ಬಿಗ್ ಬಾಸ್ ಸ್ಪರ್ಧಿಯ ಪ್ರೀತಿಯಲ್ಲಿ ಬಿದ್ದರೇ RCB ಆಟಗಾರ ದೇವದತ್ ಪಡಿಕ್ಕಲ್? ಯಾರೀ ನಟಿ?
ಇನ್ನೇನು ಐಪಿಎಲ್ (IPL) ಪಂದ್ಯಾವಳಿಗಳು ಮುಗಿಯುತ್ತಾ ಬಂತು. ಪ್ಲೇ ಆಪ್‌ಗೆ ಐದಾರು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಅದರಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಆರ್‌ಸಿಬಿ ತಂಡ ಕೂಡ ಒಂದು. ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆದ್ದಿರೋ ಆರ್‌ಸಿಬಿ ಪಟ್ಟಿಯಲ್ಲಿ ಟಾಪ್‌ನಲ್ಲಿದೆ. ಆರ್‌ಸಿಬಿ ತಂಡದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಯಿಂದ ಹಿಡಿದು ದೇವದತ್ ಪಡಿಕ್ಕಲ್‌ವರೆಗೂ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ವೇಳೆ ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಸಾಮಾನ್ಯವಾಗಿ ಕ್ರಿಕೆಟರ್ ಹಾಗೂ ಬಾಲಿವುಡ್ ನಟಿಯರ ಮಧ್ಯೆ ಡೇಟಿಂಗ್ ರೂಮರ್‌ಗಳು ಹುಟ್ಟಿಕೊಳ್ಳುವುದು ಹೊಸದೇನು ಅಲ್ಲ. ಅದರಲ್ಲೂ ಐಪಿಎಲ್ ಸಮಯದಲ್ಲಿ ಇಂತಹ ಗಾಳಿ ಸುದ್ದಿಗಳು ಲೆಕ್ಕವಿಲ್ಲದಷ್ಟು ಹರಿದಾಡುತ್ತಲೇ ಇರುತ್ತವೆ. ನಟಿಯರು ಹಾಗೂ ಕ್ರಿಕೆಟರ್‌ಗಳ ಹೆಸರುಗಳು ಓಡಾಡುತ್ತಲೇ ಇರುತ್ತವೆ.

ಈ ಬಾರಿ ಆರ್‌ಸಿಬಿಯ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಹೆಸರು ಬಿಗ್ ಬಾಸ್ 13 ಸ್ಪರ್ಧಿಯೊಂದಿಗೆ ತಳುಕು ಹಾಕಿಕೊಂಡಿದೆ. ಅಷ್ಟಕ್ಕೂ ಆ ನಟಿ ಯಾರು? ಇವರಿಬ್ಬರು ನಿಜಕ್ಕೂ ಡೇಟಿಂಗ್ ಮಾಡುತ್ತಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ದಿಢೀರನೇ ಸದ್ದು ಮಾಡುತ್ತಿರೋದು ಏಕೆ? ರಾತ್ರೋ ರಾತ್ರಿ ಆರ್‌ಸಿಬಿ ಪ್ಲೇಯರ್ ಹೆಸರು ನಟಿಯೊಂದಿಗೆ ತಳುಕು ಹಾಕಿಕೊಂಡಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
ದೇವದತ್ ಪಡಿಕ್ಕಲ್ ಜೊತೆ ಡೇಟಿಂಗ್?
ದೇವದತ್ ಪಡಿಕ್ಕಲ್ ಡೇಟಿಂಗ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಶೆಹನಾಜ್ ಗಿಲ್ ಹಾಗೂ ಪಡಿಕ್ಕಲ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಇವರಿಬ್ಬರ ಡೇಟಿಂಗ್ ವಿಚಾರ ಅಂತೂ ಬಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಶೆಹನಾಜ್ ಗಿಲ್ ಈ ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ.
ಶೆಹನಾಜ್-ಪಡಿಕ್ಕಲ್ ಡೇಟಿಂಗ್ ನಿಜವೇ?
ಶೆಹನಾಜ್ ಗಿಲ್ಲ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುವುದಕ್ಕೆ ತೆರಳಿದ್ದರು. ಈ ವೇಳೆ ಅವರು ಕೊಲ್ಕತ್ತಾ ತಂಡಕ್ಕೆ ಸಪೋರ್ಟ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆರ್‌ಸಿಬಿ ಜರ್ಸಿಯನ್ನು ಧರಿಸಿ ತಂಡಕ್ಕೆ ಹುರುಪು ನೀಡುತ್ತಿದ್ದರು. ಈ ವಿಡಿಯೋವನ್ನೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಜೊತೆಗೆ ದೇವದತ್ ಪಡಿಕ್ಕಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಯಾವ ಆಧಾರದ ಮೇಲೆ ಈ ಪ್ರಶ್ನೆ ಮಾಡಿದರು ಅನ್ನೋದಕ್ಕೆ ಕ್ಲಾರಿಟಿ ಇಲ್ಲ.

ವಿಡಿಯೋ ಹಂಚಿಕೊಂಡಿದ್ದ ಶೆಹನಾಜ್
ರಾಯ್‌ಪುರದಲ್ಲಿ ನಡೆದ ಆರ್‌ಸಿಬಿ ಹಾಗೂ ಕೊಲ್ಕತ್ತಾ ಪಂದ್ಯದ ವೇಳೆ ಶೆಹನಾಜ್ ಗಿಲ್ ಕಾಣಿಸಿಕೊಂಡಿದ್ದರು. ಆ ಬಳಿಕ ಕೂಡಲೇ ಸೋಶಿಯಲ್ ಮೀಡಿಯಾದ ವೈರಲ್ ಆಗುವುದಕ್ಕೆ ಶುರುವಾಗಿದ್ದರು. ಇದೇ ವೇಳೆ ಶೆಹನಾಜ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದು ರೂಮರ್‌ಗಳಿಗೆ ಆಹಾರವಾಗುವಂತೆ ಮಾಡಿತ್ತು.
ಯಾರಿದು ಶೆಹನಾಜ್ ಗಿಲ್?
ಶೆಹನಾಜ್ ಗಿಲ್ ಹಿಂದಿ ಕಿರುತೆರೆ ಹಾಗೂ ಬಾಲಿವುಡ್‌ನಲ್ಲಿ ಜನಪ್ರಿಯ ಹೆಸರು. ಅಲ್ಲದೇ ಬಿಗ್ ಬಾಸ್ 13 ರಿಯಾಲಿಟಿ ಶೋನ ಸ್ಪರ್ಧಿ ಕೂಡ ಹೌದು. ಈ ಸೀಸನ್‌ನಲ್ಲಿ 2ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಪಂಜಾಬಿ ಸಿನಿಮಾಗಳಲ್ಲಿಯೂ ನಟಿಸಿರೋ ನಟಿ, ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ನಟಿಸಿರುವ 'ಕಿಸಿ ಕಾ ಬಾಯ್ ಕಿಸಿ ಕಾ ಜಾನ್', 'ಥ್ಯಾಂಕ್ಯೂ ಫಾರ್ ಕಮಿಂಗ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ಸಿಂಗ್ Vs ಕೌರ್ 2' ಅನ್ನೋ ಪಂಜಾಬಿ ಸಿನಿಮಾ ಹಾಗೂ 'ಸಬ್ ಫಸ್ಟ್ ಕ್ಲಾಸ್' ಅನ್ನೋ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications