'ರಾಮಾಯಣ' ಒಪ್ಪಿ ಪೇಚಿಗೆ ಸಿಕ್ಕಿಕೊಂಡರೇ ರಣ್‌ಬೀರ್? 2ನೇ ಮದ್ವೆ ಬಗ್ಗೆ ಹೇಳಿಕೆಗೆ ಟೀಕೆಗಳ ಸುರಿಮಳೆ
ಬಾಲಿವುಡ್‌ನ ಅತ್ಯಂತ ದುಬಾರಿ ಸಿನಿಮಾ 'ರಾಮಾಯಣ'. ಬಾರೀ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಹಣವನ್ನು ಹೂಡಿಕೆ ಮಾಡಿದ್ದಾರೆ. ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ ರಣ್‌ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರತದಲ್ಲಿ 'ರಾಮಾಯಣ' ಹಾಗೂ 'ಮಹಾಭಾರತ'ಕ್ಕೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲೂ 'ರಾಮಾಯಣ'ದಲ್ಲಿ ಬರುವ ಪ್ರತಿಯೊಂದು ಪಾತ್ರವನ್ನು ಭಕ್ತಿ ಭಾವದಿಂದ ನೋಡಲಾಗುತ್ತದೆ.
'ರಾಮಾಯಣ'ದ ಶ್ರೀರಾಮ ಇಂದಿಗೂ ಭಾರತೀಯರಿಗೆ ಆದರ್ಶ. ಶ್ರೀರಾಮನಂತ ಗಂಡನೇ ಬೇಕು ಇಂದಿಗೂ ಭಾರತೀಯ ಹೆಣ್ಣು ಮಕ್ಕಳು ಬಯಸುತ್ತಾರೆ. ಶ್ರೀರಾಮನಂತಹ ಸುಂದರವಾದ ಗಂಡನೇ ಬೇಕು ಅಂತ ಕನಸು ಕಾಣುತ್ತಾರೆ. ಶ್ರೀರಾಮನಂತಹ ಆಡಳಿತಗಾರ ಬೇಕು ಅಂತ ಜನರು ಬಯಸುತ್ತಾರೆ. ಹೀಗಾಗಿ ಶ್ರೀರಾಮ ಭಾರತದ ಆದರ್ಶಪುರುಷ. ಹೀಗಾಗಿ ಭಕ್ತಿ ಉಕ್ಕಿ ಬರುತ್ತೆ.

