ಪಾಕಿಸ್ತಾನಿ ನಟನ ಸಿನಿಮಾ ರಿಲೀಸ್ ಕ್ಯಾನ್ಸಲ್, ಸಾಂಗ್ ಡಿಲೀಟ್; ಮೂವರು ಪಾಕ್ ಸ್ಟಾರ್‌ಗಳ ಕಥೆಯೇನು?

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ 28 ಪ್ರವಾಸಿಗರು ಸಾವನ್ನಪ್ಪಿದ್ದರು. ಅದರಲ್ಲಿ 26 ಮಂದಿ ಭಾರತದ ಟೂರಿಸ್ಟ್‌ಗಳು ಕೂಡ ಇದ್ದರು. ಉಗ್ರರು ಈ ದಾಳಿ ಮಾಡುವುದರ ಹಿಂದೆ ಪಾಕಿಸ್ತಾನ ಸರ್ಕಾರವಿದೆ ಎಂದು ವರದಿಯಾಗಿದೆ. ಉಗ್ರರ ಈ ಕೃತ್ಯವನ್ನು ಭಾರತ ಖಂಡಿಸಿದ್ದು, ಪಾಕ್‌ನೊಂದಿಗೆ ತನ್ನ ಒಪ್ಪಂದಗಳನ್ನು ರದ್ದು ಮಾಡಿಕೊಂಡಿದೆ. ಅತ್ತ ಪಾಕಿಸ್ತಾನ ಕೂಡ ಪ್ರತಿಕಾರವಾಗಿ ಕೆಲವು ಒಪ್ಪಂದವನ್ನು ರದ್ದುಗೊಳಿಸಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಹಳಸಿದೆ. ಯಾವಾಗ ಬೇಕಾದರೂ ಎರಡು ದೇಶಗಳ ನಡುವೆ ಯುದ್ಧ ಆರಂಭ ಆಗಬಹುದೆಂದು ಲೆಕ್ಕಚಾರ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವುದು ಪಾಕಿಸ್ತಾನದ ಕಲಾವಿದರು. ಭಾರತೀಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕನಸು ಇಂತಹ ಯುದ್ಧದ ಪರಿಸ್ಥಿತಿಯಲ್ಲಿ ನೆಲಕ್ಕಚ್ಚುತ್ತಿದೆ.

India Pak Tension Pakistani actors Indian movies may get cancelled

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ನಟರ ಕನಸು ಮತ್ತೆ ನುಚ್ಚು ನೂರಾಗಿದೆ. ಪಾಕ್ ನಟ ಫವಾದ್ ಖಾನ್ ಹಾಗೂ ವಾಣಿ ಕಪೂರ್ ನಟಿಸಿರುವ 'ಅಬೀರ್ ಗುಲಾಲ್' ಸಿನಿಮಾ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಇಷ್ಟೇ ಅಲ್ಲದ ನಿರ್ಮಾಣ ಸಂಸ್ಥೆ ಈ ಸಿನಿಮಾದ ಹಾಡನ್ನು ತನ್ನ ಯೂಟ್ಯೂಬ್ ಚಾನೆಲ್‌ನಿಂದ ಡಿಲೀಟ್ ಕೂಡ ಮಾಡಿದೆ. ಅಲ್ಲದೆ ಇನ್ನೂ ಮೂವರು ನಟರು ಭಾರತೀಯ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಅದೂ ಕೂಡ ಡೋಲಾಯಮಾನವಾಗಿದೆ.

