Jawan Prevue:"ನಾನ್ ವಿಲನ್ ಆದ್ರೆ.. ನನ್ ಮುಂದೆ ಯಾವ ಹೀರೊನೂ ನಿಲ್ಲಲ್ಲ".. ಯಾರೀ ಜವಾನ್?
ಶಾರುಖ್ ಖಾನ್ ನಟನೆಯ ಮತ್ತೊಂದು ಮೆಗಾ ಸಿನಿಮಾ 'ಜವಾನ್'. ಈ ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದೆ. ತಮಿಳಿನ ಸ್ಟಾರ್ ಡೈರೆಕ್ಟರ್ ಆಟ್ಲೀ ಆಕ್ಷನ್ ಕಟ್ ಹೇಳಿದ್ದು, ರಿಲೀಸ್ ಆದ ಕೆಲವೇ ಕ್ಷಣಗಳಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವುದಕ್ಕೆ ಶುರುಮಾಡಿದೆ.
ಇದೊಂದು ಪಕ್ಕಾ ಹೈ ಆಕ್ಷನ್ ಸಿನಿಮಾ ಅನ್ನೋದು 'ಜವಾನ್' ಝಲಕ್ ನೋಡಿದವರಿಗೆ ಮನವರಿಕೆಯಾಗಿದೆ. ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾ ಆಕ್ಷನ್ ಪ್ರಿಯರಿಗೆ ಹಬ್ಬ. ಆಕ್ಷನ್ ಅಷ್ಟೇ ಅಲ್ಲದೆ, ಎಮೋಷನ್ಸ್ ಕೂಡ ಇದೆ. ಹೀಗಾಗಿ ಶಾರುಖ್ ಫ್ಯಾನ್ಸ್‌ಗೆ 'ಜವಾನ್' ಝಲಕ್ ಹಬ್ಬವೇ ಸರಿ..

