IPL 2025: ಐಪಿಎಲ್ ತಂಡ ಖರೀದಿಗೆ ಶಾರುಖ್, ಜೂಹಿ ಚಾವ್ಲಾ, ಪ್ರೀತಿ ಜಿಂಟಾ ಹೂಡಿಕೆ ಮಾಡಿದ್ದು ಎಷ್ಟು ಕೋಟಿ?

ಐಪಿಎಲ್ 2025 ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಮೊದಲ ಪಂದ್ಯವೇ ಆರ್‌ಸಿಬಿ (RCB) ಹಾಗೂ ಕೆಕೆಆರ್ (KKR) ತಂಡಗಳ ಮಧ್ಯೆ ನಡೆಯಲಿದೆ. ಮೊದಲ ಪಂದ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿಯಾಗಿ ಅಭ್ಯಾಸ ನಡೆಸಿವೆ.

ನಾಳೆ (ಮಾರ್ಚ್ 22, 2025) ಯಿಂದ ಇಂಡಿಯನ್ ಪ್ರೀಮಿಯಲ್ ಲೀಗ್ (IPL) ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಇದು 18ನೇ ಐಪಿಎಲ್ ಸೀಸನ್. ಹೀಗಾಗಿ ಯಾವ ತಂಡ ಈ ಬಾರಿಗೆ ಪಂದ್ಯವನ್ನು ಗೆಲ್ಲಬಹುದು ಅಂತ ಲೆಕ್ಕಾಚಾರಗಳು ಶುರುವಾಗಿವೆ. ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 2025 ಮೊದಲ ಪಂದ್ಯ ನಡೆಯಲಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಜೂಹಿ ಚಾವ್ಲಾ ಮಾಲೀಕತ್ವದ ಕೆಕೆಆರ್ ತಂಡ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಆರ್‌ಸಿಬಿ ತಂಡದೊಂದು ಸೆಣೆಸಾಡಲಿದೆ.

IPL 2025 how many crores Shah Rukh Khan Juhi Chawla Preity Zinta spent to buy Ipl teams

ಕಳೆದ ಬಾರಿ ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಐಪಿಎಲ್‌ನಲ್ಲಿ ಬಾಲಿವುಡ್‌ ಮಂದಿ ಖರೀದಿಸಿದ ತಂಡಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇವೆ. ಹಾಗಿದ್ದರೆ, ಶಾರುಖ್ ಖಾನ್, ಜೂಹಿ ಚಾವ್ಲಾ, ಪ್ರೀತಿ ಜಿಂಟಾ ಎಷ್ಟು ಕೋಟಿ ಕೊಟ್ಟು ಐಪಿಎಲ್ ತಂಡವನ್ನು ಖರೀದಿ ಮಾಡಿದ್ದರು? ಲಾಭ ನಷ್ಟದ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಾರುಖ್ ಖಾನ್-ಜೂಹಿ ಚಾವ್ಲಾ (KKR)

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ಕ್ರಿಕೆಟ್ ಕ್ಷೇತ್ರದಲ್ಲೂ ಯಶಸ್ಸು ಕಂಡಿದ್ದಾರೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಯಶಸ್ಸು ಕಂಡ ನಟನೀತ. ಇವರೊಂದಿಗೆ ಸಹ ಮಾಲೀಕರಾಗಿರುವ ಜೂಹಿ ಚಾವ್ಲಾ ಕೂಡ ಈ ಸಕ್ಸಸ್‌ನ ಪಾಲುದಾರರು. 2008ರಲ್ಲಿ ಐಪಿಎಲ್ ಹುಟ್ಟಿಕೊಂಡಾಗ ಶಾರುಖ್ ಖಾನ್, ಜೂಹಿ ಚಾವ್ಲಾ ಹಾಗೂ ಅವರ ಪತಿ ಜೈ ಮೆಹ್ತಾ ಬೃಹತ್ ಮೊತ್ತ ಕೊಟ್ಟು ಕೆಕೆಆರ್ ಫ್ರಾಂಚೈಸಿಯನ್ನು ಖರೀದಿ ಮಾಡಿದ್ದರು. ಅಲ್ಲಿಂದ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬರುತ್ತಿದೆ.

ಐಪಿಎಲ್ ತಂಡಗಳ ಪೈಕಿ ಕೆಕೆಆರ್ ಅತೀ ಹೆಚ್ಚು ಯಶಸ್ಸು ಕಂಡಿರುವ ಮೂರು ತಂಡಗಳಲ್ಲಿ ಒಂದು. ಕಳೆದ ಸೀಸನ್‌ನಲ್ಲಿ ಐಪಿಎಲ್‌ ಕಿರೀಟವನ್ನು ಮುಡಿಗೇರಿಸಿಕೊಂಡು ಟಾಪ್‌ನಲ್ಲಿದೆ. ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಕೆಕೆಆರ್ ಅನ್ನು 570 ಕೋಟಿ ರೂಪಾಯಿಗೆ ಸಹಭಾಗಿತ್ವದಲ್ಲಿ ತಂಡವನ್ನು ಖರೀದಿ ಮಾಡಿತ್ತು ಎಂದು ಫಿಲ್ಮ್ ಫೇರ್ ವರದಿ ಮಾಡಿದೆ. ಇದರಲ್ಲಿ ಶಾರುಖ್ ಖಾನ್ ಶೇರ್ ಶೇ.55ರಷ್ಟು ಇದ್ದರೆ, ಜೂಹಿ ಹಾಗೂ ಅವರ ಪತಿಯ ಪಾಲು ಶೇ.45ರಷ್ಟು ಇದೆ ಎಂದು ವರದಿಯಾಗಿದೆ.\

IPL 2025 how many crores Shah Rukh Khan Juhi Chawla Preity Zinta spent to buy Ipl teams

ಇನ್ನು 570 ಕೋಟಿ ರೂಪಾಯಿ ಕೂಡಿಕೆ ಮಾಡಿರುವ ಶಾರುಖ್ ಖಾನ್ ಹಾಗೂ ಜೂಹಿಗೆ ಐಪಿಎಲ್‌ನಿಂದ ಎಷ್ಟು ಹಣ ಗಳಿಸಬಹುದು? ಮೊತ್ತ ಎಷ್ಟು ಅಂತ ಕೇಳಿದರೆ ಅಚ್ಚರಿ ಆಗಬಹುದು. ಮನಿ ಕಂಟ್ರೋಲ್ ವರದಿ ಪ್ರಕಾರ, ಕೆಕೆಆರ್‌ನಿಂದ 280 ಕೋಟಿ ರೂಪಾಯಿ ಹಣವನ್ನು ಗಳಿಸುತ್ತಾರೆ. ಕಳೆದ 18 ಸೀಸನ್‌ನಿಂದ ಇವರು ಎಷ್ಟು ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ ಅನ್ನೋದು ಸದ್ಯಕ್ಕೆ ಲೆಕ್ಕಕ್ಕೆ ಸಿಕ್ಕಿಲ್ಲ.

ಪ್ರೀತಿ ಜಿಂಟಾ-ಪಂಜಾಬ್ ಕಿಂಗ್ಸ್

ಮತ್ತೊಬ್ಬ ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡ ಐಪಿಎಲ್‌ ತಂಡವನ್ನು ಖರೀದಿ ಮಾಡಿದ್ದರು. 2008ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸಹಭಾಗಿತ್ವದಲ್ಲಿ ಖರೀದಿ ಮಾಡಿದ್ದರು. ಪ್ರೀತಿ ಜಿಂಟಾ ಆರಂಭದಲ್ಲಿ 35 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಇವರೊಂದಿಗೆ ನೆಸ್ ವಾಡಿಯಾ, ಕರಣ್ ಪೌಲ್, ಮೋಹಿತ್ ಬರ್ಮನ್ ಕೈ ಜೋಡಿಸಿದ್ದರು. ಈಗಾಗಲೇ ವರದಿಯಾಗಿರುವ ಪ್ರಕಾರ, ಪ್ರೀತಿ ಜಿಂಟಾ ಕೈಯಲ್ಲಿ ಶೇ.23ರಷ್ಟು ಶೇರ್‌ಗಳು ಇವೆ.

ಪ್ರತಿ ಸೀಸನ್‌ನಿಂದ ಪಂಜಾಬ್ ಕಿಂಗ್ 120 ರಿಂದ 150 ಕೋಟಿ ರೂಪಾಯಿ ಹಣ ಗಳಿಸುತ್ತೆ. ಇದರಲ್ಲಿ ಬ್ರ್ಯಾಡಿಂಗ್ ಕೂಡ ಸೇರಿಕೊಂಡಿದೆ. ಈ ಮೊತ್ತದಲ್ಲಿ ಪ್ರೀತಿ ಜಿಂಟಾ ಶೇರ್ ಅಂತ 28 ರಿಂದ 30 ಕೋಟಿ ರೂಪಾಯಿ ಗಳಿಸುತ್ತಾರೆ ಎಂದು ವರದಿಗಳಾಗಿದೆ. ಈ ಬಾರಿ ಪ್ರೀತಿ ಜಿಂಟಾ ಉತ್ತಮ ತಂಡವನ್ನೇ ಕಟ್ಟಿದ್ದಾರೆ. ಶೇ.90ರಷ್ಟು ಅವರಿಗೆ ಬೇಕಿದ್ದ ಆಟಗಾರರೇ ಸಿಕ್ಕಿದ್ದಾರೆ ಎಂದು ಹೇಳಲಾಗಿತ್ತು.

ಇನ್ನು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಐಪಿಎಲ್ 18ನೇ ಸೀಸನ್‌ ಗ್ರ್ಯಾಂಡ್ ಓಪನಿಂಗ್ ಆಗುತ್ತಿದೆ. ಇದರಲ್ಲಿ ಬಾಲಿವುಡ್ ದಿಶಾ ಪಟಾನಿ, ಗಾಯಕಿ ಶ್ರೇಯಾ ಘೋಷಾಲ್, ಪಂಜಾಬಿ ಕಲಾವಿದ ಕರಣ್ ಔಜ್ಲಾ ಸೇರಿದಂತೆ ಸೆಲೆಬ್ರಿಟಿಗಳ ದೊಡ್ಡ ತಂಡವೇ ಸೇರಲಿದೆ. ಹಾಗೇ ಕೆಕೆಆರ್ ತಂಡ ಮಾಲೀಕ ಹಾಗೂ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಈಗಾಗಲೇ ಕೊಲ್ಕತ್ತಾಗೆ ಆಗಮಿಸಿದ್ದು, ಪ್ರಮುಖ ಆಕರ್ಷಣೆಯಾಗಿದ್ದಾರೆ.

More from Filmibeat

English summary
IPL 2025: How many crores Shah Rukh Khan Juhi Chawla Preity Zinta spent to buy Ipl teams?
Read more about: ipl 2025 shah rukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X