ಫವಾದ್ ಖಾನ್ ಸಿನಿಮಾ ರಿಲೀಸ್ ಕ್ಯಾನ್ಸಲ್

ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿದ ರೊಮ್ಯಾಂಟಿಕ್ ಸಿನಿಮಾ 'ಅಬೀರ್ ಗುಲಾಲ್' ರಿಲೀಸ್‌ಗೆ ಸಿದ್ಧತೆ ನಡೆಸಿತ್ತು. ಬಾಲಿವುಡ್ ನಟಿ ವಾಣಿ ಕಪೂರ್ ಇದರಲ್ಲಿ ನಾಯಕಿಯಾಗಿ ನಟಿಸಿದ್ದರು. ಆರತಿ ಎಸ್ ಬಗ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಮೇ 9ರಂದು ಭಾರತದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದ್ರೀಗ ನಿರ್ಮಾಣ ಸಂಸ್ಥೆ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಿದೆ. ಅಲ್ಲದೆ ಈಗಾಗಲೇ ಬಿಡುಗಡೆಯಾಗಿದ್ದ ಹಾಡನ್ನು ಯೂಟ್ಯೂನ್‌ನಿಂದ ಕಿತ್ತು ಹಾಕಿದೆ.

9 ವರ್ಷಗಳ ಬಳಿಕ ಎಂಟ್ರಿ

ಪಾಕಿಸ್ತಾನದ ನಟ ಫವಾದ್ ಖಾನ್ ಈಗಾಗಲೇ ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಈ ಹಿಂದೆ ಉಗ್ರರು ದಾಳಿ ಮಾಡಿದಾಗ ಪಾಕಿಸ್ತಾನದ ನಟರು, ಗಾಯಕರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ಬ್ಯಾನ್ ಮಾಡಲಾಗಿತ್ತು. ಕೆಲವೇ ತಿಂಗಳ ಹಿಂದಷ್ಟೇ ಮತ್ತೆ ಪಾಕಿಸ್ತಾನ ನಟರು ಭಾರತೀಯ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಅವರಲ್ಲಿ ಫವಾದ್ ಖಾನ್ ಕೂಡ ಒಬ್ಬರು. 9 ವರ್ಷಗಳ ಬಳಿಕ ಭಾರತದ ಸಿನಿಮಾದಲ್ಲಿ ನಟಿಸಿದ್ದರು. ಇನ್ನೇನು ಬಿಡುಗಡೆಯಾಗಬೇಕು ಎನ್ನುವ ಹಂತದಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ.

India Pak Tension Pakistani actors Indian movies may get cancelled

ಹಾಡು ಯೂಟ್ಯೂಬ್‌ನಿಂದ ಡಿಲೀಟ್

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕ್ ನಟ ಫವಾದ್ ಖಾನ್ ಸಿನಿಮಾ 'ಅಬೀರ್ ಗುಲಾಲ್' ಬಾಯ್‌ಕಾಟ್‌ಗೆ ಸೋಶಿಯಲ್ ಮೀಡಿಯದಲ್ಲಿ ಒತ್ತಡ ಬಂದಿತ್ತು. ಇದನ್ನು ಗಮನಿಸುತ್ತಿದ್ದಂತೆ, ಎ ರಿಚರ್ ಲೆನ್ಸ್ ಎಂಟರ್‌ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಈಗಾಗಲೇ ಬಿಡುಗಡೆ ಮಾಡಿದ್ದ ಎರಡು ಹಾಡುಗಳನ್ನು ತನ್ನ ಯೂಟ್ಯೂಬ್ ಚಾನೆಲ್‌ನಿಂದ ಡಿಲೀಟ್ ಮಾಡಿದೆ. ಹಾಗೇ ಮ್ಯೂಸಿಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದ ಸರಿಗಮಪ ಯೂಟ್ಯೂಬ್ ಚಾನೆಲ್‌ನಲ್ಲೂ ಈ ಹಾಡುಗಳು ಕಾಣಿಸುತ್ತಿಲ್ಲ.

ಮೂರು ಪಾಕ್ ನಟರ ಗತಿಯೇನು?

ಫವಾದ್ ಖಾನ್ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಜನಪ್ರಿಯ ನಟನಾಗಿದ್ದಾರೆ. ಈಗಾಗಲೇ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ. ಆದರೆ, ಇನ್ನು ಮೂವರು ನಟರು ಭಾರತೀಯ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಹನಿತಾ ಆಮಿರ್, ಆಯೆಜಾ ಖಾನ್, ಮೌರಾ ಹೊಕೇನ್ ಬಾಲಿವುಡ್‌ಗೆ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಬೇಕಿತ್ತು. ಆದ್ರೀಗ ಈ ಮೂವರಿಗೂ ಬಾಲಿವುಡ್‌ನಲ್ಲಿ ನೆಲೆ ಸಿಗದಂತಾಗುತ್ತೆ. ಇವರ ಪ್ರಾಜೆಕ್ಟ್‌ಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿ ಯಾವುದು ಅಂತ ನೋಡುವುದಾರೇ.

