ಸೋನಂ ಕಪೂರ್ ಮದುವೆಗೆ ಬಂದ ಸ್ಪೆಷಲ್ ಗೆಸ್ಟ್ ಗಳಿವರು..

By Harshitha

ಸಿನಿ ಲೋಕದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ನಟಿ ಅನುಷ್ಕಾ ಶರ್ಮಾ, ಶ್ರಿಯಾ ಸರಣ್, ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಸರದಿ.

ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆಗೆ ನಟಿ ಸೋನಂ ಕಪೂರ್ ಇಂದು ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಇಂದು ಮಧ್ಯಾಹ್ನ ಮುಂಬೈನ ಬಾಂದ್ರಾದಲ್ಲಿ ಇರುವ Rockdale ಬಂಗಲೆಯಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ಮಹೋತ್ಸವ ನೆರವೇರಿತು.

ಸಿಖ್ ಸಂಪ್ರದಾಯದಂತೆ ನಟಿ ಸೋನಂ ಕಪೂರ್ ಕೊರಳಿಗೆ ಆನಂದ್ ಅಹುಜಾ ಮಂಗಳಸೂತ್ರ ಧಾರಣೆ ಮಾಡಿದರು. ನಟಿ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ರಾಣಿ ಮುಖರ್ಜಿ ಸೇರಿದಂತೆ ಬಾಲಿವುಡ್ ನ ಹಲವು ತಾರೆಯರು ಸೋನಂ-ಆನಂದ್ ಮದುವೆಗೆ ಸಾಕ್ಷಿ ಆದರು. ಫೋಟೋ ಆಲ್ಬಂ ಇಲ್ಲಿದೆ ನೋಡಿ...

ಕಂಗೊಳಿಸಿದ ನವ ಜೋಡಿ

ಕಂಗೊಳಿಸಿದ ನವ ಜೋಡಿ

ವಿವಾಹ ಮಹೋತ್ಸವದಲ್ಲಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಕಂಗೊಳಿಸಿದ್ದು ಹೀಗೆ...

ಹಾಲು-ಜೇನು ಒಂದಾದ ಹಾಗೆ

ಹಾಲು-ಜೇನು ಒಂದಾದ ಹಾಗೆ

ಕೆಂಪು ಬಣ್ಣದ ಲೆಹೆಂಗಾದಲ್ಲಿ ವಧು ಸೋನಂ ಕಪೂರ್ ಕಂಗೊಳಿಸಿದರೆ, ಕ್ರೀಮ್ ಬಣ್ಣದ ಕುರ್ತಾ ತೊಟ್ಟು ಆನಂದ್ ಅಹುಜಾ ಮಿಂಚಿದರು.

ಸೈಫ್ ದಂಪತಿ ಜೊತೆಗೆ ಪೋಸ್

ಸೈಫ್ ದಂಪತಿ ಜೊತೆಗೆ ಪೋಸ್

ದಾಂಪತ್ಯ ಬದುಕಿಗೆ ಕಾಲಿಟ್ಟ ಮೇಲೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಜೊತೆಗೆ ನವ ವಧು-ವರ ಫೋಟೋಗೆ ಪೋಸ್ ಕೊಟ್ಟರು.

ಕರಿಷ್ಮಾ ಕಪೂರ್ ಜೊತೆ ಹೊಸ ದಂಪತಿ

ಕರಿಷ್ಮಾ ಕಪೂರ್ ಜೊತೆ ಹೊಸ ದಂಪತಿ

ನೂತನ ದಂಪತಿಗೆ ನಟಿ ಕರಿಷ್ಮಾ ಕಪೂರ್ ಶುಭ ಹಾರೈಸಿದರು.

