'ಅನಿಮಲ್' 2 ದಿನದಲ್ಲೇ 236 ಕೋಟಿ: 3ನೇ ದಿನ ಹೇಗಿದೆ ರೆಸ್ಪಾನ್ಸ್.. ಏನಿದು ಬಾಕ್ಸಾಫೀಸ್ ಲೆಕ್ಕಾಚಾರ?

ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಜೋಡಿಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗುಡುಗುತ್ತಿದೆ. 'ಅರ್ಜುನ್ ರೆಡ್ಡಿ' ಮೂಲಕ ಸದ್ದು ಮಾಡಿದ್ದ ಸಂದೀಪ್ ರೆಡ್ಡಿ ವಂಗಾ 'ಅನಿಮಲ್'ಗೆ ಆಕ್ಷನ್ ಕಟ್ ಹೇಳಿದ್ದು, ಹ್ರ್ಯಾಟಿಕ್ ಸಕ್ಸಸ್ ಕಂಡಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಅನಿಮಲ್' ಬಾಕ್ಸಾಫೀಸ್ ಕಲೆಕ್ಷನ್ ಮ್ಯಾಸೀವ್ ಆಗಿದೆ.

ಮೊದಲ ದಿನವೇ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಅನ್ನು ಉಡೀಸ್ ಮಾಡಿತ್ತು. ಎರಡನೇ ದಿನವೂ ಕೂಡ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಟ್ರೇಡ್ ಎಕ್ಸ್‌ಪರ್ಟ್ಸ್ 'ಅನಿಮಲ್' ಮೂರನೇ ದಿನ ಮೇಲೆ ಕಣ್ಣಿಟ್ಟಿದ್ದು, ಇಂದು (ಡಿಸೆಂಬರ್ 3) ಕೂಡ ಹೊಸ ದಾಖಲೆ ಸೃಷ್ಟಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.

 Is Animal movie a hit or flop? Ranbir, Rashmika film Day 2 Box office Collection day 3 prediction

'ಅನಿಮಲ್' ಭಾರತದಾದ್ಯಂತ ಎರಡನೇ ದಿನ 66 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್‌ ಹೇಳುತ್ತಿದ್ದಾರೆ. ಈ ಮೂಲಕ ಎರಡು ದಿನಗಳಲ್ಲಿ ರಣ್‌ಬೀರ್ ಕಪೂರ್ ಸಿನಿಮಾದ ಕಲೆಕ್ಷನ್ 129.88 ಕೋಟಿ ರೂಪಾಯಿ ಮಾಡಿದೆ. ಆದರೆ, 'ಪಠಾಣ್' ಎರಡನೇ ದಿನ ಗಳಿಕೆಯನ್ನು ಹಿಂದಿಕ್ಕಲಿ ಸಾಧ್ಯವಾಗಿಲ್ಲ. ಎರಡನೇ ದಿನ 'ಪಠಾಣ್' ಸಿನಿಮಾ 70.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದು ರಣ್‌ಬೀರ್ ಕಪೂರ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಕಲೆಕ್ಷನ್ ಕಂಡ ಸಿನಿಮಾ ಎನಿಸಿಕೊಂಡಿದೆ.

'ಅನಿಮಲ್' ಕೇವಲ ಭಾರತದ ಬಾಕ್ಸಾಫೀಸ್‌ನಲ್ಲ ಅಷ್ಟೇ ಅಲ್ಲ. ವಿದೇಶಗಳಲ್ಲೂ ಅಬ್ಬರಿಸುತ್ತಿದೆ. ಮೊದಲ ಅಡ್ವಾನ್ಸ್ ಬುಕಿಂಗ್ ಆಗಿದ್ದರಿಂದ ವಿದೇಶಗಳಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್ ಸುಮಾರು 236 ಕೋಟಿ ರೂಪಾಯಿ ಕಲೆಕ್ಷನ್ ಆಗಿರೋ ಬಗ್ಗೆ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲ ದಿನ 'ಅನಿಮಲ್' ಸಿನಿಮಾ ಭಾರತದಲ್ಲಿ 63.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ಹಿಂದಿ ಅವತರಣಿಕೆ 54.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ತೆಲುಗು ವರ್ಷನ್ 8.55 ಕೋಟಿ ರೂಪಾಯಿ, ತಮಿಳಿನಿಂದ 40 ಲಕ್ಷ ರೂಪಾಯಿ, ಕನ್ನಡದಿಂದ 9 ಲಕ್ಷ ರೂಪಾಯಿ ಹಾಗೂ ಮಲಯಾಳಂನಿಂದ 1 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು.

ಅದೇ ಎರಡನೇ ದಿನ 66.59 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಅದರಲ್ಲಿ ಹಿಂದಿ ವರ್ಷನ್ 59.87 ಕೋಟಿ ರೂಪಾಯಿ ಗಳಿಸಿತ್ತು. ತೆಲುಗು ವರ್ಷನ್ 6.28 ಕೋಟಿ ರೂಪಾಯಿ, ತಮಿಳಿನಿಂದ 44 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ.

ಹೀಗಾಗಿ ಮೂರನೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ನೀಡಿರೋ ಮಾಹಿತಿ ಪ್ರಕಾರ, 'ಅನಿಮಲ್' ಮೂರನೇ ದಿನ 32 ಕೋಟಿ ರೂಪಾಯಿ ಕಲೆಕ್ಷನ್ ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ ಬಂದಿದೆ. ಸುಮಾರು ಭಾರತದಾದ್ಯಂತ ಸುಮಾರು 11 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೂರು ದಿನಗಳಲ್ಲಿ ಕಲೆಕ್ಷನ್ 200 ಕೋಟಿ ರೂಪಾಯಿ ಆಗುವ ಸಾಧ್ಯತೆಯಿದೆ.

More from Filmibeat

English summary
Animal Movie Day 2 Box office collection and day 3 prediction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X