ಮಲೈಕಾ ಅರೋರಾ ವಯಸ್ಸು 49 ಅಲ್ವ.. ಅಸಲಿ ವಯಸ್ಸು ಇದಲ್ವಾ? ಹಳೇ ವಿಡಿಯೋ ಬಿಚ್ಚಿಟ್ಟ ಗುಟ್ಟೇನು?
ಇತ್ತೀಚೆಗೆ ಮಲೈಕಾ ಅರೋರಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದಷ್ಟೇ ತನ್ನ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಅರೆ ಬೆತ್ತಲೆ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಮಲೈಕಾ ಅರೋರಾ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಂತೆ ಅರ್ಜುನ್ ಕಪೂರ್ ಅಖಾಡಕ್ಕೆ ಇಳಿದಿದ್ದರು. " ಮೊದಲು ಶಾಂತಿಯನ್ನು ಆಯ್ಕೆ ಮಾಡಿಕೊಳ್ಳಿ" ಎಂದು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಬರೆದು ಮಲೈಕಾ ಬೆಂಬಲಕ್ಕೆ ನಿಂತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆದ ಬಳಿಕ ಮಲೈಕಾ ಅರೋರಾ ಹಳೇ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ಮಲೈಕಾ ಅರೋರಾ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಆ ವಿಡಿಯೋ ಯಾವುದು? ಆ ವಿಡಿಯೋದಲ್ಲಿ ಅಂತಹದ್ದೇನಿದೆ? ವಯಸ್ಸಿನ ವಿಷಯದಲ್ಲಿ ಮಲೈಕಾ ಅರೋರಾ ಸುಳ್ಳು ಹೇಳ್ತಿದ್ದಾರಾ? ಅದೆಲ್ಲವನ್ನು ತಿಳಿಯಲು ಮುಂದೆ ಓದಿ.
ಮಲೈಕಾ-ಅರ್ಜುನ್ ವಯಸ್ಸಿನ ಅಂತರವೆಷ್ಟು?
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಡೇಟಿಂಗ್ ವಿಷಯ ಹೊರಬಿದ್ದಲ್ಲಿಂದ ಇಬ್ಬರ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಆಗುತ್ತಲೇ ಇದೆ. ವಿಕ್ಕಿಪೀಡಿಯಾ ಪ್ರಕಾರ, ಮಲೈಕಾ ಅರೋರಾ ವಯಸ್ಸು ಈಗ 49 ವರ್ಷ. ಅದೇ ಅರ್ಜುನ್ ಕಪೂರ್ ವಯಸ್ಸು 37. ಇಬ್ಬರ ನಡುವಿನ ವಯಸ್ಸಿನ ಅಂತರ 12 ವರ್ಷ. ಇದೇ ವಿಷಯ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ.
ಅರ್ಜುನ್ ಕಪೂರ್‌ಗಿಂತ ಮಲೈಕಾ ಅರೋರಾ 12 ವರ್ಷ ದೊಡ್ಡವರು ಅನ್ನೋದು ಎಲ್ಲರಿಗೂ ಗೊತ್ತಿದೆ. ನಿನ್ನೆ(ಮೇ 29)ಯಿಂದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದ ಬಳಿಕ ಮಲೈಕಾ ಅರೋರಾ ತಮ್ಮ ಅಸಲಿ ವಯಸ್ಸನ್ನು ಮುಚ್ಚಿದ್ದಾರಾ? ಅನ್ನೋ ಗೊಂದಲಕ್ಕೆ ಬಿದ್ದಿದಾರೆ. ಅಸಲಿಗೆ ಆ ವಿಡಿಯೋದಲ್ಲಿ ಅಂತಹದ್ದೇನಿದೆ?
ಅಸಲಿ ವಯಸ್ಸು ಮುಚ್ಚಿಟ್ರಾ ಮಲೈಕಾ ಅರೋರಾ?
ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಸಂಬಂಧ ಚೆನ್ನಾಗಿದ್ದಾಗ, ಇಬ್ಬರೂ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸಾಜಿದ್ ಖಾನ್ ಇಬ್ಬರ ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದರು. ನೀವು ಅರ್ಬಾಜ್ ಖಾನ್‌ಗಿಂತ ಎರಡು ವರ್ಷ ದೊಡ್ಡವರು. ನಿಮಗಿಂತ ಚಿಕ್ಕವನ್ನು ಮದುವೆ ಆದಾಗ, ನಿಮಗೆ ಏನು ಅನಿಸುತ್ತೆ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮಲೈಕಾ ಕೂಡ " ಖುಷಿಯಾಗಿದೆ" ಎಂದು ಹೇಳಿದ್ದರು.
ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ತಲೆಯಲ್ಲಿ ಹುಳಬಿಟ್ಟುಕೊಂಡಿದ್ದಾರೆ. ಇದೇ ವಿಕ್ಕಿಪೀಡಿಯಾ ಪ್ರಕಾರ, ಅರ್ಬಾಜ್ ಖಾನ್ ವಯಸ್ಸು 55. ಅಂದ್ಮೇಲೆ ಮಲೈಕಾ ಅರೋರಾ ವಯಸ್ಸು 57 ಆಗಬೇಕು. ಅದ್ಹೇಗೆ 49 ವರ್ಷ ಆಯ್ತು? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ.
Arbaaz Khan’s current age is 55years
— Sangacious (@sangacious) May 30, 2023
So Malaika has to be 57years old
But Google/Wiki tells 49years
Why then the hypocrisy #MalaikaArora in the M.I.L.F.? pic.twitter.com/58NCloADn0
ವಯಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಮಲೈಕಾ
ಸಜಾದ್ ಖಾನ್ ಜೊತೆಗಿನ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲೈಕಾ ವಯಸ್ಸಿನ ಬಗ್ಗೆನೂ ಚರ್ಚೆಯಾಗುತ್ತಿದೆ. ತಮ್ಮ ಅಸಲಿ ವಯಸ್ಸನ್ನು ಮುಚ್ಚಿಟ್ಟು 49 ಎನ್ನುತ್ತಿದ್ದಾರಾ ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ. ಆದರೆ, ಮಲೈಕಾರನ್ನು ನೋಡಿದರೆ 57 ವರ್ಷದವರಂತೆ ಕಾಣುವುದಿಲ್ಲ. ಜಿಮ್ಮು, ಯೋಗ ಅಂತೆಲ್ಲಾ ಎಷ್ಟೇ ಮಾಡಿದರೂ, ವಯಸ್ಸನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಆದರೂ, ಈ ಸಂದರ್ಶನ ನೆಟ್ಟಿಗರನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸಿರೋದಂತೂ ನಿಜ.
ಮಲೈಕಾ ಅರೋರಾ ಇತ್ತೀಚೆಗೆ ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೊ ಶೇರ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಹಳೆ ಸಂದರ್ಶನ ಪೇಚಿಗೆ ಸಿಲುಕಿಸಿದೆ. ಸದ್ಯ ವಯಸ್ಸಿನ ಬಗ್ಗೆ ಇನ್ನೂ ಮಲೈಕಾ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿವರೆಗೂ ಇಬ್ಬರ ಈ ಗೊಂದಲ ಇದ್ದೇ ಇರುತ್ತೆ.


Click it and Unblock the Notifications











