ನಾಗಚೈತನ್ಯ ಹಿಂದೆನೇ ದಿಢೀರನೇ ಮುಂಬೈಗೆ ಬಂದಿಳಿದ ಸಮಂತಾ: ಪೈಪೋಟಿಗಿಳಿದ್ರಾ ಮಾಜಿ ದಂಪತಿ?

ಪ್ರೇಮಿಗಳಾಗಿದ್ದವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವೇ ವರ್ಷಗಳಲ್ಲಿ ವಿಚ್ಛೇದನವನ್ನೂ ನೀಡಿದರು. ಈ ಜೋಡಿ ಬೇರೆಯಾಗುವುದನ್ನು ನೋಡಿ ಇಬ್ಬರ ಅಭಿಮಾನಿಗಳು ಮರುಕ ಪಟ್ಟಿದ್ದು ಇದೆ. ಸೆಲೆಬ್ರೆಟಿಗಳು ಶಾಕ್ ಆಗಿದ್ದೂ ಇದೆ. ಡಿವೋರ್ಸ್ ಪಡೆದುಕೊಂಡ ಮೇಲೆ ಇನ್ನೇನು ಅವರವರ ಜೀವನ ಅವರಿಗೆ ಎಂದು ಸುಮ್ಮನಾಗಿದ್ದರು.

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಇಬ್ಬರು ಬೇರೆಯಾಗಲು ತೀರ್ಮಾನ ಮಾಡಿದ್ದರು. ಇನ್ನೊಂದೆರಡು ತಿಂಗಳಲ್ಲಿ ಇಬ್ಬರು ಬೇರೆಯಾಗಿ ಒಂದು ವರ್ಷ ಕಳೆದೇ ಹೋಗುತ್ತೆ. ಆದರೂ, ಇಬ್ಬರ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಪ್ರತಿ ದಿನ ಏನಾದರೂ ಒಂದು ಸುದ್ದಿ ಇವರನ್ನು ಸುತ್ತ ಸುತ್ತಿಕೊಳ್ಳುತ್ತಲೇ ಇದೆ.

ಯಾವುದೇ ಸೆಲೆಬ್ರೆಟಿ ವಿಚ್ಛೇದನ ನೀಡಿದರೂ, ಈ ಮಟ್ಟಕ್ಕೆ ಸುದ್ದಿಯಾಗಿರಲಿಲ್ಲ. ಒಂದೆರಡು ತಿಂಗಳಿಗೆ ತಣ್ಣಾಗಿಬಿಡುತ್ತಿತ್ತು. ಆದರೆ, ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಆಫ್ಟರ್ ಎಫೆಕ್ಟ್ ಇನ್ನೂ ಮುಂದುವರೆದಿದೆ. ಅಸಲಿಗೆ ಇಲ್ಲಿವರೆಗೂ ಸುಮ್ಮನಿದ್ದ ನಾಗಚೈತನ್ಯ ಕಳೆದ ಕೆಲವು ದಿನಗಳಿಂದ ಆಕ್ಟಿವ್ ಆಗುತ್ತಿದ್ದಾರೆ. ಮೇಲ್ನೋಟಕ್ಕೆ ಸಮಂತಾಗೆ ಟಕ್ಕರ್ ಕೊಡೋಕೆ ನಾಗಚೈತನ್ಯ ಸಕಲ ಪ್ರಯತ್ನವೂ ನಡೆಸಿದ್ದಾರೆ ಅನ್ನೋ ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ಇಲ್ಲಿದೆ.

ಮುಂಬೈಗೆ ಬಂದಿಳಿದ ಸಮಂತಾ

ಸಮಂತಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಸ್ಟೈಲಿಶ್ ಎಂಟ್ರಿ ಕೊಟ್ಟು, ಸಮಂತಾ ಕ್ಯಾಮರಾ ಕಣ್ಣುಗಳಿಗೆ ಪಳಪಳ ಅಂತ ಹೊಳೆದಿದ್ದಾರೆ. ಬ್ರೌನ್ ಕ್ರಾಪ್ ಟಾಪ್ ಹಾಗೂ ವೈಟ್ ಪ್ಯಾಂಟ್ ಕೊಟ್ಟು,ಕೈಯಲ್ಲೊಂದು ಬುಕ್ ಹಿಡಿದು ಎಂಟ್ರಿ ಕೊಟ್ಟಿದ್ದರು. ಈ ಫೋಟೊ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಚಿತ್ರರಂಗದಲ್ಲಿ ಹೊಸ ವಿಷಯವೊಂದು ಹಲ್‌ಚಲ್ ಎಬ್ಬಿಸುತ್ತಿದೆ. ನಾಗಚೈತನ್ಯ ಹಾಗೂ ಸಮಂತಾ ಇಬ್ಬರು ನಡುವೆ ಕಾಂಪಿಟೇಷನ್ ಶುರುವಾಗಿದೆ ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಭೇಟಿ ಮಾಡಿದ ಚೈತನ್ಯ