ಎಲ್ಲಕ್ಕಿಂತ ಹೆಚ್ಚಾಗಿ ಕಿಂಗ್ ಖಾನ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಈ ಸಿನಿಮಾದಲ್ಲಿ ಶಾರುಖ್ ಖಾನ್ ಖಳನಾಯಕನಾ? ಅಥವಾ ಹೀರೊನಾ? 'ಜವಾನ್' ಪ್ರೀವ್ಯೂ ಇಂತಹದ್ದೊಂದು ಪ್ರಶ್ನೆಯನ್ನಂತೂ ಹುಟ್ಟಾಕಿದೆ. ಸದ್ಯ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ.
'ಜವಾನ್' ವಿಲನ್ Or ಹೀರೊ?
'ಜವಾನ್' ಪ್ರಿವ್ಯೂ ನೋಡಿದವರಿಗೆ 'ಪಠಾಣ್'ಗಿಂತ ಅದ್ಭುತ ಅನಿಸಿದ್ದಂತೂ ನಿಜ. ಶಾರುಖ್ ಒಮ್ಮೆ ವಿಲನ್ ಆಗಿ.. ಮತ್ತೊಮ್ಮೆ ಹೀರೊ ಆಗಿ. ಮಗದೊಮ್ಮೆ ಸಾಮಾನ್ಯನಂತೆ ಕಾಣಿಸಿಕೊಂಡಿದ್ದಾರೆ. ಮಧ್ಯೆ ಆಕ್ಷನ್ ಸೀನ್‌ಗಳು ಮೈಜುಂ ಎನಿಸುತ್ತಿವೆ. ಈ ಮಧ್ಯೆ ಅಭಿಮಾನಿಗಳನ್ನ ಹುಟ್ಟಿಕೊಂಡಿರೋ ಪ್ರಶ್ನೆ ಶಾರುಖ್ ಇಲ್ಲಿ ವಿಲನ್? ಅಥವಾ ಹೀರೋ?.
ನಿರ್ದೇಶಕ ಅಟ್ಲೀ 'ಜವಾನ್' ಪ್ರಿವ್ಯೂ ಆರಂಭದಲ್ಲೇ ಶಾರುಖ್ ಖಾನ್ ಅನ್ನು ವಿಲನ್‌ನಂತೆ ತೋರಿಸಿದ್ದಾರೆ. ಅಲ್ಲದೆ ಅಂತ್ಯದಲ್ಲೂ ವಿಲನ್ ಲುಕ್ ಕೊಟ್ಟಿದ್ದು, ಇಷ್ಟೆಲ್ಲ ಗೊಂದಲಕ್ಕೆ ಕಾರಣ. ಆದರೆ, ಇದೇ ಕನ್ಫ್ಯೂಷನ್‌ನಲ್ಲೇ ಅಭಿಮಾನಿಗಳು ಥ್ರಿಲ್ಲಿಂಗ್ ಟ್ರೈಲರ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಪಾತ್ರಕ್ಕಾಗಿ ಬಾಲ್ಡ್ ಆದ ಶಾರುಖ್
ಇದೂವರೆಗೂ ಶಾರುಖ್ ಖಾನ್ ರೊಮ್ಯಾಂಟಿಕ್ ಹೀರೊ ಆಗಿದ್ದೇ ಹೆಚ್ಚು. ಇತ್ತೀಚೆಗೆ ಆಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾರುಖ್ ಖಾನ್ ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ದು ಬಹುಶ: ಇಲ್ಲವೇ ಇಲ್ಲ. ಆದ್ರೀಗ 'ಜವಾನ್'ಗಾಗಿ ತಲೆ ಬೋಳಿಸಿಕೊಂಡು ಹೊಸ ಲುಕ್ ಕೊಟ್ಟಿದ್ದಾರೆ.
ಈ ಲುಕ್‌ನಲ್ಲಿ ಶಾರುಖ್ ಖಾನ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲೂ 'ಜವಾನ್' ಪ್ರಿವ್ಯೂ ಕೊನೆಯಲ್ಲಿ ಬಾಲ್ಡ್ ಲುಕ್‌ನಲ್ಲಿ ಹಳೇ ಹಾಡಿಗೆ ಹೆಜ್ಜೆ ಹಾಕುವ ಶಾರುಖ್ ಖಾನ್ ಮ್ಯಾನರಿಸಂಗೆ ಥಿಯೇಟರ್‌ನಲ್ಲಿ ಸೂರು ಕಿತ್ತು ಹೋಗುವ ಹಾಗೆ ಶಿಳ್ಳೆಗಳು ಬೀಳುವುದು ಪಕ್ಕಾ.

ಶಾರುಖ್‌ಗೆ ದಿಗ್ಗಜರ ಸಾಥ್
ಬಾಲಿವುಡ್ ಕಿಂಗ್ ಖಾನ್ ವೃತ್ತಿ ಬದುಕಿನ ವಿಭಿನ್ನ ಸಿನಿಮಾ ಆಗುವ ಸಾಧ್ಯತೆಯಿದೆ. ಇನ್ನೊಂದು ಕಡೆ ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವಿಶೇಷ ಅತಿಥಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಅಟ್ಲೀ ನಿರ್ದೇಶನ ಈ ಸಿನಿಮಾ ಈಗಾಗಲೇ ಕ್ರೇಜ್ ಕ್ರಿಯೇಟ್ ಮಾಡಿದೆ. ಜೊತೆಗೆ ಸ್ವತ: ಶಾರುಖ್ ಖಾನ್ ಸಂಸ್ಥೆ ರೆಡ್ ಚಿಲ್ಲೀಸ್ ನಿರ್ಮಾಣ ಮಾಡಿರುವುದರಿಂದ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಸದ್ಯ 'ಜವಾನ್' ಪ್ರಿವ್ಯೂ ಸಿನಿಮಾ ಪ್ರಿಯರನ್ನು ಸೆಳೆಯುತ್ತಿದೆ.


Click it and Unblock the Notifications











