Jawan Karnataka BoxOffice: 'ಜವಾನ್' ಕರ್ನಾಟಕದಲ್ಲಿ ದೋಚಿದ್ದೆಷ್ಟು? 4 ದಿನಗಳ ಕಲೆಕ್ಷನ್ ಹೇಗಿದೆ?

ಶಾರುಖ್ ಖಾನ್, ನಯನತಾರಾ ಹಾಗೂ ಆಟ್ಲೀ ಕಾಂಬಿನೇಷನ್ ಸಿನಿಮಾ 'ಜವಾನ್' ಮೆಗಾ ಹಿಟ್ ಲಿಸ್ಟ್ ಸೇರಿದೆ. ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದ ಈ ಸಿನಿಮಾ 5ನೇ ದಿನಕ್ಕೆ ಸಿಕ್ಕಾಪಟ್ಟೆ ಡ್ರಾಪ್ ಕಂಡಿದೆ. ಆದರೂ, ಕಿಂಗ್ ಖಾನ್ ಹೆಸರಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.

ಜವಾನ್ ವಿಶ್ವದಾದ್ಯಂತ ದಾಖಲೆ ಬರೆದಿದೆ. ಕೇವಲ ನಾಲ್ಕು ದಿನಗಳಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅಲ್ಲದೆ ಈ ವರ್ಷ ಸದ್ದು ಮಾಡಿದ ಹಾಲಿವುಡ್ ಸಿನಿಮಾ 'ಬಾರ್ಬಿ' ಹಾಗೂ 'ಓಮನ್‌ಹೈಮರ್'ದ ಕಲೆಕ್ಷನ್ ಅನ್ನು ಉತ್ತರ ಅಮೆರಿಕದಲ್ಲಿ ಹಿಂದಿಕ್ಕಿದೆ. ಇತ್ತ ಭಾರತದ ಮೂಲೆ ಮೂಲೆಯಲ್ಲಿ 'ಜವಾನ್' ಕಿಕ್ ಕೊಟ್ಟಿದೆ.

shah-rukh-khan-jawan-box-office-karnataka

ಬಾಕ್ಸಾಫೀಸ್‌ನಲ್ಲಿ ಇಷ್ಟೊಂದು ಸದ್ದು ಮಾಡುತ್ತಿರುವ 'ಜವಾನ್' ಸಿನಿಮಾ ಕಲೆಕ್ಷನ್ ಕರ್ನಾಟಕದಲ್ಲೇನು ಕಮ್ಮಿಯಿಲ್ಲ. ಶಾರುಖ್ ಖಾನ್ ಸಿನಿಮಾ ಕರ್ನಾಟಕದ ಕೆಲ ಪ್ರೇಕ್ಷಕರಿಗೆ ಇಷ್ಟ ಆಗಿದ್ದರೆ, ಮತ್ತೆ ಕೆಲವರಿಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲೂ ಕಿಂಗ್ ಖಾನ್ ಗೆದ್ದಿರೋದು ವಿಶೇಷ. ಹಾಗಿದ್ದರೆ, 'ಜವಾನ್' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.

ಕರ್ನಾಟಕದಲ್ಲಿ ಪ್ರತಿಕ್ರಿಯೆ ಹೇಗಿದೆ?

ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಯಾವುದೇ ಭಾಷೆಯ ಸಿನಿಮಾ ರಿಲೀಸ್ ಆದರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಹೀಗಾಗಿ ಹಿಂದಿ, ತೆಲುಗು, ತಮಿಳಿನ ಸಿನಿಮಾ ಮಂದಿಗೆ ಕರ್ನಾಟಕ ನೆಚ್ಚಿನ ರಾಜ್ಯಗಳಲ್ಲೊಂದು. 'ಜವಾನ್‌' ಸಿನಿಮಾಗೂ ಕೂಡ ಅದೇ ರೀತಿ ಕರ್ನಾಟಕದಿಂದಲೂ ಲಾಭ ಸಿಕ್ಕಿದೆ. ಮೊದಲ ನಾಲ್ಕು ದಿನಗಳಲ್ಲಿ ಶಾರುಖ್ ಖಾನ್ ಹಾಗೂ ನಯನತಾರಾ ಜೋಡಿಯನ್ನು ತೆರೆಮೇಲೆ ಮುಗಿಬಿದ್ದು ನೋಡಿದ್ದಾರೆ. ಹೀಗಾಗಿ 4 ದಿನಗಳಲ್ಲಿ ಕಲೆಕ್ಷನ್ ಅದ್ಭುತವಾಗಿದೆ.

shah-rukh-khan-jawan-box-office-karnataka

4 ದಿನಗಳ ಕಲೆಕ್ಷನ್ ಎಷ್ಟು?