ಸಂಜಯ್ ಲೀಲಾ ಬನ್ಸಾಲಿ ಭೇಟಿ ಮಾಡಿದ ಚೈತನ್ಯ

ಸಮಂತಾ ಮುಂಬೈಗೆ ಬಂದಿಳಿಯುವ ಮುನ್ನವೇ ನಾಗಚೈತನ್ಯ ಬಂದಿದ್ದರು. ಅವರ ಮೊದಲ ಬಾಲಿವುಡ್ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಬಾಲಿವುಡ್ ಫಿಲ್ಮ್ ಮೇಕರ್ ಸಂಜಯ್ ಲೀಲಾ ಬನ್ಸಾಲಿ ಕಚೇರಿಯಿಂದ ಹೊರಬರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ನಾಗ ಚೈತನ್ಯ ಹಾಗೂ ಬನ್ಸಾಲಿ ಇಬ್ಬರೂ ಸೇರಿ ಸಿನಿಮಾ ಮಾಡುತ್ತಾರೆ ಅನ್ನೋ ಪುಕಾರು ಹಬ್ಬಿದೆ. ಆದರೆ, ಚರ್ಚೆ ಆಗುತ್ತಿರೋ ವಿಷಯವೇ ಬೇರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಕಾಂಪಿಟೇನ್‌ಗೆ ಬಿದ್ದಿದ್ದಾರೆ ಅನ್ನೋ ಗುಸು ಗುಸು ಓಡಾಡುತ್ತಿದೆ.

ಬಾಲಿವುಡ್ ಸಿನಿಮಾ ಮೇಲೆ ಕಣ್ಣು

ಬಾಲಿವುಡ್ ಸಿನಿಮಾ ಮೇಲೆ ಕಣ್ಣು

ವಿಚ್ಚೇದನ ಬಳಿಕ ಸಮಂತಾ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೈಯಲ್ಲಿ ಎರಡು ಸಿನಿಮಾ ಕೂಡ ಇವೆ. ಅಲ್ಲದೆ ಈಗಾಗಲೇ ಸಮಂತಾ 'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್‌ ರಿಲೀಸ್ ಆಗಿದ್ದು, ಅದು ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ನಾಗ ಚೈತನ್ಯ ಮೊದಲ ಬಾಲಿವುಡ್‌ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಇನ್ನೂ ರಿಲೀಸ್ ಆಗಬೇಕಿದೆ. ಈ ಮಧ್ಯೆ ಸಮಂತಾ ಟಾಕ್‌ ಶೋಗಳಲ್ಲಿ ನಾಗಚೈತನ್ಯ ವಿರುದ್ಧ ಕೊಟ್ಟ ಹೇಳಿಕೆಗಳು ರೊಚ್ಚಿಗೆಬ್ಬಿಸಿವೆ ಅನ್ನೋ ಮಾತು ಕೇಳಿ ಬರುತ್ತಿವೆ. ಈ ಕಾರಣಕ್ಕೆ ಮುಂಬೈನಲ್ಲಿ ನಾಗ ಚೈತನ್ಯ ಆಕ್ಟಿವ್ ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಮುಂಬೈನಲ್ಲಿ ಶೀತಲ ಸಮರ?

ಮುಂಬೈನಲ್ಲಿ ಶೀತಲ ಸಮರ?

ನಾಗಚೈತನ್ಯ ಶತಾಯಗತಾಯ ಬಾಲಿವುಡ್‌ನಲ್ಲಿ ಸಿನಿಮಾ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾ ಸಿಕ್ಕಿದರೆ, ಬಾಲಿವುಡ್ ಜರ್ನಿ ಸುಗಮ ಆಗೋದ್ರಲ್ಲಿ ಅನುಮಾನವೇ ಇಲ್ಲ. ಈ ಮಧ್ಯೆ ಸಮಂತಾ ಕೂಡ ದಿಢೀರನೇ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಬಾಲಿವುಡ್‌ನಲ್ಲಿ ಸಮಂತಾ ಹಾಗೂ ನಾಗಚೈತನ್ನು ಇಬ್ಬರೂ ಪರೋಕ್ಷವಾಗಿ ಸಮರಕ್ಕಿಳಿದ್ದಾರೆ ಅನ್ನೋ ಗುಸುಗುಸು ಶುರುವಾಗಿದೆ.

More from Filmibeat

English summary
Is Naga Chaitanya And Samantha Are In Competition After Divorce: Here Is The Proof, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X