'ನಾನು ಬದುಕಬೇಕು, 300-400 ರೂ. ಆದರೂ ಕೊಡಿ': 'ಮಂಗಲ್ ಪಾಂಡೆ' ಕಲಾವಿದನ ಕಣ್ಣೀರು

ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿದ್ದ 'ಮಂಗಲ್ ಪಾಂಡೆ' ಚಿತ್ರ ಸೇರಿದಂತೆ ಅನೇಕ ಸಿನಿಮಾ ಮತ್ತು ಟೆಲಿವಿಷನ್ ಧಾರಾವಾಹಿಗಳಲ್ಲಿ ನಟಿಸಿದ್ದ ರಾಜೇಶ್ ಕರೀರ್, ಹೊಟ್ಟೆಪಾಡಿಗೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಹಣಕ್ಕಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ಕರುಳು ಹಿಂಡುವಂತಿದೆ.

ಹಿಂದಿಯ ಪ್ರಸಿದ್ಧ ಧಾರಾವಾಹಿ 'ಬೇಗುಸರೈ'ನಲ್ಲಿ ನಟಿ ಶಿವಾಂಗಿ ಜೋಷಿ ಅವರ ತಂದೆಯ ಪಾತ್ರ ನಿರ್ವಹಿಸಿದ್ದ ರಾಜೇಶ್ ಕರೀರ್, ಹಣಕಾಸಿನ ಸಹಾಯಕ್ಕಾಗಿ ಅಂಗಲಾಚುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡುತ್ತಿರುವವರು 300-400 ರೂಪಾಯಿಗಳನ್ನಾದರೂ ನೀಡಿದರೆ ಪಂಜಾಬ್‌ಗೆ ಮರಳಿ ಹೋಗಿ ಏನಾದರೂ ಕೆಲಸ ಹುಡುಕಿಕೊಂಡು ಜೀವನ ನಡೆಸುವುದಾಗಿ ಅಲವತ್ತುಕೊಂಡಿದ್ದಾರೆ.

ನಾಚಿಕೆ ಬಿಟ್ಟು ಕೇಳುತ್ತಿದ್ದೇನೆ

ನಾಚಿಕೆ ಬಿಟ್ಟು ಕೇಳುತ್ತಿದ್ದೇನೆ

ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಧಾರಾವಾಹಿಗಳಲ್ಲಿನ ಪಾತ್ರದ ಮೂಲಕ ಹಲವರಾದರೂ ತಮ್ಮನ್ನು ಗುರುತಿಸಬಹುದು ಎಂದು ಭಾವಿಸುವುದಾಗಿ ತಿಳಿಸಿದ್ದಾರೆ. ವಿಷಯವೆಂದರೆ... ನಾನು ಈಗ ನಾಚಿಕೆಯಿಂದ ಸುಮ್ಮನಾದರೆ ನನ್ನ ಜೀವನ ಮತ್ತಷ್ಟು ಕಷ್ಟಕರವಾಗಲಿದೆ. ನನಗೆ ಸಹಾಯ ಅತಿ ಅಗತ್ಯವಾಗಿದೆ. ನಿಮಗೆಲ್ಲರಿಗೂ ಮನವಿ ಮಾಡುತ್ತಿದ್ದೇನೆ. ನನ್ನ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ತೀರಾ ಕಷ್ಟಕರವಾಗಿದೆ

ತೀರಾ ಕಷ್ಟಕರವಾಗಿದೆ

'ಕಳೆದ 15-16 ವರ್ಷಗಳಿಂದ ನಾನು ಕುಟುಂಬದವರೊಂದಿಗೆ ಮುಂಬೈನಲ್ಲಿ ವಾಸವಿದ್ದೇನೆ. ಕೆಲವು ಸಮಯದಿಂದ ನಟನೆಗೆ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲಿಯೂ ಕಳೆದ ಎರಡು ಮೂರು ತಿಂಗಳು ತೀರಾ ಕಷ್ಟವಾಗಿತ್ತು. ನಿಮ್ಮಿಂದ ಸಾಧ್ಯವಾದರೆ 300-400 ರೂ ನೀಡುವಂತೆ ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ಇಷ್ಟು ನನಗೆ ಸಹಾಯ ಮಾಡುತ್ತೀರಾ ಎಂದು ಕೇಳಿಕೊಂಡಿದ್ದಾರೆ.

ಕೆಲಸ ಸಿಗುತ್ತದೆಯೋ ಗೊತ್ತಿಲ್ಲ

ಚಿತ್ರೀಕರಣಗಳು ಯಾವಾಗ ಶುರುವಾಗುತ್ತವೆ ಅಥವಾ ನನಗೆ ಕೆಲಸ ಸಿಗುತ್ತದೆಯೇ ಎಂಬುದು ತಿಳಿದಿಲ್ಲ. ಜೀವನ ಒಂದು ಹಂತದಲ್ಲಿ ಸ್ತಬ್ಧವಾಗಿದೆ. ನನಗೆ ಏನೂ ಅರ್ಥವಾಗುವ ಸ್ಥಿತಿಯಲ್ಲಿಲ್ಲ. ನಾನು ಬದುಕಲು ಬಯಸಿದ್ದೇನೆ' ಎಂದು ಭಾವುಕರಾಗಿದ್ದಾರೆ.

ಅಮೀರ್ ಖಾನ್, ಹೂಡಾ ಸಹಾಯ ಮಾಡಬಹುದು

ಅಮೀರ್ ಖಾನ್, ಹೂಡಾ ಸಹಾಯ ಮಾಡಬಹುದು

ಈ ವಿಡಿಯೋ ನೋಡುತ್ತಿರುವವರು ದಯಮಾಡಿ ಕನಿಷ್ಠ 300 ಅಥವಾ 400 ರೂ. ಆದರೂ ಕೊಡಿ. ಇದರಿಂದಾಗಿ ಹುಟ್ಟೂರು ಪಂಜಾಬ್‌ಗೆ ಮರಳಿ ಹೋಗುವಷ್ಟಾದರೂ ಹಣ ಸಿಗುತ್ತದೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಅಮೀರ್ ಖಾನ್ ಮತ್ತು ರಣದೀಪ್ ಹೂಡಾ ಅವರಿಗೆ ಇದು ತಿಳಿದರೆ ಅವರಾದರೂ ತಮ್ಮ ಸಹಾಯಕ್ಕೆ ಧಾವಿಸಬಹುದು ಎಂದು ಹೇಳಿದ್ದಾರೆ.

More from Filmibeat

English summary
Begusarai show actor Rajesh Kareer has shared an emotional video on facebook and pleaded people for financial help.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X