ಸನ್ನಿ-ಬಾಬ್ಬಿ ಡಿಯೋಲ್ ಜೊತೆ ಹೇಮಮಾಲಿನಿ ಮಕ್ಕಳು ಒಂದಾಗಿದ್ದು ನಿಜಾನಾ? ಧರ್ಮೇಂದ್ರ ಕುಟುಂಬದ ಅಸಲಿಯತ್ತೇನು?

ಬಾಲಿವುಡ್‌ನ ದಿಗ್ಗಜ ಧರ್ಮೇಂದ್ರ ಕುಟುಂಬ ಇತ್ತೀಚೆಗೆ ಯಾಕೋ ಒಂದಾಗಿರುವಂತಿದೆ ಅನ್ನೋ ಮಾತುಗಳು ಎಲ್ಲಾ ಕಡೆ ಕೇಳಿಬರುತ್ತಿದೆ. ಆದರೆ, ಇದೆಲ್ಲಾ ನಿಜಕ್ಕೂ ಆಗಿರೋ ಘಟನೆಗಳಾ? ಅಥವಾ ಸುಮ್ಮನೆ ನೋಡುವವರ ಕಣ್ಣಿಗೆ ಮಣ್ಣೆರಚೋ ತಂತ್ರನಾ? ಅನ್ನೋ ಗುಮಾನಿ ಕೂಡಾ ಜೊತೆಜೊತೆಗೇ ಎದ್ದಿದೆ.

ಧರ್ಮೇಂದ್ರಗೆ ಮೊದಲೇ ಪ್ರಕಾಶ್ ಕೌರ್ ಜೊತೆ ಮದುವೆಯಾಗಿ ಮಕ್ಕಳಿದ್ದರು. ಆದ್ರೂ ತನ್ನ ಜೊತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿದ್ದ, ಆಗಿನ ಕಾಲದ ಬಹುದೊಡ್ಡ ತಾರೆ ಹೇಮಾ ಮಾಲಿನಿ ಯನ್ನು ಪ್ರೀತಿಸಿದ ಧರ್ಮೇಂದ್ರ ಕೊನೆಗೆ ಆಕೆಯನ್ನು ಮದುವೆ ಕೂಡಾ ಆದರು. ಆದರೆ, ಎರಡೂ ಪತ್ನಿಯರ ಮಕ್ಕಳು ಮಾತ್ರ ಎಂದಿಗೂ ಒಂದೇ ಕುಟುಂಬದಂತೆ ಇರಲೇ ಇಲ್ಲ.

dharmendra-hema-malini-family-reality

ಈ ವಿಚಾರ ಸಾರ್ವಕಾಲಿಕ ಸತ್ಯ ಅನ್ನೋದನ್ನ ಬಾಲಿವುಡ್ ಮಾತ್ರ ಅಲ್ಲ, ಎಲ್ರೂ ಒಪ್ಪುತ್ತಾರೆ. ಧರ್ಮೇಂದ್ರ ಮೊದಲ ಪತ್ನಿಯ ಮಕ್ಕಳಾದ ಸನ್ನಿ ಮತ್ತು ಬಾಬ್ಬಿ ಡಿಯೋಲ್ ಹಾಗೇ ಎರಡನೇ ಮದುವೆಯಿಂದ ಜನಿಸಿದ ಈಶಾ ಮತ್ತು ಅಹನಾ ಡಿಯೋಲ್ ಎಂದೂ ಒಟ್ಟಿಗೆ ಇದ್ದಿದ್ದನ್ನು ಯಾರೂ ನೋಡೇ ಇಲ್ಲ. ಎರಡನೇ ಮದುವೆಯಾದ್ರೂ ಮೊದಲ ಪತ್ನಿಯಿಂದ ಧರ್ಮೇಂದ್ರ ಬೇರೆಯಾಗಿರಲಿಲ್ಲ. ಹಾಗಾಗಿ ಇದೊಂಥರಾ ಕಾಂಪ್ಲಿಕೇಟೆಡ್ ಫ್ಯಾಮಿಲಿ ಅಂದ್ರೂ ತಪ್ಪಾಗಲ್ಲ.

ಆದರೆ, ಇತ್ತೀಚೆಗೆ ಸನ್ನಿ ಡಿಯೋಲ್‌ನ 'ಗದರ್ 2' ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಸಂದರ್ಭದಲ್ಲಿ ಸಕ್ಸಸ್ ಪಾರ್ಟಿ ಏರ್ಪಡಿಸಲಾಗಿತ್ತು. ಆ ಪಾರ್ಟಿಯಲ್ಲಿ ಸನ್ನಿ ಮತ್ತು ಬಾಬ್ಬಿ ಜೊತೆ ಈಶಾ ಕೂಡಾ ಕಾಣಿಸಿಕೊಂಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. "ಓ ನೀವೆಲ್ಲಾ ಒಂದಾದ್ರಾ?" ಅಂತ ಕೇಳಿದ್ದಕ್ಕೆ ಎರಡೂ ಕಡೆಯವರು, "ನಾವು ಖಾಸಗಿ ವ್ಯಕ್ತಿಗಳು. ಹಾಗಾಗಿ ಹೊರಜಗತ್ತಿಗೆ ಇದೆಲ್ಲಾ ಗೊತ್ತಿರಲಿಲ್ಲ ಅಷ್ಟೇ. ನಮ್ಮ ನಡುವಿನ ಸಂಬಂಧ ಎಂದೂ ಹೀಗೇ ಇದೆ" ಎಂದಿದ್ದರು.

