ಈ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಜೊತೆ ಬಾಲಿವುಡ್ ನಟಿಯರ ಡೇಟಿಂಗ್: ಈ ಸ್ಟೋರಿಯ ಹಿನ್ನೆಲೆಯೇನು?
ಭಾರತ ಹಾಗೂ ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯ ನಿನ್ನೆ (ಅಕ್ಟೋಬರ್ 15) ನಡೆದಿದೆ. ಕಿಕ್ಕಿರಿದ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣೆಸಾಡಿವೆ. ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಗೆದ್ದು ಬೀಗಿದ್ದೂ ಆಗಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಹೊರತಾಗಿ ಬೇರೆ ಸುದ್ದಿಗಳು ಟ್ರೆಂಡಿಂಗ್‌ನಲ್ಲಿವೆ. ಪಾಕಿಸ್ತಾನದ ಕೆಲ ಕ್ರಿಕೆಟರ್‌ಗಳ ಹೆಸರು ಬಾಲಿವುಡ್ ನಟಿಯರೊಂದಿಗೆ ತಳುಕು ಹಾಕಿಕೊಂಡಿದ್ದವು. ಪಾಕಿಸ್ತಾನ ಸ್ಟಾರ್ ಆಟಗಾರು ಬಾಲಿವುಡ್‌ನ ಸ್ಟಾರ್ ನಟಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು.
ವಾಸಿಮ್ ಅಕ್ರಮ್, ಶೊಹೇಬ್ ಅಖ್ತರ್, ಇಮ್ರಾನ್ ಖಾನ್, ಅಬ್ದುಲ್ ರಜಾಕ್, ಸುಶ್ಮಿತಾ ಸೇನ್, ಸೋನಾಲಿ ಬೇಂದ್ರೆ, ತಮನ್ನಾ ಬಾಟಿಯಾ ಸೇರಿದಂತೆ ಬಾಲಿವುಡ್ ನಟಿಯರ ಹೆಸರು ಇವರೊಂದಿಗೆ ತಳುಕು ಹಾಕಿಕೊಂಡಿತ್ತು. ಅಂತ ಜೋಡಿಗಳ ಪಟ್ಟಿ ಇಲ್ಲಿದೆ.

ವಾಸಿಮ್ ಅಕ್ರಮ್-ಸುಶ್ಮಿತಾ ಸೇನ್
2008ರಲ್ಲಿ ಸುಶ್ಮಿತಾ ಸೇನ್ ಹಾಗೂ ವಾಸಿಂ ಅಕ್ರಮ್ ಇಬ್ಬರೂ ಭಾರತ ಡ್ಯಾನ್ಸ್ ರಿಯಾಲಿಟಿ ಶೋ "ಏಕ್ ಕಿಲಾಡಿ ಏಕ್ ಹಸೀನಾ"ದಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದರು. ಈ ವೇಳೆ ಇಬ್ಬರಲ್ಲೂ ಸ್ನೇಹ ಬೆಳೆದಿತ್ತು. 2013ರಲ್ಲಿ ವಾಸಿಮ್ ಅಕ್ರಮ್ ಬಾಲಿವುಡ್ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಕೆಲವು ದಿನಗಳ ಬಳಿಕ ವಾಸಿಮ್ ಅಕ್ರಮ್ ಈ ಸುದ್ದಿಯನ್ನು ತಿರಸ್ಕರಿಸಿದ್ದರು. ಆಕೆ ನನ್ನ ಅತ್ಯುತ್ತಮ ಸ್ನೇಹಿತೆ ಅಷ್ಟೇ ಎಂದು ಹೇಳಿದ್ದರು.

