ಪಾಪರಾಜಿಗಳಿಗೆ ಜಯಾ ಬಚ್ಚನ್ ಅವಮಾನ; ಅಮಿತಾಭ್ ಬಚ್ಚನ್ ಕುಟುಂಬ ಬಾಯ್‌ಕಾಟ್
ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಒಂದೊಳ್ಳೆ ಸ್ಥಾನಮಾನವಿದೆ. ಇಂದಿಗೂ ಬಿಗ್ ಬಿ ನೋಡುವುದಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತೆ. ಇಡೀ ಕುಟುಂಬವೇ ಬಾಲಿವುಡ್‌ಗೆ ಸಂಬಂಧ ಪಟ್ಟವರಾಗಿದ್ದರಿಂದ ಚಿತ್ರರಂಗ ಕೂಡ ಇವರ ಮಾತನ್ನು ತೆಗೆದು ಹಾಕುವುದಿಲ್ಲ. ಹೀಗಿರುವಾಗ ಮುಂಬೈನ ಪಾಪರಾಜಿಗಳು ಬಚ್ಚನ್ ಕುಟುಂಬವನ್ನು ಬಾಯ್‌ಕಾಟ್ ಮಾಡುವ ನಿರ್ಧಾರಕ್ಕೆ ಬಂದಿದೆ.
ಅಮಿತಾಭ್ ಪತ್ನಿ ಜಯಾ ಬಚ್ಚನ್ ಆಗಾಗ ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮಾಧ್ಯಮಗಳ ಮೇಲೆ ಕೆಂಗಣ್ಣು ಬೀರುತ್ತಲೇ ಇರುತ್ತಾರೆ. ಇನ್ನು ಇವರ ಕಣ್ಮುಂದೆ ಪಾಪರಾಜಿಗಳು ಕಾಣಿಸಿಕೊಂಡರಂತೂ ಮುಗಿದೇ ಹೋಯ್ತು ಕೆರಳ ಕೆಂಡವಾಗಿಬಿಡುತ್ತಾರೆ. ಇಂತಹದ್ದೇ ಒಂದು ಘಟನೆ ನಡೆದಿದ್ದು, ಮುಂಬೈನಲ್ಲಿರುವ ಪಾಪರಾಜಿಗಳು ಬಚ್ಚನ್ ಕುಟುಂಬವನ್ನೇ ಬಾಯ್‌ಕಾಟ್ ಮಾಡುವುದಕ್ಕೆ ಮುಂದಾಗಿದ್ದಾರೆ.

ಬಾಲಿವುಡ್‌ನ ಹಿರಿಯ ನಟಿ ಹಾಗೂ ರಾಜಕಾರಿಣಿ ಜಯಾ ಬಚ್ಚನ್ ಇತ್ತೀಚೆಗೆ ಪಾಪರಾಜಿಗಳ ಧಿರಿಸನ್ನು ಟೀಕಿಸಿದ್ದರು. ಇದು ಪಾಪರಾಜಿಗಳ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಬಚ್ಚನ್ ಕುಟುಂಬವನ್ನು ಬಾಯ್‌ಕಾಟ್ ಮಾಡುವುದಕ್ಕೆ ಚಿಂತಿಸುತ್ತಿದ್ದಾರೆ. ಇದರಿಂದ ರಿಲೀಸ್‌ಗೆ ರೆಡಿಯಾಗಿರುವ ಜಯಾ ಬಚ್ಚನ್ ಅವರ ಮೊಮ್ಮಗನ ಅಗಸ್ತ್ಯ ನಂದಾ ಸಿನಿಮಾ 'ಇಕ್ಕೀಸ್' ಮೇಲೆ ಪರಿಣಾಮ ಬೀರಬಹುದೆಂಬ ಚರ್ಚೆ ನಡೆಯುತ್ತಿದೆ.
