ಚಿತ್ರಗಳು: ತಾರೆಗಳ ತೋಟದಲ್ಲಿ ನಟಿ ಸೋನಂ ಕಪೂರ್ ಸಂಗೀತ ಕಾರ್ಯಕ್ರಮ
ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹುಜಾ ಇಂದು ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ಇಷ್ಟು ದಿನ ಪ್ರೀತಿಸುತ್ತಿದ್ದ ಈ ಜೋಡಿಯ ಪ್ರೇಮಕ್ಕೆ ಇಂದು ಮದುವೆ ಎಂಬ ಅಧಿಕೃತ ಮುದ್ರೆ ಬೀಳಲಿದೆ.
ವಿವಾಹ ಮಹೋತ್ಸವ ನಡೆಯುವ ಮುನ್ನ, ನಟಿ ಸೋನಂ ಕಪೂರ್ ರವರ ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನಿನ್ನೆ ಸನ್ ಟೆಕ್, ಸಿಗ್ನೇಚರ್ ಐಲ್ಯಾಂಡ್ ನಲ್ಲಿ ನಡೆಯಿತು.
ಸೋನಂ ಕಪೂರ್ ಮದರಂಗಿ ಶಾಸ್ತ್ರ ಹಾಗೂ ಸಂಗೀತ್ ಸೆರಮನಿಯಲ್ಲಿ ಬಾಲಿವುಡ್ ನ ಖ್ಯಾತನಾಮರು ಪಾಲ್ಗೊಂಡಿದ್ದರು. ಆ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ಮೆಹಂದಿ ಶಾಸ್ತ್ರ
ಸಂಪ್ರದಾಯ ಬದ್ಧವಾಗಿ ನಿನ್ನೆ ಮೊದಲು ಮೆಹಂದಿ ಶಾಸ್ತ್ರ ನಡೆಯಿತು. ಎರಡೂ ಕೈ ಹಾಗೂ ಕಾಲುಗಳಿಗೆ ಮದರಂಗಿಯ ಚಿತ್ತಾರ ಬಿಡಿಸಿಕೊಂಡು ವಧು ಸೋನಂ ಹರ್ಷಚಿತ್ತರಾದರು.

ಸಂಗೀತ ಕಾರ್ಯಕ್ರಮ
ಮೆಹಂದಿ ಶಾಸ್ತ್ರ ಮುಗಿದ ಬಳಿಕ ಅದ್ಧೂರಿಯಾಗಿ ಸಂಗೀತ ಕಾರ್ಯಕ್ರಮ ನೆರವೇರಿತು. ಸಂಗೀತ್ ಸೆರಮನಿಯಲ್ಲಿ ನವ ವಧು-ವರ ಕಂಗೊಳಿಸಿದ್ದು ಹೀಗೆ...

ಶ್ರೀದೇವಿ ಪುತ್ರಿಯರು
ಸಂಗೀತ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಲೆಹಂಗಾ ತೊಟ್ಟು ಶ್ರೀದೇವಿ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಕಪೂರ್ ಮಿಂಚಿದರು.

ಅನ್ಷುಲಾ ಕಪೂರ್
ಸಂಗೀತ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಸಂಪ್ರದಾಯಿಕ ಡ್ರೆಸ್ ಕೋಡ್ ನೀಡಲಾಗಿತ್ತು. ಹೀಗಾಗಿ ಬಳಿ ಬಣ್ಣದ ಲೆಹಂಗಾ ತೊಟ್ಟು ಬೋನಿ ಕಪೂರ್ ಮೊದಲ ಪತ್ನಿಯ ಪುತ್ರಿ ಅನ್ಷುಲಾ ಕಪೂರ್ ಕೂಡ ಆಗಮಿಸಿದರು.

ಕುಟುಂಬಸ್ಥರು ಭಾಗಿ
ಸೋನಂ ಕಪೂರ್-ಆನಂದ್ ಅಹುಜಾ ರವರ ಸಂಗೀತ ಕಾರ್ಯಕ್ರಮಕ್ಕೆ ಇಡೀ ಕಪೂರ್ ಖಾನ್ದಾನ್ ಹಾಗೂ ಅಹುಜಾ ಫ್ಯಾಮಿಲಿ ಹಾಜರಿತ್ತು.