ಶಾರುಖ್ ಖಾನ್ ಸಿನಿಮಾ 'ಜವಾನ್' ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನು ಬರುತ್ತಿದೆ. ಇದೂವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಮೊದಲ 4 ದಿನಗಳಲ್ಲಿ ಕರ್ನಾಟಕದಲ್ಲೂ ದಾಖಲೆ ಕಲೆಕ್ಷನ್ ಮಾಡಿದೆ. ಅದರಲ್ಲೂ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಿಂದಲೇ ಹೆಚ್ಚು ಕಲೆಕ್ಷನ್ ಆಗಿದೆ. ಅಂದ್ಹಾಗೆ ಕರ್ನಾಟಕದಲ್ಲಿ ಸುಮಾರು 18.80 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಿಂದ ಸಿಕ್ಕಿರೋ ಲೆಕ್ಕ.

ಕರ್ನಾಟಕದಲ್ಲಿ 'ಜವಾನ್' ಕಲೆಕ್ಷನ್

ಮೊದಲ ದಿನ - 4.60 ಕೋಟಿ ರೂ.
2ನೇ ದಿನ - 4.10 ಕೋಟಿ ರೂ.
3ನೇ ದಿನ - 4.90 ಕೋಟಿ ರೂ.
4ನೇ ದಿನ - 5.20 ಕೋಟಿ ರೂ.
ಒಟ್ಟು - 18.80 ಕೋಟಿ ರೂ.

5ನೇ ದಿನ ಜವಾನ್ ಕಲೆಕ್ಷನ್ ಡ್ರಾಪ್

'ಜವಾನ್' ಕ್ರೇಜ್ ಕರ್ನಾಟಕದಲ್ಲೂ ಜೋರಾಗಿಯೇ ಇತ್ತು. ಮೊದಲ ನಾಲ್ಕು ದಿನಗಳಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆದರೆ, 5ನೇ ದಿನ (ಸೆಪ್ಟೆಂಬರ್ 11) ಕರ್ನಾಟಕದಲ್ಲಿ ಮೇಜರ್ ಡ್ರಾಪ್ ಆಗಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿಯೇ ಶೇ. 60ರಷ್ಟು ಡ್ರಾಪ್ ಆಗಿದೆ. ಬಹುತೇಕ ಶೋ ಫಾಸ್ಟ್ ಫಿಲ್ಲಿಂಗ್ ಕೂಡ ಆಗಿಲ್ಲ. ಹೀಗಾಗಿ ಮುಂದಿನ ವೀಕೆಂಡ್‌ವರೆಗೆ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಲೆಕ್ಕಾಚಾರ ಹಾಕಲಾಗುತ್ತಿದೆ.

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?

ಫಿಲ್ಮ್ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯಬಾಲನ್ 'ಜವಾನ್' ನಾಲ್ಕು ದಿನಗಳ ವರ್ಲ್ಡ್‌ ವೈಡ್ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ನಾಲ್ಕು ದಿನಗಳಲ್ಲಿ 'ಜವಾನ್' ಸಿನಿಮಾ 500 ಕೋಟಿ ಕ್ಲಬ್ ಸೇರಿದೆ. ಮೊದಲ ದಿನ 125.05 ಕೋಟಿ ರೂ. 2ನೇ ದಿನ 109.24 ಕೋಟಿ ರೂ. 3ನೇ ದಿನ 140.17 ಕೋಟಿ ರೂ. 4ನೇ ದಿನ 156.80 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಒಟ್ಟು 531 ಕೋಟಿ ರೂಪಾಯಿ ಮಾಡಿದೆ. ಈ ಮೂಲಕ ಒಂದೇ ವರ್ಷದಲ್ಲಿ ಶಾರುಖ್ ಖಾನ್ ನಟಿಸಿದ ಎರಡು ಸಿನಿಮಾಗಳು 'ಪಠಾಣ್' ಹಾಗೂ 'ಜವಾನ್' ಎರಡೂ ಸಿನಿಮಾಗಳೂ 500 ಕೋಟಿ ಕ್ಲಬ್ ಸೇರಿವೆ ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
Shah Rukh Khan, Nayanthara Movie Jawan Box Office Collection in Karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X