ಹೊಸ ಬಾಳಿಗೆ ಅಡಿಯಿಟ್ಟ ನಟಿ ಸೋನಂ ಕಪೂರ್-ಆನಂದ್ ಅಹುಜಾ
ಬಾಲಿವುಡ್ ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಆನಂದ್ ಅಹುಜಾ ಜೊತೆಗೆ ನಟಿ ಸೋನಂ ಕಪೂರ್ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಬಾಲಿವುಡ್ ನ ಸ್ಟೈಲ್ ಐಕಾನ್ ಆಗಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸೋನಂ ಕಪೂರ್ ಇಂದು ತಮ್ಮ ದೀರ್ಘಕಾಲದ ಇನಿಯ ಆನಂದ್ ಅಹುಜಾ ರವರೊಂದಿಗೆ ಹೊಸ ಜೀವನ ಶುರು ಮಾಡಿದ್ದಾರೆ.
ಇಂದು ಮಧ್ಯಾಹ್ನ ಮುಂಬೈನ ಬಾಂದ್ರಾದಲ್ಲಿ ಇರುವ Rockdale ಬಂಗಲೆಯಲ್ಲಿ ಸೋನಂ ಕಪೂರ್ ವಿವಾಹ ಮಹೋತ್ಸವ ಜರುಗಿತು. ಸೋನಂ-ಆನಂದ್ ಮದುವೆಯ ಕೆಲ ಫೋಟೋಗಳು ನಿಮ್ಮ ಫಿಲ್ಮಿಬೀಟ್ ಗೆ ಲಭ್ಯವಾಗಿದೆ ನೋಡಿ...

'ಮದುಮಗಳು' ಸೋನಂ ಕಪೂರ್
ಕೆಂಪು ಬಣ್ಣದ ಲೆಹೆಂಗಾ ಧರಿಸಿ ಚಿನ್ನದ ಒಡವೆಗಳಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತಿದ್ದರು ಮದುಮಗಳು ಸೋನಂ ಕಪೂರ್.

ಮದುಮಗಳ ಉಡುಗೆಯ ವಿಶೇಷತೆ ಏನು.?
ಕೆಂಪು ಬಣ್ಣದ ಲೆಹೆಂಗಾ ಮೇಲೆ ಗೋಲ್ಡನ್ ಲೋಟಸ್ ಎಂಬ್ರಾಯಿಡರಿ ಮಾಡಲಾಗಿರುವ ಈ ಸಾಂಪ್ರದಾಯಿಕ ಉಡುಗೆಯನ್ನ ಡಿಸೈನ್ ಮಾಡಿರುವವರು ಅನುರಾಧಾ ವಕೀಲ್.

ಸಿಖ್ ಸಂಪ್ರದಾಯದಂತೆ ಮದುವೆ
ಇಂದು ಬೆಳಗ್ಗೆ 11 ರಿಂದ 12.30 ರ ಸುಮಾರಿಗೆ ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ಮಂಟಪ
ಮುಂಬೈನ ಬಾಂದ್ರಾದಲ್ಲಿ ಇರುವ Rockdale ಬಂಗಲೆಯಲ್ಲಿ ಸೋನಂ ಕಪೂರ್ ವಿವಾಹ ಮಹೋತ್ಸವ ನೆರವೇರಿತು. ಮದುವೆಗಾಗಿ ಬಂಗಲೆಯಲ್ಲಿ ವಿಶೇಷ ಮಂಟಪದ ವ್ಯವಸ್ಥೆ ಮಾಡಲಾಗಿತ್ತು.

ಇಂದು ಸಂಜೆ ನಡೆಯಲಿದೆ ಆರತಕ್ಷತೆ
ಇಂದು ಸಂಜೆ ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ರಿಸೆಪ್ಷನ್ ನಡೆಯಲಿದೆ.


Click it and Unblock the Notifications