ಅಪ್ಟಕ್ಕೂ ಜಯಾ ಬಚ್ಚನ್ ಪಾಪರಾಜಿಗಳಿಗೆ ಬೇಸರ ಆಗುವಂತಹದ್ದೇನು ಹೇಳಿದರು? ಅನ್ನೋದನ್ನು ನೋಡೋಣ. "ಹೊರಗಡೆ ಡ್ರೈನ್‌ಪೈಪ್‌ನಷ್ಟು ಟೈಟ್ ಆಗಿರುವ ಕೊಳಕು ಪ್ಯಾಂಟ್ ಧರಿಸಿ, ಕೈಯಲ್ಲಿ ಮೊಬೈಲ್ ಹಿಡಿದು ನಿಲ್ಲುತ್ತಾರೆ. ಕೇವಲ ಕೈಯಲ್ಲಿ ಫೋನ್ ಇದೆ ಎಂದ ಮಾತ್ರಕ್ಕೆ ಯಾರ ಫೋಟೋ ಬೇಕಾದರೂ ತೆಗೆಯಬಹುದಾ? ಅದನ್ನು ತಮ್ಮ ಹಕ್ಕು ಎಂದು ತಮ್ಮ ಹಕ್ಕು ಎಂದು ಇವರು ಭಾವಿಸಬಹುದಾ? ಇವರೆಲ್ಲ ಯಾರು? ಎಲ್ಲಿಂದ ಬರುತ್ತಾರೆ? ಅವರಿಗೆ ಏನಿ ಶಿಕ್ಷಣವಿದೆ? ಅವರ ಹಿನ್ನೆಲೆಯೇನು?" ಎಂದು ಸಂದರ್ಶನವೊಂದರಲ್ಲಿ ಜಯಾ ಬಚ್ಚನ್ ಹೇಳಿದ್ದರು. ಅದಕ್ಕೆ ಪಾಪರಾಜಿಗಳು ಗರಂ ಆಗಿದ್ದಾರೆ.

ಪಾಪರಾಜಿಗಳ ಗುಂಪೊಂದು ಜಯಾ ಬಚ್ಚನ್ ಕುಟುಂಬದವರ ಬಗ್ಗೆ ಯಾವುದೇ ಕವರೇಜ್ ಮಾಡದೇ ಇರಲು ಚಿಂತನೆ ನಡೆಸಿದ್ದಾರೆ. ಜಯ ಬಚ್ಚನ್ ಕಮೆಂಟ್‌ಗೆ ಪಾಪರಾಜಿಗಳು " ಎಲ್ಲರೂ ಪಾಪರಾಜಿಗಳಲ್ಲ. ಯೂಟ್ಯೂಬರ್‌ಗಳು, ವ್ಲಾಗರ್‌ಗಳು, ಅಭಿಮಾನಿಗಳು ಕೂಡ ಕೈಯಲ್ಲಿ ಫೋನ್ ಹಾಗೂ ಕ್ಯಾಮರಾ ಹಿಡಿದು ನಿಂತಿರುತ್ತಾರೆ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದು ತಪ್ಪು" ಎಂದು ಆಕ್ರೋಶ ಹೊರಹಾಕಿದ್ದಾರೆ.
ಜನಪ್ರಿಯ ಪಾಪರಾಜಿಗಳಾದ ಪಲ್ಲವ್ ಪಾಲಿವಾಲ್, ವೈರಲ್ ಭಯಾನಿ ಅಂತಹ ಪಾಪರಾಜಿಗಳು ಜಯಾ ಬಚ್ಚನ್ ವಿರುದ್ಧ ಅಸಮಧಾನವನ್ನು ಹೊರ ಹಾಕಿದ್ದಾರೆ. ಅಗಸ್ತ್ಯ ನಂದಾ ನಟಿಸುತ್ತಿರುವ 'ಇಕ್ಕೀಸ್' ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪ್ರಚಾರದ ಕಾರ್ಯಕ್ರಮಗಳಿಗೆ ಹಾಜರಾಗದೇ ಇರಲು ನಿರ್ಧಾರ ಮಾಡಿದ್ದಾರೆ. ಪಾಪರಾಜಿಗಳು ಹಗಲಿರುಳು ದುಡಿಯುತ್ತಾರೆ. ಇಂತಹವರನ್ನು ಅವರ ಧರಿಸಿರುವ ಧಿರಿಸಿನ ಆಧಾರದ ಮೇಲೆ ನಿರ್ಣಯ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಪಾಪರಾಜಿಗಳು ಅಸಮಧಾನ ಹೊರ ಹಾಕಿದ್ದರಿಂದ ಅಮಿತಾಭ್ ಬಚ್ಚನ್ ಕುಟುಂಬದಕ್ಕೆ ನಷ್ಟ ತಂದೊಡ್ಡಬಹುದೆಂದು ಬಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ, ಡಿಸೆಂಬರ್ 25ರಂದು ಅಮಿತಾಭ್-ಜಯಾ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ನಟಿಸಿರುವ 'ಇಕ್ಕೀಸ್' ರಿಲೀಸ್ ಆಗುತ್ತಿದೆ. ಚಿತ್ರತಂಡ ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. ಹೀಗಾಗಿ ಸಿನಿಮಾ ಪ್ರಚಾರಕ್ಕೆ ಹಾನಿಯಾಗಯವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವಿವಾದದ ಬಗ್ಗೆ ಜಯ ಬಚ್ಚನ್, ಅಮಿತಾಭ್ ಬಚ್ಚನ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