ಕೇಕ್ ಕತ್ತರಿಸಿ ಸಂಭ್ರಮಿಸಿದ ಹೊಸ ಜೋಡಿ

ಕೇಕ್ ಕತ್ತರಿಸಿ ಸಂಭ್ರಮಿಸಿದ ಹೊಸ ಜೋಡಿ

ಸಿಖ್ ಸಂಪ್ರದಾಯದಂತೆ ಮದುವೆ ಶಾಸ್ತ್ರ ಮುಗಿದ ಬಳಿಕ, ನವ ಜೋಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ವಿಶ್ ಮಾಡಿದ ಸಹೋದರ ಹರ್ಷವರ್ಧನ್

ವಿಶ್ ಮಾಡಿದ ಸಹೋದರ ಹರ್ಷವರ್ಧನ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಹೋದರಿ ಸೋನಂಗೆ ಹರ್ಷವರ್ಧನ್ ವಿಶ್ ಮಾಡಿದರು.

ಸೋನಂ ಖುಷಿಗೆ ಪಾರವೇ ಇಲ್ಲ

ಸೋನಂ ಖುಷಿಗೆ ಪಾರವೇ ಇಲ್ಲ

ಮೆಚ್ಚಿದ ಗೆಳೆಯನ ಕೈಹಿಡಿದಿರುವುದಕ್ಕೆ ನಟಿ ಸೋನಂ ಕಪೂರ್ ಹರ್ಷಚಿತ್ತರಾಗಿದ್ದಾರೆ.

ಶುಭ ಕೋರಿದ ಬಿಗ್ ಬಿ ಕುಟುಂಬ

ಶುಭ ಕೋರಿದ ಬಿಗ್ ಬಿ ಕುಟುಂಬ

ಸೋನಂ ಮದುವೆಗೆ ಆಗಮಿಸಿ, ನೂತನ ವಧು-ವರನಿಗೆ ಅಮಿತಾಬ್ ಬಚ್ಚನ್ ಹಾಗೂ ಅಭಿಶೇಕ್ ಬಚ್ಚನ್ ಶುಭ ಕೋರಿದರು.

ನಟಿಯರ ಸಮಾಗಮ

ನಟಿಯರ ಸಮಾಗಮ

ಸೋನಂ ಕಪೂರ್-ಆನಂದ್ ಅಹುಜಾ ಮದುವೆಗೆ ನಟಿ ಕರೀನಾ ಕಪೂರ್, ರಾಣಿ ಮುಖರ್ಜಿ ಹಾಗೂ ಕರಿಷ್ಮಾ ಕಪೂರ್ ಸಾಕ್ಷಿ ಆದರು.

ರಣ್ವೀರ್ ಸಿಂಗ್ ಜೊತೆ ಅರ್ಜುನ್ ಕಪೂರ್

ರಣ್ವೀರ್ ಸಿಂಗ್ ಜೊತೆ ಅರ್ಜುನ್ ಕಪೂರ್

ಸೋನಂ ಕಪೂರ್ ಮದುವೆಯಲ್ಲಿ ರಣ್ವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಕೂಡ ಸಂಭ್ರಮಿಸಿದರು.

ಶ್ರೀದೇವಿ ಫ್ಯಾಮಿಲಿ

ಶ್ರೀದೇವಿ ಫ್ಯಾಮಿಲಿ

ಸೋನಂ ಕಪೂರ್-ಆನಂದ್ ಅಹುಜಾ ಕಲ್ಯಾಣೋತ್ಸವದಲ್ಲಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಕೂಡ ಪಾಲ್ಗೊಂಡಿದ್ದರು.

ಆಮೀರ್ ಖಾನ್

ಆಮೀರ್ ಖಾನ್

ಸೋನಂ ಕಪೂರ್ ಮದುವೆಯಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕೂಡ ಭಾಗವಹಿಸಿದ್ದರು.

More from Filmibeat

English summary
Bollywood Actress Sonam Kapoor got married to Anand Ahuja today (May 8th) in Mumbai. Check out the Photo Album of Sonam Kapoor-Anand Ahuja wedding here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X