For Quick Alerts
    ALLOW NOTIFICATIONS  
    For Daily Alerts

    ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ತಕಧಿಮಿತಾ.!

    By Harshitha
    |

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿ ನಟಿ ಸೋನಂ ಕಪೂರ್ ಇದ್ದರೆ, ಇತ್ತ ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ಮಹೋತ್ಸದ ನಿಮಿತ್ತ ಇಡೀ ಬಾಲಿವುಡ್ ಸಂಭ್ರಮಿಸಿದೆ.

    ಸೋನಂ ಕಪೂರ್ ರವರ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಕುಣಿದು ಕುಪ್ಪಳಿಸಿದ್ದರು. ಹಾಗೇ, ರಿಸೆಪ್ಷನ್ ಪಾರ್ಟಿಯಲ್ಲೂ ಬಾಲಿವುಡ್ ಸ್ಟಾರ್ ಗಳ ತಕಧಿಮಿತಾ ಜೋರಾಗಿಯೇ ಇತ್ತು.

    ಮಗಳು ಮದುವೆ ಆಗಿರುವ ಖುಷಿಯಲ್ಲಿ ತಂದೆ ಅನಿಲ್ ಕಪೂರ್ ರಿಸೆಪ್ಷನ್ ಪಾರ್ಟಿಯಲ್ಲಿ ಸಖತ್ತಾಗಿಯೇ ಸ್ಟೆಪ್ ಹಾಕಿದ್ದಾರೆ. ಜೊತೆಗೆ ರಣ್ವೀರ್ ಸಿಂಗ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅರ್ಜುನ್ ಕಪೂರ್ ಕೂಡ ಕಮ್ಮಿಯೇನಿಲ್ಲ.

    ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ಸ್ಟಾರ್ ಗಳು ಡ್ಯಾನ್ಸ್ ಮಾಡಿರುವ ವಿಡಿಯೋಗಳು ಇಲ್ಲಿವೆ, ನೋಡಿರಿ...

    ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದ ಜೋಡಿ

    ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದ ಜೋಡಿ

    ಆಗಷ್ಟೇ ಮದುವೆ ಆದ ಖುಷಿಯಲ್ಲಿದ್ದ ಸೋನಂ ಕಪೂರ್-ಆನಂದ್ ಅಹುಜಾ, ಬೃಹತ್ ಕೇಕ್ ಕತ್ತರಿಸಿ ರಿಸೆಪ್ಷನ್ ಪಾರ್ಟಿಗೆ ಚಾಲನೆ ನೀಡಿದರು. ಅಂದ್ಹಾಗೆ, ರಿಸೆಪ್ಷನ್ ಪಾರ್ಟಿ ನಿನ್ನೆ ಸಂಜೆ ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ನಡೆಯಿತು.

    ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರುಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

    ಕುಣಿದು ಕುಪ್ಪಳಿಸಿದ ತಂದೆ ಅನಿಲ್ ಕಪೂರ್

    ಪುತ್ರಿ ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ತಂದೆ ಅನಿಲ್ ಕಪೂರ್ 'ತೂನೆ ಮಾರಿ ಎಂಟ್ರಿಯಾ..' ಹಾಡಿಗೆ ಕುಣಿದು ಕುಪ್ಪಿಸಿದರು. ಜೊತೆಗೆ ಅರ್ಜುನ್ ಕಪೂರ್ ಕೂಡ ಸ್ಟೆಪ್ ಹಾಕಿದರು.

    ಕರಣ್ ಜೋಹರ್ ಡ್ಯಾನ್ಸ್

    'ಪ್ರೇಮ್ ರತನ್ ಧನ್ ಪಾಯೋ' ಹಾಡಿಗೆ ಫಿಲ್ಮ್ ಮೇಕರ್ ಕರಣ್ ಜೋಹರ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

    ಸೊಂಟ ಬಳುಕಿಸಿದ ಸೋನಂ

    ತಾರೆಯರ ಮಧ್ಯೆ ವಧು ಸೋನಂ ಕಪೂರ್ ಕೂಡ ಸೊಂಟ ಬಳುಕಿಸಿದರು.

    ರಣ್ವೀರ್ ಸಿಂಗ್-ಅನಿಲ್ ಕಪೂರ್ ಜುಗಲ್ಬಂದಿ

    'ಬಚ್ನಾ ಏ ಹಸೀನೋ' ಹಾಡಿಗೆ ರಣ್ವೀರ್ ಸಿಂಗ್ ಹಾಗೂ ಅನಿಲ್ ಕಪೂರ್ ನಡುವೆ ಜುಗಲ್ಬಂದಿ ನಡೆಯಿತು.

    ಸಲ್ಮಾನ್-ಶಾರುಖ್ ಮಸ್ತಿ

    'ಟನ್ ಟಾನಾ ಟನ್, ಟನ್ ಟನ್ ಟಾರಾ' ಹಾಡಿಗೆ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅನಿಲ್ ಕಪೂರ್ ಸ್ಟೆಪ್ ಹಾಕಿದರು.

    ಆನಂದ್ ಜೊತೆ ರಣ್ವೀರ್

    ಪಾರ್ಟಿಯಲ್ಲಿ 'ವರ' ಆನಂದ್ ಅಹುಜಾ ರನ್ನ ಎತ್ತಿಕೊಂಡು, ರಣ್ವೀರ್ ಸಿಂಗ್ ಗಿರ ಗಿರ ತಿರುಗಿಸಿಬಿಟ್ಟರು.

    ಲೈಲಾ ಓ ಲೈಲಾ

    'ಲೈಲಾ ಓ ಲೈಲಾ' ಹಾಡಿಗೆ ಶಾರುಖ್ ಖಾನ್ ಹಾಕಿರುವ ಸ್ಟೆಪ್ ಗಳನ್ನ ನೀವೂ ನೋಡಿ...

    ಮಿಲ್ ಗಯಾ...

    'ಮಿಲ್ ಹಿ ಗಯಾ..' ಹಾಡಿಗೆ ಶಾರುಖ್, ರಣ್ವೀರ್ ಸಿಂಗ್ ಹಾಗೂ ಅನಿಲ್ ಕಪೂರ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದರು.

    ಸುನೀತಾ ಕಪೂರ್ ಗಾಗಿ ಹಾಡು

    ಸೋನಂ ಕಪೂರ್ ತಾಯಿ ಸುನೀತಾ ಕಪೂರ್ ಗಾಗಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದು ಹಾಡು ಹಾಡಿದರು. ಅದನ್ನ ನೀವೇ ನೋಡಿ...

    English summary
    Bollywood Actor Shahrukh Khan, Salman Khan, Anil Kapoor, Ranveer Singh, Arjun Kapoor and other Celebrities danced at Sonam's reception party. Watch videos.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X