ಸೋನಂ ಕಪೂರ್ ಪತಿ ಆನಂದ್ ಅಹುಜಾ ವಿರುದ್ಧ ಗಂಭೀರ ಆರೋಪ!
ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಬಾಲಿವುಡ್ ನ ಹೆಸರಾಂತ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ ನಟಿ ಸೋನಮ್ ಕಪೂರ್ ಅವರು ಸಿನಿಮಾಗಳಿಂದಲೂ ದೂರ ಉಳಿದಿದ್ದಾರೆ. ಆದರೆ ಈಗ ಪತಿಯ ಕಾರಣಕ್ಕೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಉದ್ಯಮಿ ಆಗಿರುವ ಸೋನಮ್ ಕಪೂರ್ ಪತಿ ಆನಂದ್ ಅಹುಜಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಸೋನಂ ಪತಿಯ ಮೇಲೆ ಆರೋಪಿಸಿದೆ.
ಆನಂದ್ ಅಹುಜಾ ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆರೋಪಿಸಿದೆ. ಕೆಲ ದಿನಗಳ ಹಿಂದೆ ಆನಂದ್ ಅಹುಜಾ ಅವರು ಶಿಪ್ಪಿಂಗ್ ಕಂಪನಿ ಮೇಲೆ ಆರೋಪ ಮಾಡಿದ್ದರು. ಈಗ ಅದೇ ಕಂಪನಿ ಆನಂದ್ ಅವರ ಮೇಲೆ ಪ್ರತ್ಯಾರೋಪ ಮಾಡಿದೆ.
ಸೋನಂ ಕಪೂರ್ ಅವರ ಪತಿ ಆನಂದ್ ಅಹುಜಾ ತಮ್ಮ ಗ್ರಾಹಕ ಸೇವೆಗಾಗಿ ಅಂತಾರಾಷ್ಟ್ರೀಯ ಶಿಪ್ಪಿಂಗ್ ಕಂಪನಿಯ ವಿರುದ್ಧ ಟ್ವೀಟ್ ಮಾಡಿದ್ದರು. ಆದರೆ ಈಗ ಅದೇ ಕಂಪನಿ ಆನಂದ್ ಅಹುಜಾ ವಿರುದ್ಧ ಆರೋಪ ಮಾಡಿದ್ದು, ತೆರಿಗೆ ಮತ್ತು ಸುಂಕ ಪಾವತಿಯನ್ನು ತಪ್ಪಿಸಲು ಆನಂದ್ ಅಹುಜಾ ತಪ್ಪು ದಾಖಲೆ ನೀಡಿದ್ದಾರೆ ಎನ್ನಲಾಗಿದೆ. ಆನಂದ್ ಅಹುಜಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಂಪನಿಯು, "ಸಮಸ್ಯೆಯಾಗಿರುವುದು ಅವರ ಸೇವೆಗಳಿಂದಲ್ಲ, ಬದಲಾಗಿ ಆನಂದ್ ಅಹುಜಾ ಒದಗಿಸಿದ ದಾಖಲೆಗಳು ಸರಿಯಿಲ್ಲ." ಎಂದು ಬರೆದುಕೊಂಡಿದೆ.

ಇನ್ನು ಮುಂದುವರೆದು ಹೇಳಿಕೆ ನೀಡಿದ ಕಂಪನಿ. "ಆನಂದ್ ಅಹುಜಾ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದಂತೆ, ನಾವು ವಸ್ತುಗಳನ್ನು ಹಿಡಿದಿಟ್ಟುಕೊಂಡಿಲ್ಲ. ಇದು ಗ್ರಾಹಕ ಸೇವೆಯ ಗುಣಮಟ್ಟದ ಪ್ರಶ್ನೆಯಲ್ಲ. ಆನಂದ್ ಅಹುಜಾ ಖರೀದಿ ಮಾಡಿದ ಸ್ನೀಕರ್ಸ್ ಬೆಲೆಯನ್ನು ತಪ್ಪಾಗಿ ನೀಡಿದ್ದಾರೆ. ಇದರಿಂದಾಗಿ ಅವರು ಕಡಿಮೆ ಮೊತ್ತದ ತೆರಿಗೆ ಮತ್ತು ಸುಂಕ ಪಾವತಿ ಮಾಡಿದಂತಾಗುತ್ತದೆ." ಎಂದು ತಮ್ಮ ಟ್ವೀಟ್‌ನಲ್ಲಿ ಕಂಪನಿ ತಿಳಿಸಿದೆ. ಈ ಮೂಲಕ ಸೋನಂ ಪತಿಯ ಮೇಲೆ ತೆರಿಗೆ, ಸುಂಕದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.


Click it and Unblock the Notifications











