ರಿಷಭ್ ಪಂತ್ ಜೊತೆ ತಳುಕು ಹಾಕಿಕೊಂಡಿರುವ ಇಶಾ ನೇಗಿ ಹಿನ್ನೆಲೆಯೇನು? ಇನ್‌ಸ್ಟಾಗ್ರಾಂನಲ್ಲಿ ಯಾಕಿಷ್ಟು ಫಾಲೋವರ್ಸ್?
ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಐಪಿಎಲ್‌ನ ಅತೀ ದುಬಾರಿ ಆಟಗಾರ. ಈ ಬಾರಿ ಐಪಿಎಲ್‌ನ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಎಲ್‌ಎಸ್‌ಜಿ (Lucknow Super Giants) ತಂಡದ ಕ್ರಿಕೆಟರ್. 27 ಕೋಟಿ ರೂಪಾಯಿಗೆ ಹರಾಜಿನಲ್ಲಿ ಸೇಲ್ ಆಗಿದ್ದಾರೆ. ಒಂದು ಕಡೆ ರಿಷಭ್ ಪಂತ್‌ಗೆ ಸಿಕ್ಕಿರುವ ಹಣದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದು ಕಡೆ ರಿಷಬ್ ಜೊತೆ ತಳುಕು ಹಾಕಿಕೊಂಡಿರುವ ಯುವತಿ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ.
2024-25ರ ಸಾಲಿನಲ್ಲಿ ಭಾರತೀಯ ಕ್ರಿಕೆಟ್ ತಂಡ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನೂ ರಿಷಭ್ ಪಂತ್ ಮೀರಿಸಿದ್ದಾರೆ. ವಿರಾಟ್ ಕೊಹ್ಲಿಗೆ 21 ಕೋಟಿ ರೂಪಾಯಿ ಕೊಟ್ಟು ಆರ್‌ಸಿಬಿ ರಿಟೈನ್ ಮಾಡಿಕೊಂಡಿದ್ದರು. ಹಾಗೇ ಬಿಸಿಸಿಐ ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ರೂಪದಲ್ಲಿ ಕೊಡುತ್ತೆ. ಒಟ್ಟು 28 ಕೋಟಿ ರೂಪಾಯಿ ಪಡೆದರೆ, ರಿಷಬ್ ಪಂತ್‌ಗೆ 27 ಕೋಟಿ ಎಲ್‌ಎಸ್‌ಜಿಯಿಂದ ಸಿಕ್ಕಿದರೆ, 3 ಕೋಟಿ ರೂಪಾಯಿ ಬಿಸಿಸಿಐ ಸಂಭಾವನೆ ನೀಡಿದೆ.

ರಿಷಭ್ ಪಂತ್ ವೃತ್ತಿ ಬದುಕು ಒಂದು ಕಡೆಯಾದರೆ, ಇನ್ನೊಂದ್ಕಡೆ ಗರ್ಲ್‌ಫ್ರೆಂಡ್ ಇಶಾ ನೇಗಿ ಕೂಡ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ರಿಷಭ್ ಪಂತ್ ಸದ್ದು ಮಾಡಿದರೆ, ಇಶಾ ನೇಗಿ ಕೂಡ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ನೆಟ್ಟಿಗರು ರಿಷಭ್ ಪಂತ್ ಜೊತೆ ಇಶಾ ನೇಗಿಯನ್ನು ನೆನಪಿಸಿಕೊಳ್ಳುತ್ತಾರೆ. ಹಾಗಿದ್ದರೆ, ಈಕೆಯ ಹಿನ್ನೆಲೆಯೇನು? ಅಷ್ಟೊಂದು ಸದ್ದು ಮಾಡುವುದು ಯಾಕೆ? ತಿಳಿಯಲು ಮುಂದೆ ಓದಿ.