ಆದರೆ, ಅಭಿಮಾನಿಗಳೇನು ಮೂರ್ಖರಲ್ಲ ಅನ್ನೋದಕ್ಕೆ ಆನ್ಲೈನ್‌ನಲ್ಲಿ ನಡಿತಿರೋ ಚರ್ಚೆಗಳೇ ಸಾಕ್ಷಿ. ಮೊದಲಿನಿಂದಲೂ ಒಟ್ಟಿಗೆ ಇದೀವಿ ಅನ್ನೋ ಇವರು ಸುಳ್ಳು ಹೇಳಿರಬಹುದು ಅನ್ನೋದಕ್ಕೆ ಪ್ರೂಫ್ ಸಮೇತ ಜನರು ಮಾತಾಡ್ತಿದ್ದಾರೆ. ಇತ್ತೀಚೆಗಷ್ಟೇ ಹೇಮಾ ಮಾಲಿನಿ 70ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಆ ಸೆಲಬ್ರೇಶನ್‌ನಲ್ಲಿ ಇಡೀ ಬಾಲಿವುಡ್ ಭಾಗಿಯಾಗಿ ಡ್ರೀಮ್ ಗರ್ಲ್‌ಗೆ ವಿಶ್ ಮಾಡಿತ್ತು. ಸನ್ನಿ ಮತ್ತು ಬಾಬ್ಬಿ ಡಿಯೋಲ್ ಈ ಸಂತೋಷ ಕೂಟದಲ್ಲಿ ಎಲ್ಲೂ ಕಾಣಿಸಿಕೊಂಡೇ ಇರಲಿಲ್ಲ.

dharmendra-hema-malini-family-reality

ಅದೇ ರೀತಿ ಸನ್ನಿ ಡಿಯೋಲ್ ಮಗ ಕರಣ್ ಅದ್ಧೂರಿಯಾಗಿ ಮದುವೆಯಾದರು. ಅಲ್ಲೂ ಬಾಲಿವುಡ್‌ನ ಹಿರಿಯ ಕಿರಿಯರೆಲ್ಲಾ ಅಟೆಂಡೆನ್ಸ್ ಹಾಕಿದ್ದರು. ಆ ಮದುವೆಯಲ್ಲಿ ಹೇಮಮಾಲಿನಿಯಾಗಲಿ, ಅವರ ಮಕ್ಕಳಾದ ಈಶಾ-ಅಹನಾ ಆಗಲಿ ಎಲ್ಲೂ ಕಾಣಿಸಲಿಲ್ಲ. ಎಲ್ಲಾ ಒಟ್ಟಿಗೇ ಇದ್ದಿದ್ದರೆ ಈ ಎರಡು ಘಟನೆಗಳಿಗೆ ಕಾರಣ ಏನು ಅನ್ನೋದು ನೆಟ್ಟಿಗರ ಪ್ರಶ್ನೆ.

ಕೆಲವು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿರೋ ಧರ್ಮೇಂದ್ರ, "ಈಶಾ, ಅಹನಾ ಇಬ್ಬರೂ ಹೇಮಾ ಮತ್ತು ನನ್ನ ನೆಚ್ಚಿನ ಮಕ್ಕಳೇ.. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ ಹಾಗೂ ಬಹಳ ಗೌರವಿಸುತ್ತೇನೆ. ಆದರೆ ನನಗೆ ವಯಸ್ಸಾಗುತ್ತಿದೆ, ಇದನ್ನೆಲ್ಲಾ ನಾನು ನೇರವಾಗಿಯೇ ಹೇಳಬಹುದಿತ್ತು. ಆದರೆ..." ಎಂದು ಒಂದು ಪೋಸ್ಟ್ ಹಾಕಿದ್ರು.

ಇದು ಧರ್ಮೇಂದ್ರಗೆ ಕಾಡ್ತಿರೋ ಪಾಪ ಪ್ರಜ್ಞೆ. ಹೇಮಮಾಲಿನಿ ಮತ್ತು ಆಕೆಯ ಮಕ್ಕಳಿಗೆ ಹೆಚ್ಚು ಮಹತ್ವ ಕೊಡದೇ ದೂರವೇ ಉಳಿದಿದ್ದಕ್ಕೆ ಆತ ಈ ಇಳಿವಯಸ್ಸಿನಲ್ಲಿ ಕೊರಗುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಈ ಘಟನೆಯ ನಂತರವೇ ಡಿಯೋಲ್ ಕುಟುಂಬ ಒಟ್ಟಾಗಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದು ಎಲ್ಲವೂ ನಡೆದಿದ್ದು. ಇಷ್ಟೆಲ್ಲಾ ಆದ್ರೂ ಹಿರಿಯ ನಟಿ- ಧರ್ಮೇಂದ್ರ ಪತ್ನಿ ಹೇಮಮಾಲಿನಿ ಮಾತ್ರ ಇದುವರೆಗೆ ಒಂದೇ ಒಂದು ಮಾತನಾಡದೇ ಇರೋದು ಮಾತ್ರ ಮತ್ತಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

More from Filmibeat

English summary
Dharmendra and Hema Malini family reality
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X