ಮೌರಾ ಹೊಕೇನ್

ಸಿಯಾಸತ್ ವರದಿ ಪ್ರಕಾರ, ಈಗಾಗಲೇ ಪಾಕಿಸ್ತಾನದ ಕೆಲವು ಕಲಾವಿದರು ತಮ್ಮ ಅಪ್‌ಕಮಿಂಗ್ ಪ್ರಾಜೆಕ್ಟ್‌ಗಳನ್ನು ಅನೌನ್ಸ್ ಮಾಡಿದ್ದಾರೆ. ಬಹಳ ದಿನಗಳಲ್ಲಿ ಭಾರತೀಯ ಸಿನಿಮಾಗಳಲ್ಲಿ ಮತ್ತೆ ಕೆಲಸ ಮಾಡುವ ಕನಸು ಈಗಾಗಲೇ ಈಡೇರಿತ್ತು. ಆದ್ರೀಗ ಆ ಕನಸು ಈಡೇರುವುದು ಮರೀಚಿಕೆಯಾಗಿದೆ. ಅಂತಹವರಲ್ಲಿ ಮೌರಾ ಹೊಕೇನ್ ಕೂಡ ಒಬ್ಬರು. 2016ರಲ್ಲಿ ಈಕೆ 'ಸನಮ್ ತೇರಿ ಕಸಮ್' ಎನ್ನುವ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಬಳಿಕ ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಕಲಾವಿದರನ್ನು ಬ್ಯಾನ್ ಮಾಡಲಾಗಿತ್ತು. ಹೀಗಾಗಿ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಬ್ಯಾನ್ ತೆರವುಗೊಳಿಸಿದ ಬೆನ್ನಲ್ಲೇ ಇದೇ ಸಿನಿಮಾ ಈ ವರ್ಷ, 2025 ಫೆಬ್ರವರಿಯಲ್ಲಿ ಮತ್ತೆ ರಿ-ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೀಗಾಗಿ ಮತ್ತೆ ಪಾಕಿಸ್ತಾನದ ನಟಿ ಮೌರಾ ಹೊಕೇನ್ ಬೆಳಕಿಗೆ ಬಂದಿದ್ದರು. ಇದೇ ಯಶಸ್ಸಿನ ಬೆನ್ನಲ್ಲೇ ಅಖಿಲ್ ಸಚ್‌ದೇವ್ ಜೊತೆ 'ತು ಚಾಂದ್ ಹೇ' ವಿಡಿಯೋ ಅಲ್ಬಮ್‌ನಲ್ಲಿ ನಟಿಸಿದ್ದರು. ಈ ಸಾಂಗ್‌ಗೆ ಈಗಾಗಲೇ 12 ಮಿಲಿಯನ್ ವೀವ್ಸ್ ಸಿಕ್ಕಿದೆ. ಸಿನಿಮಾ ಹಾಗೂ ಅಲ್ಬಮ್ ಸಾಂಗ್ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ ಪ್ರಾಜೆಕ್ಟ್‌ಗಳಿಗೆ ಆಫರ್ ಬಂದಿದ್ದವು ಎನ್ನಲಾಗಿದೆ. ಆದ್ರೀಗ ಆ ಆಫರ್‌ಗಳು ಕೈ ತಪ್ಪುವ ಸಾಧ್ಯತೆಯಿದೆ.