2019ರಲ್ಲಿ ರಿಷಭ್ ಪಂತ್ ತನ್ನ ತನ್ನ ಗರ್ಲ್‌ಫ್ರೆಂಡ್ ಇಶಾ ನೇಗಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದರು. ನೇರವಾಗಿ ಗರ್ಲ್‌ಫ್ರೆಂಡ್ ಅಂತ ಹೇಳದೇ ಹೋದರೂ, ಫೋಟೊಗಳನ್ನು ಶೇರ್ ಮಾಡಿ ರೊಮ್ಯಾಂಟಿಕ್ ಆಗಿ ಬರೆದ ಸಾಲುಗಳಿಂದಲೇ ಅವರ ಅಭಿಮಾನಿಗಳಿಗೆ ಅರ್ಥ ಆಗಿ ಹೋಗಿತ್ತು. ಅಲ್ಲಿಂದ ರಿಷಭ್ ಪಂತ್ ಹೆಸರು ಕೇಳಿ ಬಂದಾಗಲೆಲ್ಲ ಇಶಾ ನೇಗಿ ಕೂಡ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ಅಷ್ಟಕ್ಕೂ ಯಾರೀಕೆ? ಈಕೆಯ ಹಿನ್ನೆಲೆಯೇನು?
ಭಾರತದ ಕ್ರಿಕೆಟ್ ತಂಡದ ಆಟಗಾರ ರಿಷಭ್ ಗರ್ಲ್‌ಫ್ರೆಂಡ್ ತಮ್ಮ ಸೌಂದರ್ಯ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಫೇಮಸ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇವರ ಬಳಿ ಇನ್‌ಸ್ಟಾಗ್ರಾಂನಲ್ಲಿ 4 ಲಕ್ಷ 90 ಸಾವಿರಕ್ಕೂ ಅಧಿಕ ಮಂದಿ ಫಾಲೋವರರ್ಸ್ ಇದ್ದಾರೆ. 27 ವರ್ಷ ವಯಸ್ಸಿನ ಇಶಾ ನೇಗಿ ತನ್ನ ವೃತ್ತಿಯಲ್ಲಿ ಯಶಸ್ಸು ಗಳಿಸಿದ್ದಾರೆ.
ನೋಯ್ಡಾದ ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಹಾಗೇ ಇಂಟಿರಿಯರ್ ಡಿಸೈನಿಂಗ್‌ನಲ್ಲಿ ಪರಿಣಿತಿ ಪಡೆದಿದ್ದಾರೆ. ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಇಶಾ ನೇಗಿ ರಿಷಭ್ ಪಂತ್‌ಗೆ ಪರ್ಫೆಕ್ಟ್ ಮ್ಯಾಚ್ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ. ಅಧಿಕೃತವಾಗಿ ರಿಷಭ್ ಪಂತ್ ಹಾಗೂ ಇಶಾ ನೇಗಿ ತಮ್ಮ ರಿಲೀಷನ್‌ಶಿಪ್ ಬಗ್ಗೆ ಹೇಳಿಕೊಂಡಿಲ್ಲ. ಶೀಘ್ರದಲ್ಲಿಯೇ ಅದನ್ನು ಅನೌನ್ಸ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ.
ರಿಷಭ್ ಪಂತ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾರೆ. ಇದರ ಮಧ್ಯೆನೇ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ಹಾಟ್ ಫೇವರಿಟ್ ಆಗಿದ್ದ ರಿಷಭ್ ಲಕ್ನೋ ತಂಡವನ್ನು ಸೇರಿದ್ದಾರೆ. ಅತೀ ಹೆಚ್ಚು ಮೊತ್ತಕ್ಕೆ ಎಲ್‌ಎಸ್‌ಜಿ ಸೇರಿರುವ ರಿಷಭ್ ಕ್ರೀಡಾ ಲೋಕದಲ್ಲಿ ಕೆಲವು ದಿನಗಳು ಟ್ರೆಂಡಿಂಗ್‌ನಲ್ಲಿ ಇದ್ದರು. ಇವರೊಂದಿಗೆ ಗರ್ಲ್‌ಫ್ರೆಂಡ್ ಇಶಾ ನೇಗಿ ಕೂಡ ಚರ್ಚೆಯಲ್ಲಿದ್ದರು.


Click it and Unblock the Notifications











