"ಮುಖ ತೋರಿಸುವ ಯೋಗ್ಯತೆಯಿಲ್ಲ.. ಕಾಮೆಂಟ್ ಮಾಡೋ ಹಕ್ಕಿಲ್ಲ"; ಪ್ರೀತಿ ವಿರುದ್ಧ ವಿರಾಟ್ ಕೊಹ್ಲಿ ಫ್ಯಾನ್ಸ್ ಗರಂ!
ಬಾಲಿವುಡ್ ನಟಿ ಪ್ರೀತಿ ಜಿಂಟಾ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕರು ಕೂಡ ಹೌದು. ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಪ್ರೀತಿ ಜಿಂಟಾ ಐಪಿಎಲ್ ಪಂದ್ಯಗಳು ಆರಂಭ ಆಗುವ ವೇಳೆ ಭಾರತದಲ್ಲಿ ಪ್ರತ್ಯಕ್ಷ ಆಗುತ್ತಾರೆ. ಅದು ಬಿಟ್ಟರೆ, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಪ್ರೀತಿ ಜಿಂಟಾ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಸೆಷನ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾಡಿದ ಕಾಮೆಂಟ್ ಸಂಚಲನ ಸೃಷ್ಟಿಸಿತ್ತು.
ಕಳೆದೊಂದು ದಿನದಿಂದ ವಿರಾಟ್ ಕೊಹ್ಲಿ ಬಗ್ಗೆ ಪ್ರೀತಿ ಜಿಂಟಾ ಮಾಡಿದ ಕಾಮೆಂಟ್ ಬಗ್ಗೆನೇ ಈಗ ಚರ್ಚೆಯಾಗುತ್ತಿದೆ. ಅದಕ್ಕೆ ಪ್ರೀತಿ ಜಿಂಟಾ ಕೂಡ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಆದರೂ ಬಿಡದ ವಿರಾಟ್ ಕೊಹ್ಲಿ ಅಭಿಮಾನಿಗಳು ಅವರನ್ನ ಕಾಡುತ್ತಿದ್ದಾರೆ. ಅಸಲಿಗೆ ವಿರಾಟ್ ಕೊಹ್ಲಿಯ ಹೆಸರನ್ನು ಪ್ರೀತಿ ಜಿಂಟಾ ತೆಗೆದಿದ್ದು ಯಾಕೆ? ಅದ್ಯಾಕೆ ಈಗ ಚರ್ಚೆಯಾಗುತ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನಟಿ ಪ್ರೀತಿ ಜಿಂಟಾ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಹೋಗಿ ವಿರಾಟ್ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊದಲಿಗೆ ಪ್ರೀತಿ ಜಿಂಟಾ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಮಾತಾಡಿದ್ದರು. ಮದುವೆ ಬಳಿಕ ವಿದೇಶದಲ್ಲಿ ನೆಲೆಸಿದ್ದರ ಬಗ್ಗೆ ಮಾತಾಡಿದ್ದಾರೆ. ಹಾಗೇ ವಿದೇಶದಲ್ಲಿ ಇದ್ದರೂ ತಾಯ್ನಾಡು ಭಾರತದ ನೆನಪಾಗುತ್ತಿರುತ್ತೆ ಅಂತ ಹೇಳಿಕೊಂಡಿದ್ದಾರೆ. ಈ ವೇಳೆ ಅವರ ಮುಂದಿನ ಸಿನಿಮಾ ಬಗ್ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಅದಕ್ಕೆ ಪ್ರೀತಿ ಜಿಂಟಾ ವಿರಾಟ್ ಕೊಹ್ಲಿ ಹೆಸರನ್ನು ಬಳಸಿದ್ದರು.
ಪ್ರೀತಿ ಜಿಂಟಾ 'ಲಾಹೋರ್ 1947' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಮಿರ್ ಖಾನ್ ಹಾಗೂ ರಾಜ್‌ಕುಮಾರ್ ಸಂತೋಷಿ ಈ ಸಿನಿಮಾಗೆ ಹಣವನ್ನು ಹೂಡುತ್ತಿದ್ದು, ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಸಂಘೀಗಳನ್ನು ಖುಷಿ ಪಡಿಸುತ್ತಿದ್ದಾರೆ ಎಂದು ಎಂದು ಟ್ರೋಲ್ ಪೇಜ್ ಒಂದು ಕಾಮೆಂಟ್ ಮಾಡಿತ್ತು. ಈ ಪೇಜ್‌ನ ಡಿಪಿಯಲ್ಲಿ ವಿರಾಟ್ ಕೊಹ್ಲಿ ಫೋಟೊ ಇತ್ತು. ಅದಕ್ಕೆ ಪ್ರೀತಿ ಜಿಂಟಾ ಖಾರವಾಗಿ ಪ್ರತಿಕ್ರಿಯಿಸಿದ್ದರು.

"ತನ್ನ ಮುಖ ತೋರಿಸಲು ಯೋಗ್ಯತೆ ಇಲ್ಲದವರು ವಿರಾಟ್ ಕೊಹ್ಲಿ ಫೋಟೊವನ್ನು ಬಳಸುತ್ತಿದ್ದಾರೆ. ಅವರಿಗೆ ಕಾಮೆಂಟ್ ಮಾಡುವ ಯಾವುದೇ ಹಕ್ಕು ಇಲ್ಲ" ಎಂದು ಪ್ರೀತಿ ಜಿಂಟಾ ಆ ಕಾಮೆಂಟ್‌ಗೆ ತಿರುಗೇಟು ನೀಡಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹೆಸರನ್ನು ತೆಗೆದುಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಪ್ರೀತಿ ಜಿಂಟಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ಮತ್ತೆ ಸಮಜಾಯಿಷಿಯನ್ನು ಕೊಡಬೇಕಾಯ್ತು.


Click it and Unblock the Notifications











