Adipurush: ನೆಗೆಟಿವ್ ಕಮೆಂಟ್‌ಗಳನ್ನು ತೆಗೆಯುವಂತೆ ಹಣದ ಆಮಿಷ: 'ಆದಿಪುರುಷ್' ತಂಡದ ಮೇಲಿನ ಗಂಭೀರ ಆರೋಪ!
ಸುಮಾರು ಒಂದು ತಿಂಗಳಿನಿಂದ 'ಆದಿಪುರುಷ್' ತಂಡ ನಿರಂತರವಾಗಿ ಪ್ರಚಾರ ಮಾಡಿತ್ತು. ಕೊನೆಗೂ ನಿನ್ನೆ (ಜೂನ್ 16) ಈ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಪ್ರಭಾಸ್ ಹಾಗೂ ಐತಿಹಾಸಿಕ ಸಿನಿಮಾ ಇಷ್ಟ ಪಡುವ ಅಭಿಮಾನಿಗಳು ಮೊದಲ ದಿನವೇ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಮೊದಲ ದಿನವೇ ಸಿನಿಮಾ ನೋಡಿ ಬಂದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಸಿನಿಮಾದ ಡೈಲಾಗ್, ಸೀನ್‌ಗಳು ಹಾಗೂ ಸ್ಕ್ರೀನ್ ಪ್ಲೇ ಇಷ್ಟ ಆಗಿರಲಿಲ್ಲ. ಹೀಗಾಗಿ ಚಿತ್ರತಂಡದ ವಿರುದ್ಧ ಹಿಗ್ಗಾ-ಮುಗ್ಗ ಕಿಡಿಕಾರಿದ್ದಾರೆ.

ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ 'ಆದಿಪುರುಷ್' ಬಗ್ಗೆ ನೆಗೆಟಿವ್ ಕೆಮೆಂಟ್‌ಗಳು ಓಡಾಡುತ್ತಿವೆ. ಇದಕ್ಕೆ ಸಿನಿಮಾ ವಿರುದ್ಧ ಮಾಡಿರುವ ನೆಗೆಟಿವ್ ಕೆಮೆಂಟ್‌ಗಳನ್ನು ಡಿಲೀಟ್ ಮಾಡುವಂತೆ ಚಿತ್ರತಂಡ ಹಣ ಆಮಿಷ ಒಡ್ಡುತ್ತಿದೆ ಅನ್ನೋ ಬಗ್ಗೆ ವರದಿಯಾಗಿದೆ. ಜೊತೆ ಸ್ಕ್ರೀನ್ ಶಾಟ್‌ಗಳು ಕೂಡ ಓಡಾಡುತ್ತಿವೆ. ಅಸಲಿಗೆ ಏನಿದು?
ಚಿತ್ರತಂಡದಿಂದ ಹಣದ ಆಮಿಷ?
'ಆದಿಪುರುಷ್' ನಿರ್ದೇಶಕ ಓಂ ರಾವುತ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹನುಮಂತನ ಪಾತ್ರ, ರಾವಣನ ಪಾತ್ರವನ್ನು ತೋರಿಸಿರುವ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಲದೆ ಸಿನಿಮಾ ಡೈಲಾಗ್‌ಗಳನ್ನು ಕೇಳಿ ಸಿಡಿಮಿಡಿಗೊಂಡಿದ್ದಾರೆ. ಇದರ ವಿರುದ್ಧ ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.
'ಆದಿಪುರುಷ್' ಸಿನಿಮಾದ ವಿರುದ್ಧ ಮಾಡಿರುವ ನೆಗೆಟಿವ್ ಕಮೆಂಟ್‌ಗಳನ್ನು ಡಿಲೀಟ್ ಮಾಡುವಂತೆ ಚಿತ್ರತಂಡ ಪ್ರತಿಯೊಬ್ಬರಿಗೂ ಹಣದ ಆಮಿಷ ಒಡ್ಡುತ್ತಿದೆ ಎನ್ನಲಾಗಿದೆ. ಈ ಸಂಬಂಧ ಕೆಲವರು ಸ್ಕ್ರೀನ್ ಶಾಟ್‌ಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸ್ಕ್ರೀನ್ ಶಾಟ್‌ನಲ್ಲಿ ಏನಿದೆ?
ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್‌ಗಳನ್ನು ಶೇರ್ ಮಾಡಿದ್ದಾರೆ. " ನಿಮ್ಮ ಹತ್ತು ತುರ್ತಾಗಿ ಒಂದು ಮನವಿ. ನೀವು ಆದಿಪುರುಷ್ ಬಗೆಗಿನ ನೆಗೆಟಿವ್ ಟ್ವೀಟ್‌ಗಳನ್ನು ತೆಗೆದು ಹಾಕಬಹುದೇ? ನಾನು ನಿಮಗೆ 9500 ರೂಪಾಯಿಯನ್ನು ಪ್ರತಿ ಟ್ವೀಟ್‌ಗೆ ನೀಡುತ್ತೇನೆ" ಎಂದು ಒಂದು ಸ್ಕ್ರೀನ್ ಶಾಟ್‌ನಲ್ಲಿ ಇದೆ.
ಇನ್ನೊಂದು ಸ್ಕ್ರೀನ್‌ಶಾಟ್‌ನಲ್ಲಿ ಹೀಗಿದೆ. "ಟಿ ಸೀರಿಸ್ ಪರವಾಗಿ ಏಜೆನ್ಸಿಗಳು ಆದಿಪುರುಷ್ ಬಗ್ಗೆ ಮಾಡಿದ ಟ್ವೀಟ್‌ಗಳನ್ನು ಡಿಲೀಟ್ ಮಾಡುವಂತೆ ಬೇಡಿಕೊಳ್ಳುತ್ತಿವೆ. ಕ್ಷಮಿಸಿ, ನೀವು ತಪ್ಪಾಗಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದೀರ" ಎಂದು ಮತ್ತೊಬ್ಬರು 5500 ರೂ. ಆಫರ್ ಮಾಡಿರುವ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ನಿರ್ಮಾಪಕರ ಪ್ರತಿಕ್ರಿಯೇನು?
'ಆದಿಪುರುಷ್' ತಂಡ ನೆಗೆಟಿವ್ ಕಮೆಂಟ್‌ಗಳನ್ನು ತೆಗೆದು ಹಾಕಲು ಹಣದ ಆಮಿಷ ಒಡ್ಡಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಟಿ ಸೀರಿಸ್ ಪ್ರತಿಕ್ರಿಯೆ ನೀಡುವುದನ್ನು ಎದುರು ನೋಡುತ್ತಿದೆ.
'ಆದಿಪುರುಷ್' ಸಿನಿಮಾದಲ್ಲಿ ರಾಮಾಯಣದ ಪಾತ್ರಗಳ ಡೈಲಾಗ್‌ಗಳಿಗೆ ನೆಟ್ಟಿಗರು 'ಟಪೋರಿ ಡೈಲಾಗ್‌ಗಳು' ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವೆಡೆ ಹನುಮಾನ್ ಹಾಗೂ ರಾವಣನನ್ನು ಸರಿಯಾಗಿ ತೋರಿಸಿರದ ಕಾರಣಕ್ಕೆ ಈ ಸಿನಿಮಾದ ವಿರುದ್ಧ ಕೇಸ್‌ಗಳನ್ನು ದಾಖಲಿಸಲಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಮೊದಲ ದಿನದ ಗಳಿಕೆ ಚೆನ್ನಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹೇಗಿರುತ್ತೆ? ಅನ್ನೋದನ್ನು ಎಲ್ಲರೂ ಎದುರು ನೋಡಲಾಗಿದೆ.


Click it and Unblock the Notifications