ಸದ್ಯ ಬಾಲಿವುಡ್‌ನಲ್ಲಿ ನಿರ್ಮಾಣ ಆಗುತ್ತಿರುವ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿರೋದು ರಣ್‌ಬೀರ್ ಕಪೂರ್. ಸಿನಿಮಾ ಪ್ರಾಜೆಕ್ಟ್ ಆರಂಭಗೊಂಡಾಗ ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಒಳ್ಳೆಯ ಆಯ್ಕೆ ಎಂದು ಸಾಕಷ್ಟು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚೆಗೆ ಟೀಸರ್ ರಿಲೀಸ್ ಆಗುತ್ತಿದ್ದಂತೆ ರಣ್‌ಬೀರ್ ಕಪೂರ್ ವಿರುದ್ಧ ದಿಢೀರನೇ ಟೀಕೆಗಳು ಹುಟ್ಟಿಕೊಳ್ಳುತ್ತಿವೆ. ಈಗ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ವೈರಲ್ ಆಗುತ್ತಿದೆ. 2ನೇ ಮದುವೆ ಬಗ್ಗೆ ಮಾತಾಡಿರೋ ರಣ್‌ಬೀರ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಅದೇನು ಅಂತ ನೋಡುವುದಾರೇ,
ಬಾಲಿವುಡ್ ನಟರಲ್ಲಿ ರಣ್‌ಬೀರ್ ಕಪೂರ್ ಅಗತ್ಯಕ್ಕಿಂತ ಹೆಚ್ಚು ಬಿಂದಾಸ್. ಪಾರ್ಟಿ, ಮೋಜು-ಮಸ್ತಿ ಮಾಡುತ್ತಾ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ವಿವಾಹದ ಬಳಿಕ ಇದೆಲ್ಲವನ್ನೂ ಕಡಿಮೆ ಮಾಡಿಕೊಂಡಂತೆ ಕಾಣುತ್ತಿದೆ. ಆದರೂ, ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ಎಂದರೆ, ಬಿಂದಾಸ್ ನಟ ಅನ್ನೋ ಇಮೇಜ್ ಇದೆ. ಇಂತಹ ಇಮೇಜ್ ಹೊಂದಿರುವ ನಟನಿಗೆ ಶ್ರೀರಾಮನ ಪಾತ್ರ ನೀಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಇದೆ.
ಆದರೆ, 'ರಾಮಾಯಣ'ದ ನಿರ್ಮಾಪಕರು ಹಾಗೂ ತಂಡ ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಪರ್ಫೆಕ್ಟ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇತ್ತ ರಣ್‌ಬೀರ್ ಕಪೂರ್ ಕೂಡ ಶ್ರೀರಾಮನ ಪಾತ್ರಕ್ಕಾಗಿ ನಾನ್ ವೆಜ್ ಹಾಗೂ ಮದ್ಯಪಾನವನ್ನು ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇದೆಲ್ಲ ಏನೇ ಇದ್ದರೂ ಜನರಿಗೆ ಯಾಕೋ ಸಮಾಧಾನ ಆದಂತೆ ಕಾಣುತ್ತಿಲ್ಲ. ಏನಾದರೂ ಒಂದು ಹುಳುಕನ್ನು ಹುಡುಕುತ್ತಲೇ ಇದ್ದಾರೆ. ಸದ್ಯಕ್ಕೀಗ ರಣ್‌ಬೀರ್ ಕಪೂರ್ 2ನೇ ಮದುವೆ ಬಗ್ಗೆ ಮಾತಾಡಿರೋ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.

ನಾಲ್ಕು ವರ್ಷಗಳ ಹಿಂದೆ ರಣ್‌ಬೀರ್ ಕಪೂರ್ 'ಶಂಶೇರ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ನಿರೂಪಕಿ "ನಿಮ್ಮ ಮದುವೆಯಲ್ಲಿ ಸಮೋಸಾ ಹಾಗೂ ಚಟ್ನಿ ಚೆನ್ನಾಗಿರಲಿಲ್ಲ" ಎಂದು ಹೇಳಿದ್ದರು. ಅದಕ್ಕೆ ರಣ್‌ಬೀರ್ ಕಪೂರ್ ತಮಾಷೆಯಾಗಿ "ಇನ್ನೊಂದು ಮದುವೆ ಆಗ್ತೀನಿ. ಆಗ ನಿಮಗೆ ಒಳ್ಳೆ ಪಾರ್ಟಿ ಕೊಡಿಸುತ್ತೇನೆ" ಎಂದಿದ್ದರು. ಇದೇ ಹೇಳಿಕೆ ಈಗ ಟೀಕೆಗಳಿಗೆ ಗುರಿಯಾಗುತ್ತಿದೆ.
ರಣ್‌ಬೀರ್ ಕಪೂರ್ ಹಳೆಯ ಸಂದರ್ಶನ ಈಗ ವೈರಲ್ ಆಗುತ್ತಿದೆ. ಈ ಹೇಳಿಕೆಯನ್ನು ಇಟ್ಟುಕೊಂಡು 'ರಾಮಾಯಣ' ಸಿನಿಮಾವನ್ನು ಶ್ರೀರಾಮನ ಪಾತ್ರ ಮಾಡಿರುವ ರಣ್‌ಬೀರ್ ಕಪೂರ್ ಅನ್ನು ಟೀಕೆ ಮಾಡಲಾಗುತ್ತಿದೆ. 2ನೇ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ನಟನನ್ನು ಶ್ರೀರಾಮನ ಪಾತ್ರದಲ್ಲಿ ನೋಡುವುದು ಹೇಗೆ ಎಂದು ಟೀಕಿಸುತ್ತಿದ್ದಾರೆ.


Click it and Unblock the Notifications