51ನೇ ರ್‍ಯಾಂಕ್ ಪಡೆದಿದ್ದ ಈ IPS ಅಧಿಕಾರಿ ಈಗ ಬಾಲಿವುಡ್ ನಟಿ; ಯಾರಿವರು? ಹಿನ್ನೆಲೆ ಏನು ಗೊತ್ತೇ?
ಐಎಎಸ್, ಐಪಿಎಸ್ ಆಗೋದು ಅಷ್ಟು ಸುಲಭದ ಮಾತಲ್ಲ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಇದೂ ಕೂಡ ಒಂದು. ದೇಶದ ಉದ್ದಗಲಕ್ಕೂ ಲಕ್ಷಾಂತರ ಮಂದಿರ ಈ ಪರೀಕ್ಷೆ ಬರೆಯುತ್ತಾರೆ. ಕೆಲವರು ಮೊದಲ ಬಾರಿಗೆ ತೇರ್ಗಡೆಯಾಗುತ್ತಾರೆ. ಇನ್ನು ಕೆಲವರು ಮೂರು ನಾಲ್ಕನೇ ಬಾರಿ ಪರೀಕ್ಷೆ ಬರೆದು ತೇರ್ಗಡೆಯಾಗುತ್ತಾರೆ.
ಐಎಎಸ್, ಐಪಿಎಸ್ ಅಧಿಕಾರಿಗಳಿಗೂ ಸಿನಿಮಾ ಪ್ರಪಂಚಕ್ಕೂ ಒಂದು ನಂಟು ಇರುತ್ತೆ. ಸಿನಿಮಾ ತಾರೆಯರೊಂದಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ಐಎಎಸ್ ಅಧಿಕಾರಿಯಾಗಿದ್ದು ಕೊಂಡೇ ಸಿನಿಮಾರಂಗಕ್ಕೂ ಕಾಲಿಟ್ಟ ಉದಾಹರಣೆಗಳಿವೆ. ಅದರಲ್ಲಿ ಇತ್ತೀಚೆಗಷ್ಟೇ ನಿಧನರಾಗಿದ್ದ ಮಾಜಿ ಐಎಎಸ್ ಅಧಿಕಾ ಶಿವರಾಂ ಹೆಸರು ಮೊದಲಿಗೆ ಬರುತ್ತೆ.

ಈಗ ಶಿವರಾಂ ಅವರ ಹಾದಿಯಲ್ಲಿಯೇ ಐಪಿಎಸ್ ಅಧಿಕಾರಿಯೊಬ್ಬರು ನಟನೆಗೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ. ಅಂದ್ಹಾಗೆ ಈ ಐಪಿಎಸ್ ಅಧಿಕಾರಿಯ ಹೆಸರು ಶಿಮ್ಲಾ ಪ್ರಸಾದ್. ಮಧ್ಯ ಪ್ರದೇಶದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈಗ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಅಂದ್ಹಾಗೆ, ಈ ಅಧಿಕಾರಿಯ ಹಿನ್ನೆಲೆಯೇನು? ಆ ಬಾಲಿವುಡ್ ಸಿನಿಮಾ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಈ ಐಪಿಎಸ್ ಅಧಿಕಾರಿ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಫೇಮಸ್. ತಮ್ಮ ಸುಂದರವಾದ ಫೋಟೊಗಳನ್ನು ಆಗಾಗ ಫೋಟೊ ಮಾಡುತ್ತಲೇ ಇರುತ್ತಾರೆ. ಐಪಿಎಸ್ ಅಧಿಕಾರಿಯಾಗಿದ್ದರೂ, ಕಲೆಯ ಬಗ್ಗೆ ಆಸ್ತಿ ಹೆಚ್ವಿದೆ. ಡ್ಯಾನ್ಸ್ ಮಾಡುವುದು ಅಂದರೆ, ಶಿಮ್ಲಾ ಪ್ರಸಾದ್‌ಗೆ ತುಂಬಾನೇ ಇಷ್ಟ. ಈಗ ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಬಾಲಿವುಡ್‌ನಲ್ಲಿ ನಿರ್ಮಾಣ ಆಗುತ್ತಿರುವ 'ದಿ ನರ್ಮದಾ ಸ್ಟೋರಿ' ಅನ್ನುವ ಸಿನಿಮಾದಲ್ಲಿ ಈ ಐಪಿಎಸ್ ಅಧಿಕಾರಿ ಶಿಮ್ಲಾ ಪ್ರಸಾದ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಘುಬಿರ್ ಯಾದವ್ ಹಾಗೂ ಮುಕೇಶ್ ತಿವಾರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಈಗ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಐಪಿಎಸ್ ಶಿಮ್ಲಾ ಪ್ರಸಾದ್ ಮೂಲ ಮಧ್ಯ ಪ್ರದೇಶದ ಭೋಪಾಲ್. ಇವರ ಅಮ್ಮ ಮೆಹರುನ್ನಿಸಾ ಪರ್ವೇಜ್ ಜನಪ್ರಿಯ ಸಾಹಿತಿ. 2005ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತಂದೆ ಭಗೀರಥ್ ಪ್ರಸಾದ್ ಇವರು ಐಎಎಸ್ ಅಧಿಕಾರಿ. ಶಿಮ್ಲಾ ಪ್ರಸಾದ್ ಕೂಡ ಐಪಿಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಸ್ ಆಗಬೇಕು ಅನ್ನುವುದಕ್ಕೆ ತಂದೆ ಪ್ರೇರಣೆ, ನಟಿಯಾಗಬೇಕು ಅನ್ನೋದಕ್ಕೆ ತಾಯಿ ಪ್ರೇರಣೆ ಎಂದು ಐಪಿಎಸ್ ಅಧಿಕಾರಿ ಹೇಳಿಕೊಂಡಿದ್ದಾರೆ.
ಶಿಮ್ಲಾ ಪ್ರಸಾದ್ ಮೊದಲ ಬಾರಿ ಬರೆದ ಪರೀಕ್ಷೆಯಲ್ಲಿ ಡಿಎಸ್‌ಪಿಯಾಗಿ ಆಯ್ಕೆಯಾಗಿದ್ದರು. ಬಳಿಕ 2010ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಮೊದಲ ಹೆಜ್ಜೆಯಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 51ನೇ ರ್‍ಯಾಂಕ್ ಪಡೆದಿದ್ದರು. ಆಗ ಅವರಿಗೆ ಕೇಲವ 22 ವರ್ಷ ವಯಸ್ಸಾಗಿತ್ತು ಅಷ್ಟೇ. ಈಗ ಈ ಐಪಿಎಸ್ ಅಧಿಕಾರಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ.
'ದಿ ನರ್ಮದಾ ಸ್ಟೋರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸತ್ಯ ಘಟನೆಗಳನ್ನು ಆಧರಿಸಿದ ಈ ಸಿನಿಮಾ ಆಗಿದ್ದು, ಮಧ್ಯ ಪ್ರದೇಶದಲ್ಲಿಯೇ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಜೈಘಮ್ ಇಮಾಮ್ ನಿರ್ದೇಶನ ಮಾಡುತ್ತಿದ್ದಾರೆ. ಹಾಗಂತ ಈ ಸಿನಿಮಾ ಐಪಿಎಸ್ ಅಧಿಕಾರಿಯ ಮೊದಲ ಸಿನಿಮಾ ಅಲ್ಲ. ಈ ಹಿಂದೆ ಇದೇ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದ 'ನಕ್ಕಶ್' ಅನ್ನುವ ಸಿನಿಮಾಗೂ ಬಣ್ಣ ಹಚ್ಚಿದ್ದರು.


Click it and Unblock the Notifications











