಸ್ ಆಗಿತ್ತು. ಇದೂ ಕೂಡ ಬಾಕ್ಸಾಫೀಸ್‌ ಅನ್ನೇ ದೋಚಿತ್ತು. ಬ್ಯಾಕ್ ಟು ಬ್ಯಾಕ್ ಸಾವಿರ ಕೋಟಿ ರೂಪಾಯಿಯ ಎರಡು ಸಿನಿಮಾಗಳನ್ನು ನೀಡಿದ ಶಾರುಖ್ ಬಗ್ಗೆ ವಿಶ್ವದಾದ್ಯಂತ ಇರೋ ಜನರಲ್ಲಿ ಆಸಕ್ತಿ ಮೂಡಿಸಿತ್ತು ಎಂದು IMdb ಹೇಳಿಕೊಂಡಿದೆ.

ಕನ್ನಡದವರು ಒಬ್ಬರೂ ಇಲ್ಲ

ಕನ್ನಡದ ಮಟ್ಟಿಗೆ ಈ ಬಾರಿ ಒಬ್ಬನೇ ಒಬ್ಬ ನಟನೂ ಇಲ್ಲ. ಕಳೆದ ವರ್ಷ ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹೆಸರುಗಳು ಹರಿದಾಡಿದ್ದವು. ಆದರೆ, ಈ ಬಾರಿ ಒಬ್ಬ ಕನ್ನಡದ ನಟನ ಹೆಸರು ಕೂಡ ಇಲ್ಲ. ಕನ್ನಡ ಅಷ್ಟೇ ಅಲ್ಲ ನಯನತಾರಾ, ವಿಜಯ್ ಸೇತುಪತಿ, ಶೋಭಿತಾ ಧೂಲಿಪಲ ಬಿಟ್ಟರೆ, ತೆಲುಗು, ತಮಿಳು, ಮಲಯಾಳಂನಲ್ಲೂ ಸ್ಟಾರ್ ನಟರ ಹೆಸರಿಲ್ಲ. ಈ ಮೂವರು ಹೆಸರು ಇರೋದು ಕೂಡ ಅವರ ಹಿಂದಿ ಪ್ರಾಜೆಕ್ಟ್‌ಗಳಿಂದನೇ..

IMdb ಜನಪ್ರಿಯ ತಾರೆಯರ ಪಟ್ಟಿ ಇಲ್ಲಿದೆ

ಇದೇ ಮೊದಲ ಬಾರಿಗೆ ಪಂಜಾಬಿ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸೋ ವಾಮಿಕಾ ಗಬ್ಬಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಈ ನಟಿ 'ಖುಫಿಯಾ', ' ಡ್ರಾಮಾ ಜುಬಿಲಿ', 'ಮಾಡರ್ನ್ ಲವ್ ಚೆನ್ನೈ', 'ಕಾಲಿ ಜೋಟ್ಟ' ಅಂತ ವಿಭಿನ್ನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

IMdbಯ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ

1. ಶಾರುಖ್‌ ಖಾನ್
2. ಅಲಿಯಾ ಭಟ್
3. ದೀಪಿಕಾ ಪಡುಕೋಣೆ
4. ವಾಮಿಕಾ ಗಬ್ಬಿ
5. ನಯನತಾರಾ
6. ತಮನ್ನಾ ಭಾಟಿಯಾ
7. ಕರೀನಾ ಕಪೂರ್ ಖಾನ್
8. ಸೋಭಿತಾ ಧೂಲಿಪಲ
9. ಅಕ್ಷಯ್‌ ಕುಮಾರ್
10. ವಿಜಯ್‌ ಸೇತುಪತಿ

More from Filmibeat

English summary
IMdb top 10 Indian stars in 2023:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X