ಬಾಯ್‌ಫ್ರೆಂಡ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್; ವಿಡಿಯೋ ಫುಲ್ ವೈರಲ್!

ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಗುತ್ತಿವೆ. ಬಾಲಿವುಡ್‌ನಿಂದ ಸದ್ಯ ದಕ್ಷಿಣಕ್ಕೆ ಕಾಲಿಟ್ಟಿರೋ ಈ ನಟಿ ಕೈಯಲ್ಲಿ ಸದ್ಯ ಎರಡು ಬಿಗ್ ಬಜೆಟ್ ಸಿನಿಮಾಗಳು ಈ ನಟಿಯ ಕೈಯಲ್ಲಿವೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ರೇಂಜ್ ಕೂಡ ಬದಲಾಗಿದೆ.

'ಧಡಕ್' ಸಿನಿಮಾ ಮೂಲಕ ಜಾಹ್ನವಿ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ತಾಯಿಯಂತೆಯೇ ತನ್ನ ಸೌಂದರ್ಯದಿಂದ ಗಮನ ಸೆಳೆದಿದ್ದ ನಟಿ, ಬಳಿಕ ಅಭಿನಯದಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿರುವುದು ಗೊತ್ತೇ ಇದೆ. ಬಾಲಿವುಡ್‌ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಜಾಹ್ನವಿ ಕಪೂರ್ ಈಗ ಟಾಲಿವುಡ್‌ ಕಡೆಗೆ ಮುಖ ಮಾಡಿದ್ದಾರೆ.

Janhavi Kapoor offered prayers in tirupati tirumala-temple on her birthday

RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ ನಟಿಸುತ್ತಿರುವ 'ದೇವರ' ಸಿನಿಮಾದಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಭಾರತದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ. ಸದ್ಯ ಜಾಹ್ನವಿ ಕಪೂರ್ ಇಂದು (ಮಾರ್ಚ್ 6) ತಿರುಪತಿಯಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ಅಷ್ಟಕ್ಕೂ ವಿಶೇಷತೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿದ್ದಕ್ಕೊಂದು ಕಾರಣವಿದೆ. ಇಂದು (ಮಾರ್ಚ್ 6) ಈ ನಟಿ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಬಾಯ್‌ಫ್ರೆಂಡ್ ಜೊತೆ ತಿರುಪತಿ, ತಿರುಮಲಕ್ಕೆ ಬಾಯ್‌ಫ್ರೆಂಡ್ ಜೊತೆ ಭೇಟಿ ಕೊಟ್ಟು ತಿಮ್ಮಪ್ಪನ ಆಶೀರ್ವಾದ ಪಡೆದು ಬಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಜಾಹ್ನವಿ ಕಪೂರ್ ಜೊತೆ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ, ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಓರ್ರಿ ಜೊತೆಯಾಗಿದ್ದರು. ಈ ವೇಳೆ ಜಾಹ್ನವಿ ಕಪೂರ್ ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದರು. ಇತ್ತ ಶಿಖರ್ ಪಹಾರಿಯಾ ಕೂಡ ಪಂಚೆಯಟ್ಟು ಜಾಹ್ನವಿ ಕಪೂರ್ ಜೊತೆ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ಇಬ್ಬರು ದೇವಸ್ಥಾನದಿಂದ ಹೊರಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Janhavi Kapoor offered prayers in tirupati tirumala-temple on her birthday

ಜಾಹ್ನವಿ ಕಪೂರ್ ಹುಟ್ಟುಹಬ್ಬಕ್ಕೆ ಜೂ.ಎನ್‌ಟಿಆರ್ 'ದೇವರ' ತಂಡ ವಿಶೇಷ ಪೋಸ್ಟರ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಹಾರೈಸಿಸಿದ್ದಾರೆ. ಚಿತ್ರತಂಡ ಜಾಹ್ನವಿ ಕಪೂರ್ ಪಾತ್ರದ ಹೊಸ ಲುಕ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಜಾಹ್ನವಿ ಕಪೂರ್ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಎರಡು ಪಾರ್ಟ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, 'ದೇವರ' ಮೊದಲ ಪಾರ್ಟ್ ಇದೇ ವರ್ಷ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ.

ಈ ಹೈ ವೋಲ್ಟೇಜ್ ಸಿನಿಮಾದಲ್ಲಿ ಜೂ.ಎನ್‌ಟಿಆರ್‌ಗೆ ವಿರುದ್ಧ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸದ್ಯ 'ದೇವರ' ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಜಾಹ್ನವಿ ಕಪೂರ್ ಕೂಡ ಸೇರಿಕೊಂಡಿರುವುದರಿಂದ ಬಾಲಿವುಡ್‌ನಲ್ಲೂ ಉತ್ತಮ ಗಳಿಕೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನೊಂದು ಕಡೆ ರಾಮ್ ಚರಣ್ ಸಿನಿಮಾದಲ್ಲೂ ಜಾಹ್ನವಿ ಕಪೂರ್ ನಟಿಸುವುದು ಹುಟ್ಟುಹಬ್ಬದಂದು ಕನ್ಫರ್ಮ್ ಆಗಿದೆ. 'RC16' ತಂಡ ಕೂಡ ಪೋಸ್ಟರ್ ರಿಲೀಸ್ ಮಾಡಿದೆ.

More from Filmibeat

English summary
Janhavi Kapoor birthday celebration in tirupati with boyfriend:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X