'ಗಂಗೂಬಾಯಿ' ಸಿನಿಮಾ ವಿಮರ್ಶೆ ಮಾಡಿದ ಮಲೈಕಾ ಅರೋರಾ, ಜಾನ್ಹವಿ, ವಿಕ್ಕಿ ಕೌಶಲ್, ರಿತೇಶ್
ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಇಂದು (ಫೆ.25) ರಂದು ಬಿಡುಗಡೆಯಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಈಗಾಗಲೇ ಸಿನಿಮಾ ನೋಡಿದ ಜನರು 'ಗಂಗೂಬಾಯಿ' ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ಸೆಲೆಬ್ರೆಟಿಗಳೂ ಕೂಡ ಆಲಿಯಾ ಚಿತ್ರ ನೋಡಿ ವಿಮರ್ಶೆ ಮಾಡಿದ್ದಾರೆ.
ಬಾಲಿವುಡ್ ಸೆಲೆಬ್ರೆಟಿಗಳಿಗಾಗಿಯೇ ಮುಂಬೈನಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಾಲಿವುಡ್‌ನ ಹಾಟ್ ನಟಿ ಮಲೈಕಾ ಅರೋರಾ, ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್, ನಟ ವಿಕ್ಕಿ ಕೌಶಲ್ ಹಾಗೂ ರಿತೇಶ್ ದೇಶ್‌ಮುಖ್ ಬಹುನಿರೀಕ್ಷೆಯ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಹಾಗೂ ಆಲಿಯಾ ಭಟ್ ಪಾತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಆಲಿಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಬಿ-ಟೌನ್ ತಾರೆಯರ ವಿಮರ್ಶೆಗಳನ್ನು ಪೋಸ್ಟ್ ಮಾಡಿದ್ದಾರೆ.

ವಿಕ್ಕಿ ಕೌಶಲ್ ವಿಮರ್ಶೆ
ಬಾಲಿವುಡ್ ನಟ ವಿಕ್ಕಿ ಕೌಶಲ್ ಮದುವೆ ಮೂಡ್‌ನಿಂದ ಹೊರಬಂದಿದು ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಶಾಕ್ ಆಗಿರುವ ವಿಕ್ಕಿ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾ ವಿಮರ್ಶೆ ಮಾಡಿದ್ದಾರೆ. ಈ ಸಿನಿಮಾ ತಳ್ಳಗಿನ ಅದ್ಭುತವೊಂದನ್ನು ಕಂಡು ಶಾಕ್ ಆದೆ. ಸಂಜಯ್ ಲೀಲಾ ಬನ್ಸಾಲಿ ಸರ್ ನೀವು ಮಾಸ್ಟರ್. ಆಲಿಯಾ ಭಟ್ ನಿನಗೆ ಏನು ಹೇಳಬೇಕು ಅನ್ನುವುದೇ ತೋಚುತ್ತಿಲ್ಲ. ಗಂಗೂ ನೀನು ಅತ್ಯದ್ಭುತ. ಹ್ಯಾಟ್ಸ್ ಆಫ್.. ದೊಡ್ಡ ಪರದೆ ಮೇಲೆ ಮ್ಯಾಜಿಕ್ ನಡೆಯುತ್ತಿದೆ. ಮಿಸ್ ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಜಾನ್ಹವಿ ಕಪೂರ್ ಹೇಳಿದ್ದೇನು?
ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಕೂಡ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ನೋಡಿದ್ದಾರೆ. ಆಲಿಯಾ ಭಟ್ ನಟನೆ ಕಂಡು ಕಂಗಾಲಾಗಿದ್ದಾರೆ." ನೀನು ಅದ್ಭುತಕ್ಕೆ ಒಂದು ವ್ಯಾಖ್ಯಾನವಿದ್ದಂತೆ. ಹೃದಯಾಂತರದಿಂದ ಇದು ಸಾಟಿಯಿಲ್ಲದ ಕಲೆ ಮತ್ತು ಕೈ ಚಳಕ. ನೀನು ಗಂಗೂಬಾಯಿಯಾಗಿ ಸಿನಿಮ್ಯಾಟಿಕ್ ಮ್ಯಾಜಿಕ್ ಮಾಡಲು ಯಾವುದಕ್ಕೂ ಕಮ್ಮಿ ಇಲ್ಲದಂತೆ ನಟಿಸಿದ್ದೀಯಾ." ಎಂದು ಜಾನ್ಹವಿ ಕಪೂರ್ ಬರೆದುಕೊಂಡಿದ್ದಾರೆ.

ಮಲೈಕಾ ಒಂದು ಸಾಲಿನ ವಿಮರ್ಶೆ
ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಮಲೈಕಾ ಅರೋರಾ ಹಾಗೂ ಆಲಿಯಾ ಭಟ್ ಒಳ್ಳೆ ಸ್ನೇಹಿತರು. ಇಬ್ಬರ ನಡುವೆ ವಯಸ್ಸಿನ ಅಂತರವಿದ್ದರೂ, ಇಬ್ಬರೂ ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮಲೈಕಾ ಅರೋರಾ ಕೂಡ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ವೀಕ್ಷಿಸಿದ್ದಾರೆ. " ಪಟಾಕಿ ಸಿಡಿಸಿದಂತಹ ಅಭಿನಯ. ಸಿನಿಮಾನೂ ಅದ್ಬುತ." ಎಂದು ಒಂದು ಸಾಲಿನಲ್ಲಿ ವಿಮರ್ಶೆ ಮಾಡಿದ್ದಾರೆ.

ರಣ್‌ಬೀರ್ ಸಹೋದರಿ ಹೇಳಿದ್ದೇನು?
ಆಲಿಯಾ ಭಟ್ ಭಾಯ್‌ಫ್ರೆಂಡ್ ರಣ್‌ಬೀರ್ ಕಪೂರ್ ಸಿನಿಮಾ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಣ್‌ಬೀರ್ ಸಹೋದರಿ ರಿಧಿಮಾ ಕಪೂರ್ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಇಬ್ಬರು ದಿಗ್ಗಜರು ಒಟ್ಟಿಗೆ ಬಂದು ಅದ್ಭುತವಾದುದ್ದನ್ನು ಸೃಷ್ಟಿ ಮಾಡಿದ್ದಾರೆ." ಎಂದು ಹೇಳಿದ್ದಾರೆ. ಬಾವಿ ಸೋಸೆ ಸಿನಿಮಾ ನೋಡಿ ನೀತು ಕಪೂರ್ ಕೂಡ " ಆಲಿಯಾ ಬಾಲ್ ಅನ್ನು ಪಾರ್ಕ್‌ನಿಂದ ಆಚೆ ಕಳಿಸಿದ್ದಾಳೆ." ಎಂದು ಹೇಳಿದ್ದಾರೆ.


Click it and Unblock the Notifications











