'RCB Vs ಚೆನ್ನೈ' ಪಂದ್ಯಕ್ಕೂ ಮುನ್ನ ಏನಿದು ಧೋನಿ ವಿಡಿಯೋ ಕಥೆ? ಬಾಬಿ ಡಿಯೋಲ್‌ಗೆ ಡಿಲೀಟ್ ಮಾಡಿ ಅಂತಿರೋದ್ಯಾಕೆ?
ಇಂದಿನಿಂದ (ಮಾರ್ಚ್ 22) 2024ರ ಐಪಿಎಲ್ ಪಂದ್ಯಗಳು ಆರಂಭ ಆಗುತ್ತಿವೆ. ಮೊದಲ ದಿನವೇ ಹೈ ವೋಲ್ಟೇಜ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಎಲ್ಲರೂ ಎರಡು ಫೇವರಿಟ್ ತಂಡಗಳ ಕಾಳಗವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಈ ಮಧ್ಯೆ ಚೆನ್ನೈ ಸೂಪರ್‌ಕಿಂಗ್ಸ್ ಸ್ಟಾರ್ ಆಟಗಾರ ಎಂ ಎಸ್ ಧೋನಿ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಇದು ಚೆನ್ನೈ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರಾಸೆ ಮೂಡಿಸಿದೆ. ಆದರೆ, ಈ ಬಾರಿ ಐಪಿಎಲ್‌ನಲ್ಲಿ ಎಂ ಎಸ್ ಧೋನಿ ಮೈದಾನಕ್ಕೆ ಇಳಿಯುತ್ತಾರೆ ಅನ್ನೋದು ಅಷ್ಟೇ ಸಮಾಧಾನ ತಂದಿದೆ. ಈ ಎಲ್ಲಾ ಸುದ್ದಿಗಳ ಮಧ್ಯೆ ಎಂ ಎಸ್ ಧೋನಿ ವಿಡಿಯೋ ಬಗೆಗಿನ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ಬಾಲಿವುಡ್ ನಟ ಬಾಬಿ ಡಿಯೋಲ್ ಹಾಗೂ ಎಂ ಎಸ್ ಧೋನಿ ನಡುವೆ ಆ ವಿಡಿಯೋ ಬಗ್ಗೆ ಬಹಿರಂಗವಾಗಿಯೇ ಚರ್ಚೆ ನಡೆಯುತ್ತಿದೆ. ಧೋನಿ ಬೇರೆ ದಯವಿಟ್ಟು ತನ್ನ ವಿಡಿಯೋ ಡಿಲೀಟ್ ಮಾಡಿ, ನಾಚಿಕೆಯಾಗುತ್ತಿದೆ ಅಂತ ಬಾಬಿ ಡಿಯೋಲ್ ಬಳಿ ದುಂಬಾಲು ಬಿದ್ದಿದ್ದಾರಂತೆ. ಅದನ್ನೂ 'ಅನಿಮಲ್' ನಟ ಬಾಬಿ ಡಿಯೋಲ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವಿನ ವಿಡಿಯೋ ಕಹಾನಿ ಏನು? ಧೋನಿಗೆ ಬಾಬಿ ಡಿಯೋಲ್ ಬ್ಲಾಕ್ ಮೇಲ್ ಮಾಡುತ್ತಿರೋದೇಕೆ? ತಿಳಿಯಲು ಮುಂದೆ ಓದಿ..
ಅಷ್ಟಕ್ಕೂ ಬಾಬಿ ಡಿಯೋಲ್ ಹಂಚಿಕೊಂಡು ಒಂದು ಟ್ವೀಟ್‌ನಿಂದ ಧೋನಿಯ ಈ ವಿಡಿಯೋ ಮ್ಯಾಟರ್ ಶುರುವಾಗಿತ್ತು. ಅದರಲ್ಲಿ ಎಂ ಎಸ್ ಧೋನಿ 'ಅನಿಮಲ್' ನಟನಿಗೆ "ಬಾಬಿ ತನ್ನ ಆ ವಿಡಿಯೋವನ್ನು ದಯವಿಟ್ಟು ಡಿಲೀಟ್ ಮಾಡು.. ತುಂಬಾನೇ ನಾಚಿಕೆ ಆಗುತ್ತಿದೆ" ಎಂದು ಮೆಸೇಜ್ ಕಳಿಸಿದ್ದರು. ಅದನ್ನು ಬಾಬಿ ಡಿಯೋಲ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಬಾಬಿ ಡಿಯೋಲ್ ಟ್ವೀಟ್ ಶೇರ್ ಮಾಡುತ್ತಿದ್ದಂತೆ ಎಂ ಎಸ್ ಧೋನಿ ಅಭಿಮಾನಿಗಳು ವಿಡಿಯೋವನ್ನು ಶೇರ್ ಮಾಡುವಂತೆ ದುಂಬಾಲು ಬಿದ್ದಿದ್ದರು. ಆ ಬಳಿಕ ಬಾಬಿ ಡಿಯೋಲ್ ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿತ್ತು? ಅನ್ನುತ್ತೀರಾ?
ಬಾಬಿ ಡಿಯೋಲ್ ಆ ವಿಡಿಯೋವನ್ನು ಶೇರ್ ಮಾಡಿಕೊಂಡು "ಬಹುಬೇಡಿಕೆಯ ಮೇರೆಗೆ.." ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಅದೊಂದು ಗೇಮ್ ಜಾಹೀರಾತಿನ ವಿಡಿಯೋ. ಅದರಲ್ಲಿ ವಿಡಿಯೋ ಕಾಲ್ ಇಬ್ಬರೂ ಸಂಭಾಷಣೆ ನಡೆಯುತ್ತೆ. ಈ ವೇಳೆ ಆ ಗೇಮ್‌ನಲ್ಲಿ ಸೋತರೆ ನೀವು ಹೇಳಿದಂತೆ ಮಾಡುತ್ತೇನೆ ಎಂದು ಎಂ ಎಸ್ ಧೋನಿ ಹೇಳುತ್ತಾರೆ. ನಿರೀಕ್ಷೆಯಂತೆ ಸೋತು ಬಾಬಿ ಡಿಯೋಲ್ ಅನಿಮಲ್ ಸಿನಿಮಾದಲ್ಲಿ ಹಾಕಿದ ಸ್ಟೆಪ್ಸ್‌ಗೆ ಧೋನಿ ಹೆಜ್ಜೆ ಹಾಕುತ್ತಾರೆ. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇಂದು (ಮಾರ್ಚ್ 22) ನಡೆಯುವ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಎಂ ಎಸ್ ಧೋನಿ ಸಾಮಾನ್ಯ ಆಟಗಾರನಂತೆ ಕಣಕ್ಕೆ ಇಳಿಯುತ್ತಿದ್ದಾರೆ. ಯುವ ಆಟಗಾರ ರಿತುರಾಜ್ ಗಾಯಕ್ವಾಡ್ ಈ ಬಾರಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಈ ಕಾರಣಕ್ಕೆ ಇಂದಿನ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ನಡುವಿನ ಪಂದ್ಯ ವೀಕ್ಷಕರಿಗೆ ಸಖತ್ ಮನರಂಜನೆ ನೀಡಲಿದೆ.


Click it and Unblock the Notifications











