ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ವಧು ಸೋನಂ ಕಪೂರ್
ಹೇಳಿ ಕೇಳಿ ನಟಿ ಸೋನಂ ಕಪೂರ್ ಉತ್ತಮ ಡ್ಯಾನ್ಸರ್. ತೆರೆಮೇಲೆ ಮಸ್ತ್ ಮಸ್ತಾಗಿ ಸ್ಟೆಪ್ ಹಾಕುವ ಸೋನಂ ಕಪೂರ್ ನಿಜ ಜೀವನದಲ್ಲಿ ಡ್ಯಾನ್ಸ್ ಮಾಡದೇ ಇರ್ತಾರಾ.? ಅದೂ, ತಮ್ಮ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ.!?
ದೀರ್ಘಕಾಲದ ಗೆಳೆಯ ಉದ್ಯಮಿ ಆನಂದ್ ಅಹುಜಾ ಕೈಹಿಡಿಯುತ್ತಿದ್ದಾರೆ ಬಾಲಿವುಡ್ ನಟಿ ಸೋನಂ ಕಪೂರ್. ತಮ್ಮ ಲವ್ ಸ್ಟೋರಿಗೆ ಇಂದು ಅಧಿಕೃತ ಮುದ್ರೆ ಬೀಳಲಿರುವುದರಿಂದ, ಸೋನಂ ಅಂತೂ ಫುಲ್ ಖುಷಿಯಾಗಿದ್ದಾರೆ.
ನಿನ್ನೆಯಷ್ಟೇ, ಮುಂಬೈನ ಸನ್ ಟೆಕ್, ಸಿಗ್ನೇಚರ್ ಐಲ್ಯಾಂಡ್ ನಲ್ಲಿ ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ತಮ್ಮ ಇನಿಯ ಆನಂದ್ ಅಹುಜಾ ಜೊತೆಗೆ ನಟಿ ಸೋನಂ ಕಪೂರ್ ಹೆಜ್ಜೆ ಹಾಕಿದರು.
ಸೋನಂ ಕಪೂರ್-ಆನಂದ್ ಅಹುಜಾ ಸಂಗೀತ ಕಾರ್ಯಕ್ರಮದ ವಿಡಿಯೋಗಳು ಇಲ್ಲಿವೆ ನೋಡಿ...
ಸೊಂಟ ಬಳುಕಿಸಿದ ಸೋನಂ ಕಪೂರ್
ಸಂಗೀತ ಕಾರ್ಯಕ್ರಮದಲ್ಲಿ ಪ್ರಿಯಕರ ಆನಂದ್ ಅಹುಜಾ ಮುಂದೆ ನಟಿ ಸೋನಂ ಕಪೂರ್ ಸೊಂಟ ಬಳುಕಿಸಿದ್ದು ಹೀಗೆ...
ಅನಿಲ್ ಕಪೂರ್ ಭಲ್ಲೇ ಭಲ್ಲೇ
ಮಗಳು ಸೋನಂ ಕಪೂರ್ ಮದುವೆ ಆಗುತ್ತಿರುವ ಖುಷಿಯಲ್ಲಿ ತಂದೆ ಅನಿಲ್ ಕಪೂರ್ ಪಂಜಾಬಿ ಬೀಟ್ ಗೆ ಬಾಂಗ್ರಾ ಸ್ಟೆಪ್ ಹಾಕಿದರು.
ಸ್ಟೆಪ್ ಹಾಕಿದ ಸೋನಂ
ಆಗಷ್ಟೇ ಕೈಮೇಲೆ ಮೆಹಂದಿ ಚಿತ್ತಾರ ಬಿಡಿಸಿಕೊಂಡು ಬಂದ ಸೋನಂ ಕಪೂರ್, ಆನಂದ್ ಅಹುಜಾ ಜೊತೆಗೆ ಡ್ಯಾನ್ಸ್ ಮಾಡಿದ್ದು ಹೀಗೆ...
ರೋಮ್ಯಾಂಟಿಕ್ ಜೋಡಿ
ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ರೋಮ್ಯಾಂಟಿಕ್ ಜೋಡಿ ಅನ್ನೋದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ.
ಒಟ್ಟಿಗೆ ಡ್ಯಾನ್ಸ್ ಮಾಡಿದ ನವ ಜೋಡಿ
ಹಿಂದಿ ಹಾಡೊಂದಕ್ಕೆ ನವ ಜೋಡಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಒಟ್ಟಿಗೆ ಡ್ಯಾನ್ಸ್ ಮಾಡಿದರು
ಡ್ಯಾನ್ಸ್ ಮಾಡಿದ ತಾರೆಯರು
ಸಂಗೀತ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ಕರಣ್ ಜೋಹರ್ ಹಾಗೂ ಶಿಲ್ಪಾ ಶೆಟ್ಟಿ ಕೂಡ ಡ್ಯಾನ್ಸ್ ಮಾಡಿದರು.
ಕ್ಯೂಟ್ ಜೋಡಿ
ವರ್ಷಗಳ ಕಾಲ ಪ್ರೀತಿಯ ಅಮಲಿನಲ್ಲಿ ತೇಲುತ್ತಿದ್ದ ಈ ಜೋಡಿ ಇಂದು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.


Click it and Unblock the Notifications