ಹನಿಯಾ ಆಮಿರ್

ಪಾಕಿಸ್ತಾನದ ಮತ್ತೊಬ್ಬ ಜನಪ್ರಿಯ ನಟಿ ಹನಿಯಾ ಆಮಿರ್. ಈಕೆ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದರು. ಭಾರತದ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಜೊತೆ ನಾಯಕಿಯಾಗಿ ನಟಿಸುವುದಕ್ಕೆ ವೇದಿಕೆ ಸಿದ್ಧವಾಗಿತ್ತು ಎನ್ನಲಾಗಿದೆ. ದಿಲ್ಜಿತ್ ದೋಸಾಂಜ್ 'ಸರ್ದಾರ್‌ಜಿ 3' ಎನ್ನುವ ಪಂಜಾಬಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾಗೆ ಹನಿಯಾ ಆಮಿರ್ ನಾಯಕಿಯಾಗಿ ಆಯ್ಕೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಹನಿಯಾ ಆಮಿರ್‌ಗೆ ಈ ಅವಕಾಶ ಕೈ ತಪ್ಪುವ ಸಾಧ್ಯತೆಯಿದೆ.

ಆಯೆಜಾ ಖಾನ್

ಪಾಕಿಸ್ತಾನದ ಮತ್ತೊಬ್ಬ ಜನಪ್ರಿಯ ನಟಿ ಆಯೇಜಾ ಖಾನ್ ಕೂಡ ಬಾಲಿವುಡ್ ಎಂಟ್ರಿಗೆ ತಯಾರಿ ನಡೆಸಿದ್ದರು ಎನ್ನಲಾಗಿದೆ. ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಭಾರತ ಹಾಗೂ ಪಾಕಿಸ್ತಾನದ ಬಾವುಟದ ಮಧ್ಯೆ ಶೇಕ್ ಹ್ಯಾಂಡ್ ಮಾಡುತ್ತಿರುವ ಎಮೋಜಿಯನ್ನು ಹಾಕಿದ್ದರು. ಜೊತೆಗೆ ಇದರ ಅರ್ಥವೇನು ಎಂದು ಗೇಸ್ ಮಾಡುತ್ತೀರಾ ಎಂದು ಪ್ರಶ್ನೆ ಕೂಡ ಮಾಡಿದ್ದರು. ಆಗ ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ, ಸಿನಿಮಾ ಮಾಡುತ್ತಿರುವ ಬಗ್ಗೆ ಎಲ್ಲೂ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ. ಒಂದು ವೇಳೆ ಬಾಲಿವುಡ್ ಪ್ರಾಜೆಕ್ಟ್‌ ಸಿಕ್ಕಿದ್ದರೆ, ಅದೂ ಕೂಡ ಕೈ ತಪ್ಪಿ ಹೋಗುವ ಸಾಧ್ಯತೆಯಿತ್ತು.

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾದಾಗಲೆಲ್ಲ ಕಲಾವಿದರ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆ. ಕೆಲವು ಬ್ಯಾನ್ ಮಾಡುವ ನಿರ್ಧಾರವನ್ನು ಖಂಡಿಸಿದ್ದಾರೆ. ಮತ್ತೆ ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿ ಬಾರಿ ಚರ್ಚೆಯಾಗುತ್ತಲೇ ಇರುತ್ತೆ. ಸುಮಾರು 9 ವರ್ಷಗಳ ಬಳಿಕ ಮತ್ತೆ ಪಾಕಿಸ್ತಾನದ ನಟರು ಭಾರತೀಯ ಸಿನಿಮಾಗಳ ಕಡೆಗೆ ಮುಖ ಮಾಡಿದ್ದರು. ಪಹಲ್ಗಾಮ್ ಉಗ್ರರ ದಾಳಿ ಮತ್ತೆ ಪಾಕ್ ಸ್ಟಾರ್‌ಗಳಿಗೆ ಉರುಳಾಗಿವೆ. ಇಂತಹ ಘಟನೆಗಳನ್ನು ಖಂಡಿಸಿದರೂ, ಭಯೋತ್ಪಾದಕರನ್ನು ಪಾಕಿಸ್ತಾನ ಪೋಷಿಸುವುದನ್ನ ಬಿಡುವವರೆಗೂ ಅಲ್ಲಿನ ಕಲಾವಿದರಿಗೆ ಉಳಿಗಾಲವಿಲ್ಲ.

More from Filmibeat

English summary
India Pak Tension: Pakistani actors Indian movies may get cancelled
Read more about: india pakistan war
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X