ವಧು ಜೊತೆ ಕತ್ರಿನಾ
ನವ ವಧು ಸೋನಂ ಕಪೂರ್ ಜೊತೆಗೆ ಕತ್ರಿನಾ ಕೈಫ್ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟಿದ್ದು ಹೀಗೆ...

ರಾಣಿ-ಮುಖರ್ಜಿ ಹಾಗೂ ಕರಣ್ ಜೋಹರ್
ಸೋನಂ ಕಪೂರ್ ರವರ ಸಂಗೀತ ಕಾರ್ಯಕ್ರಮಕ್ಕೆ ನಟಿ ರಾಣಿ ಮುಖರ್ಜಿ ಹಾಗೂ ಕರಣ್ ಜೋಹರ್ ಕೂಡ ಸಾಕ್ಷಿ ಆದರು.

ಹಿರಿಯ ನಟಿ ರೇಖಾ
ನಿರ್ದೇಶಕ ಫರಾ ಖಾನ್ ಮಕ್ಕಳೊಂದಿಗೆ ಬಾಲಿವುಡ್ ನ ಹಿರಿಯ ನಟಿ ರೇಖಾ ಪೋಸ್ ಕೊಟ್ಟರು.

ತಂದೆ-ಮಗ
ಸೋನಂ ಕಪೂರ್ ಮದುವೆ ಪೂರ್ವ ಶಾಸ್ತ್ರಗಳಲ್ಲಿ ತಂದೆ ಬೋನಿ ಕಪೂರ್ ಹಾಗೂ ಪುತ್ರ ಅರ್ಜುನ್ ಕಪೂರ್ ಒಟ್ಟಾಗಿ ಕಾಣಿಸಿಕೊಂಡರು.

ನಗು ಮೊಗದ ಸೋನಂ
ತಮ್ಮ ದೀರ್ಘ ಕಾಲದ ಗೆಳೆಯ ಆನಂದ್ ಅಹುಜಾ ರನ್ನ ಕೈಹಿಡಿಯುತ್ತಿರುವುದಕ್ಕೆ ಸೋನಂ ಖುಷಿಗೆ ಪಾರವೇ ಇಲ್ಲ.

ಕುಣಿದು ಕುಪ್ಪಳಿಸಿದ ಸೋನಂ
ಸಂಗೀತ ಕಾರ್ಯಕ್ರಮದಲ್ಲಿ ವಧು ಸೋನಂ ಕಪೂರ್ ಕುಣಿದು ಕುಪ್ಪಳಿಸಿದರು.

ಕಪೂರ್ ಗ್ಯಾಂಗ್
ಕಪೂರ್ ಗ್ಯಾಂಗ್ ಜೊತೆಗೆ ದೇವಿಡ್ ಧವನ್ ಹಾಗೂ ಪುತ್ರ ರೋಹಿತ್.

ಸಂಭ್ರಮದಲ್ಲಿ ಸುನೀತಾ ಕಪೂರ್
ಮಗಳ ಮದುವೆಯ ಸಂಭ್ರಮದಲ್ಲಿ ಅನಿಲ್ ಕಪೂರ್ ಪತ್ನಿ ಸುನೀತಾ ಕಪೂರ್.

ತಾರೆಗಳ ತೋಟ
ಸೋನಂ ಕಪೂರ್ ಸಂಗೀತ ಕಾರ್ಯಕ್ರಮಕ್ಕೆ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಣಿ ಮುಖರ್ಜಿ ಆಗಮಿಸಿದರು. ಮೆಹಂದಿ ಚಿತ್ತಾರ ಬಿಡಿಸಿಕೊಂಡು ಸ್ವರಾ ಭಾಸ್ಕರ್ ಕೂಡ ಸಂಭ್ರಮಿಸಿದರು.

ಮದುವೆ ಓಡಾಟದಲ್ಲಿ ಅನಿಲ್ ಕಪೂರ್ ಬಿಜಿ
ಮಗಳ ಮದುವೆಯ ಓಡಾಟದಲ್ಲಿ ಬಿಜಿಯಾಗಿದ್ದ ತಂದೆ ಅನಿಲ್ ಕಪೂರ್ ಕ್ಯಾಮರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದು ಹೀಗೆ..


Click it and Unblock the Notifications