ಶೊಹೇಬ್ ಅಖ್ತರ್-ಸೋನಾಲಿ ಬೇಂದ್ರೆ
ಪಾಕಿಸ್ತಾನಿ ಕ್ರಿಕೆಟ್ ತಂಡದ ಮಾಜಿ ಬೌಲರ್ ಶೊಹೇಬ್ ಅಖ್ತರ್ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಯ ಬಿಗ್ ಫ್ಯಾನ್ಸ್ ಆಗಿದ್ದರು. ಸೋನಾಲಿ ಬೇಂದ್ರೆ ಫೋಟೊವನ್ನು ತನ್ನ ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದರು. ಇದು ಅವರ ಸಹ ಆಟಗಾರರಿಗೂ ಗೊತ್ತಿತ್ತು ಎಂದು ಸುದ್ದಿ ಹಬ್ಬಿತ್ತು. ಆದರೆ, ಶೊಹೇಬ್ ಅಖ್ತರ್ ಅದನ್ನು ನಿರಾಕರಿಸಿದ್ದರು.

ಅಬ್ದುಲ್ ರಜಾಕ್-ತಮನ್ನಾ ಬಾಟಿಯಾ
ತಮನ್ನಾ ಬಾಟಿಯಾ ಹಾಗೂ ಅಬ್ದುಲ್ ರಜಾಕ್ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಜ್ಯೂವೆಲರಿ ಶಾಪ್ ಒಂದರ ಉದ್ಘಾಟನೆಗೆ ತಮನ್ನಾ ಹಾಗೂ ಅಬ್ದುಲ್ ರಜಾಕ್ ಹೋಗಿದ್ದರು. ಆ ಫೋಟೊವನ್ನು ವೈರಲ್ ಮಾಡಿ, ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು. ತಮನ್ನಾ ಇದು ಆಧಾರ ರಹಿತ ಸುದ್ದಿ ಎಂದು ಹೇಳಿದ್ದರು.

ಇಮ್ರಾನ್ ಖಾನ್-ಜೀನತ್ ಅಮಾನ್
80 ರ ದಶಕದಲ್ಲಿ ಇಮ್ರಾನ್ ಖಾನ್ ಹಾಗೂ ಜೀನತ್ ಅಮಾನ್ ನಡುವೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆ. 1979ರಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿದ್ದಾಗ, ಇಮ್ರಾನ್ ಖಾನ್‌ಗೆ ಜೀನತ್ ಅಮಾನ್ ಮೇಲೆ ಲವ್ ಆಗಿತ್ತು. ಜೀನ್ ಅಮಾನ್ ಜೊತೆನೇ ತನ್ನ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ, ಇದು ಮದುವೆ ಹಂತಕ್ಕೆ ಹೋಗಲಿಲ್ಲ. ಇಮ್ರಾನ್ ಖಾನ್ ಪಾಕಿಸ್ತಾನ ಬಿಟ್ಟು ಬರಲು ರೆಡಿಯಿರಲಿಲ್ಲ. ಅತ್ತ ಜೀನತ್ ಅಮಾನ್ ಭಾರತ ಬಿಟ್ಟು ಹೋಗಲು ತಯಾರಿರಲಿಲ್ಲ ಎಂದು ವರದಿಯಾಗಿತ್ತು.

ಮೊಹ್ಸಿನ್ ಖಾನ್- ರೀನಾ ರಾಯ್
ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹ್ಸಿನ್ ಖಾನ್ ಹಾಗೂ ಬಾಲಿವುಡ್ ನಟಿ ರೀನಾ ರಾಯ್ ಪ್ರೀತಿಯಲ್ಲಿ ಬಿದ್ದಿದ್ದರು. ಮೊಹ್ಸಿನ್ ಖಾನ್ ಹಾಗೂ ನಟಿ ರೀನಾ ರಾಯ್ 1983ರಲ್ಲಿ ಮದುವೆ ಕೂಡ ಆದರು. ಇಬ್ಬರಿಗೂ ಮುದ್ದಾಗ ಮಗಳು ಜನಿಸಿದ್ದರು. ಆದರೆ, 11 ವರ್ಷಗಳ ಬಳಿಕ ಇಬ್ಬರು ಬೇರೆಯಾದರು. 1992ರಲ್ಲಿ ರೀನಾ ರಾಯ್ ಭಾರತಕ್ಕೆ ಹಿಂತಿರುಗಿದ್ದರು.


Click it and Unblock the Notifications











